ನಮಸ್ತೆ ಪ್ರಿಯ ಓದುಗರೇ, ಈ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕಂಡು ಬರುವಂತಹ ಮತ್ತು ನಮ್ಮ ಬಾಯಲ್ಲಿ ನೀರು ಬರಿಸುವಂತಹ ಹಣ್ಣು ಅಂದ್ರೆ ಅದು ಕರ್ಭೋಜಾ ಹಣ್ಣು. ಈ ಹಣ್ಣು ನಮ್ಮ ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ಬಹಳ ಪ್ರಯೋಜನ ಆಗುತ್ತದೆ. ಅದ್ರಲ್ಲೂ ಬೇಸಿಗೆ ಕಾಲದಲ್ಲಿ ಈ ಹಣ್ಣು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಏಕೆಂದರೆ ಬೇಸಿಗೆ ಕಾಲದಲ್ಲಿ ನಾವು ಸ್ವಲ್ಪ ಕೆಲಸ ಮಾಡಿದರೂ ದಣಿವು ಉಂಟಾಗುತ್ತದೆ ಜೊತೆಗೆ ಬಾಯಾರಿಕೆ ಕೂಡ ಜಾಸ್ತಿ ಆಗುತ್ತದೆ. ಬೇಸಿಗೆ ಕಾಲದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ಹಲವಾರು ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ. ಹಾಗಿದ್ರೆ ಬೇಸಿಗೆ ಕಾಲದಲ್ಲಿ ಈ ಹಣ್ಣು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಆರೋಗ್ಯಕರ ಉಪಯೋಗಗಳು ಇವೆ ಎಂದು ಇಂದಿನ ಲೇಖನದಲ್ಲಿ ನೋಡೋಣ. ಸ್ನೇಹಿತರೆ ಬೇಸಿಗೆ ಸಮಯದಲ್ಲಿ ನಮ್ಮ ದೇಹಕ್ಕೆ ಸಾಕಷ್ಟು ನೀರಿನ ಅಗತ್ಯ ಇರುತ್ತದೆ ಯಾಕೆಂದ್ರೆ ಬಿಸಿಲಿನ ಓಡೆತಕ್ಕೆ ನಮ್ಮ ದೇಹದಲ್ಲಿ ಹೆಚ್ಚು ಬೆವರು ಹೊರಗೆ ಹೋದಾಗ ನಮ್ಮ ದೇಹಕ್ಕೆ ಸಾಕಷ್ಟು ನೀರಿನ ಅಗತ್ಯ ಇದ್ದೇ ಇರುತ್ತದೆ.

ಆದರೆ ಪ್ರತಿ ಬಾರಿಯೂ ಕೂಡ ನೀರು ಕುಡಿಯಲು ಆಗುವುದಿಲ್ಲ ಹಾಗಾಗಿ ನಾವು ಸಾಕಷ್ಟು ಲಿಕ್ವಿಡ್ ಫುಡ್ ಗಳನ್ನ ಮತ್ತು ಹಣ್ಣು ಹಂಪಲು ಗಳನ್ನ ಸೇವನೆ ಮಾಡಬೇಕಾಗುತ್ತದೆ. ಅದ್ರಲ್ಲಿ ಕರ್ಭೂಜಾ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮಲ್ಲಿ ಬಾಯಾರಿಕೆ ನೀಗಿಸುತ್ತದೆ ಜೊತೆಗೆ ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹಾಗೂ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೌದು ! ಈ ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ಷಮತೆ ಇದೆ. ಇದಕ್ಕೆ ಕಾರಣ ಏನೆಂದರೆ ಇದರಲ್ಲಿ ವಿಟಮಿನ್ ಸಿ ಎಂಬ ಪ್ರಮುಖ ಪೋಷಕಾಂಶ ಇದೆ. ಈ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ರಕ್ತ ಕಣಗಳು ಉತ್ಪತ್ತಿ ಆಗುತ್ತವೆ. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಮಗೆ ಯಾವ ರೀತಿಯ ಕಾಯಿಲೆಗಳು ಬರುವುದರಿಂದ ಇದು ತಡೆಗಟ್ಟುತ್ತದೆ. ಇನ್ನೂ ಈ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಪಚನ ಕ್ರಿಯೆ ಉತ್ತಮವಾಗುತ್ತದೆ. ಯಾಕೆಂದ್ರೆ ಇದರಲ್ಲಿ 90% ನೀರಿನ ಅಂಶ ಇರುವುದರಿಂದ ಇದು ನಮ್ಮ ಜೀರ್ಣ ಕ್ರಿಯೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಯಾರಿಗೆ ಮಲಬದ್ದತೆ ಸಮಸ್ಯೆ ಇರುತ್ತದೆ ಅಂಥವರು ಈ ಹಣ್ಣನ್ನು ಸೇವನೆ ಮಾಡುವುದರಿಂದ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ.

ನಿಮಗೆ ಏನಾದರೂ ಜೀರ್ಣ ಕ್ರಿಯೆ ಅಥವಾ ಮಲಬದ್ದತೆ ಇದ್ದರೆ ನೀವು ಕರ್ಭೂಜ ಹಣ್ಣನ್ನು ಸೇವನೆ ಮಾಡುವುದರಿಂದ ಈ ಎರಡು ಸಮಸ್ಯೆಗಳು ಸರಿ ಹೋಗುತ್ತದೆ. ಇದರಲ್ಲಿ ನೀರಿನ ಅಂಶ ಉತ್ತಮವಾಗಿದ್ದು, ಇದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾದ ಖನಿಜಾಂಶಗಳು ಸಿಕ್ಕಂತೆ ಆಗುತ್ತದೆ. ಅದ್ರಲ್ಲೂ ಮುಖ್ಯವಾಗಿ ನಮ್ಮ ಜಠರದಲ್ಲಿ ಜೀರ್ಣ ಕ್ರಿಯೆ ತಡೆಗಟ್ಟುವ ಅಸಿಡಿಟಿ ನ ಕೂಡ ನಿವಾರಿಸುತ್ತದೆ. ಈ ಹಣ್ಣನ್ನು ಬೇಸಿಗೆ ಕಾಲದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರ ಹಾಕಿ ಅವಶ್ಯವಿಲ್ಲದ ಹೆಚ್ಚಿನ ನೀರಿನ ಅಂಶವನ್ನು ಕೊರಗೆ ಹಾಕುತ್ತದೆ. ಇದರಿಂದ ಮೂತ್ರ ಪಿಂಡದ ಸಮಸ್ಯೆಗಳು ದೂರಾಗಿ ಕಿಡ್ನಿಗಳು ಕೂಡ ಆರೋಗ್ಯವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ನಮ್ಮ ದೇಹದ ಸಂಪೂರ್ಣ ಆರೋಗ್ಯ ವೃದ್ಧಿಗಾಗಿ ಆಂಟಿ ಆಕ್ಸಿಡೆಂಟ್ ಗಳು ಸಾಕಷ್ಟು ಅವಶ್ಯಕ ಆಗಿರುತ್ತವೆ. ನಮ್ಮ ದೇಹದ ಚರ್ಮದ ಹೊಳಪು, ಕಣ್ಣಿನ ಆರೋಗ್ಯ, ಮೂಳೆಗಳ ಆರೋಗ್ಯ ಇತ್ಯಾದಿ ಆರೋಗ್ಯಕ್ಕೆ ಆಂಟಿ ಆಕ್ಸಿಡೆಂಟ್ ಗಳ ಸಹಾಯದಿಂದ ಆಗುತ್ತದೆ. ಈ ಹಣ್ಣಿನಲ್ಲಿ ಬೀಟಾ ಕೆರೋಟಿನ್, ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ವಿಟಮಿನ್ ಸಿ ಹಾಗೂ ವಿಟಮಿನ್ ಏ ಅಂಶಗಳು ಸಾಕಷ್ಟಿವೆ. ಹಾಗಾಗಿ ಎಲ್ಲಾ ರೀತಿಯಾಗಿ ಪೌಷ್ಟಿಕಾಂಶ ಸಿಗುವಂತಹ ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಿ ಆರೋಗ್ಯ ದಿಂದ ಇರಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *