ನಮಸ್ತೇ ಪ್ರಿಯ ಓದುಗರೇ, ಪ್ರಕೃತಿಯಲ್ಲಿ ಸಿಗುವ ಹಣ್ಣುಗಳು ತರಕಾರಿಗಳು ಸೊಪ್ಪುಗಳು ನಮ್ಮ ಆರೋಗ್ಯಕ್ಕೆ ಎಷ್ಟೊಂದು ಲಾಭಗಳನ್ನು ನೀಡುತ್ತವೆ ಮತ್ತು ಆರೋಗ್ಯವನ್ನು ವೃದ್ಧಿಸುತ್ತದೆ ಅನ್ನುವುದರ ಬಗ್ಗೆ ಕಲ್ಪನೆ ಕೂಡ ಇರುವುದಿಲ್ಲ ಹಾಗೂ ಊಹಿಸಲೂ ಸಾಧ್ಯವಾಗುವುದಿಲ್ಲ. ಕೆಲವೊಂದು ಬಾರಿ ಔಷಧಗಳಿಂದ ಸಿಗದ ಪ್ರಯೋಜನಗಳು ಕೆಲವೊಂದು ಇಂತಹ ಹಣ್ಣು ಹಂಪಲುಗಳಿಂದ ತರಕಾರಿಗಳಿಂದ ನಮಗೆ ಸಿಗುತ್ತದೆ. ಅಂಥಹ ಅದ್ಭುತವಾದ ತರಕಾರಿಯಲ್ಲಿ ಸೋರೆಕಾಯಿ ಕೂಡ ಒಂದಾಗಿದೆ. ಈ ಸೋರೆಕಾಯಿಯನ್ನು ಯಾಕೆ ಸೇವನೆ ಮಾಡಬೇಕು ಇದರಿಂದ ದೇಹಕ್ಕೆ ಲಾಭವಾದರೂ ಏನು ಅನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ಬೇಸಿಗೆ ಕಾಲದಲ್ಲಿ ಮುಖ್ಯವಾಗಿ ಈ ಸೋರೆಕಾಯಿ ಪಲ್ಯ ಸೇವನೆ ಮಾಡುವುದು ಬಹಳ ಸೂಕ್ತ. ದೇಹದಲ್ಲಿ ಉಷ್ಣಾಂಶ ಹೆಚ್ಚಾದಂತೆ ನೀರಿನ ಪ್ರಮಾಣವು ಕಡಿಮೆ ಆಗುತ್ತದೆ. ಇದರಿಂದ ಸ್ಕಿನ್ ಅಲರ್ಜಿ ಮುಂತಾದ ಸಮಸ್ಯೆಗಳು ಶುರು ಆಗುತ್ತವೆ. ದೇಹವು ನಿರ್ಜಲೀಕರಣ ಹಂತಕ್ಕೆ ಹೋಗುತ್ತದೆ. ಆಗ ಇದನ್ನು ತಡೆಯಲು ಹೆಚ್ಚು ನೀರಿನ ಅಂಶವಿರುವ ಆಹಾರವನ್ನು ತರಕಾರಿಯನ್ನು ಹಣ್ಣುಗಳನ್ನು ಸೇವನೆ ಮಾಡಬೇಕು.

ಅವುಗಳಲ್ಲಿ ಸೋರೆಕಾಯಿ ಬಹಳ ನೀರಿನ ಅಂಶವನ್ನು ಹೊಂದಿರುವ ಕಾರಣ ದೇಹವನ್ನು ಹೆಚ್ಚಾಗಿ ತಂಪು ಇಡಲು ಬಹಳ ಸಹಾಯ ಮಾಡುತ್ತದೆ. ಪ್ರತಿ ದಿನವೂ ಬೆಳಿಗ್ಗೆ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಮತ್ತು ಹೊಟ್ಟೆಗೆ ಸಂಭಂದಪಟ್ಟ ಎಲ್ಲ ಬಗೆಯ ಸಮಸ್ಯೆಗಳನ್ನು ಹೊಡೆದೋಡಿಸುತ್ತದೆ. ಸೋರೆಕಾಯಿಯಿಂದ ದೇಹಕ್ಕೆ ಕಡಿಮೆ ಕ್ಯಾಲೋರಿಗಳು ಸಿಗುತ್ತವೆ ಎಂದು ಹೇಳಬಹುದು. ಜೊತೆಗೆ ನಾರಿನ ಅಂಶ ಇದರಲ್ಲಿ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ. ನಿಮ್ಮ ಹೊಟ್ಟೆ ಹಸಿವಿನ ನಿವಾರಣೆ ಮಾಡುವ ಜೊತೆಗೆ ಹೆಚ್ಚಿನ ನಾರಿನ ಅಂಶ ನೀವು ಸೇವನೆ ಮಾಡಿದ ಆಹಾರವನ್ನು ಅಚ್ಚುಕಟ್ಟಾಗಿ ಜೀರ್ಣ ಮಾಡುತ್ತದೆ. ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹವನ್ನು ಯಾವಾಗ್ಲೂ ಉಲ್ಲಸದಾಯಕವಾಗಿರಿಸುತ್ತದೆ. ಮತ್ತು ದೇಹವನ್ನು ಉಷ್ಣತೆಯಿಂದ ಪಾರು ಮಾಡುತ್ತದೆ. ಮತ್ತು ದಿನಪೂರ್ತಿ ತಾಜಾತನದಿಂದ ಇರಲು ಸಹಾಯ ಮಾಡುತ್ತದೆ. ಇದರ ರಸಕ್ಕೆ ಸ್ವಲ್ಪ ಜೀರಿಕೆ ಮತ್ತು ಉಪ್ಪು ಹಾಕಿ ಕುಡಿದರೆ ಬಹಳ ಒಳ್ಳೆಯದು. ಇನ್ನೂ ಸೋರೆಕಾಯಿ ರೊಟ್ಟಿಯನ್ನು ಪಲ್ಯವನ್ನು ಚಟ್ನಿಯನ್ನು ಮಾಡಿ ಕೂಡ ನೀವು ಸೇವನೆ ಮಾಡಬಹುದು.

ಇನ್ನೂ ಮುಖ್ಯವಾಗಿ ಸೋರೆಕಾಯಿ ಅನ್ನು ಮೊಸರು ಅಥವಾ ಮಜ್ಜಿಗೆ ಜೊತೆಗೆ ಬೆರೆಸಿ ತಿನ್ನಬಹುದು ಹೀಗೆ ಮಾಡುವುದರಿಂದ ಅತಿಸಾರ ಬೇಧಿ ಕಡಿಮೆ ಆಗುತ್ತದೆ. ಅಂಥಹ ಸಮಯದಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ತುಂಬಾ ಇರುವ ಕಾರಣ ಸೋರೆಕಾಯಿ ಪಲ್ಯ ಮಾಡಿಕೊಂಡು ಅಥವಾ ಜ್ಯೂಸ್ ಮಾಡಿಕೊಂಡು ಸ್ವಲ್ಪ ಉಪ್ಪು ಹಾಕಿ ಕುಡಿದರೆ ನೀರಿನಾಂಶ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಹೊಟ್ಟೆ ತುಂಬುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯಕಾರಿ. ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಕಡಿಮೆ ಕೊಬ್ಬಿನ ಅಂಶವಿರುವುದರಿಂದ ದೇಹದ ತೂಕ ಆದಷ್ಟು ಬೇಗನೆ ಕಡಿಮೆ ಆಗುತ್ತದೆ.ಇನ್ನೂ ನಿಮ್ಮ ಕೂದಲು ಬಹಳ ಉದುರುತ್ತಿದ್ದರೆ, ನೀವು ಸೋರೆಕಾಯಿ ಜ್ಯೂಸ್ ಗೆ ಎರಡು ಚಮಚ ನೆಲ್ಲಿಕಾಯಿ ಪುಡಿ ಹಾಕಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಂಡು ತಲೆ ಕೂದಲಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತಲೆ ಸ್ನಾನ ಮಾಡಿ. ಹೀಗೆ ಸತತವಾಗಿ ವಾರದಲ್ಲಿ 2-3 ಬಾರಿ ಮಾಡಿದರೆ ಸಾಕು ನಿಮ್ಮ ಕೂದಲು ಸೊಂಪಾಗಿ ದಟ್ಟವಾಗಿ ಬೆಳೆಯುತ್ತವೆ. ಸೋರೆಕಾಯಿ ಚಿಕ್ಕದಾಗಿ ಕತ್ತರಿಸಿ ನಿಮ್ಮ ಪಾದಗಳಿಗೆ ಹಚ್ಚುವುದರಿಂದ ಟೈಫಾಯಿಡ್ ಜ್ವರದಿಂದ ಮುಕ್ತಿ ಸಿಗುತ್ತದೆ ಹಾಗೂ ಆರಾಮದಾಯಕ ಅನ್ನಿಸುತ್ತದೆ. ಟೈಫಾಯಿಡ್ ಸಮಸ್ಯೆಗೆ ಸೋರೆಕಾಯಿ ರಾಮಬಾಣ ಅಂತ ಹೇಳಬಹುದು.
ಇನ್ನೂ ನಿಮಗೆ ಸೋಂಕು ಗಾಯ ನೋವು ತುರಿಕೆ ಆಗುತ್ತಿದ್ದರೆ ಆ ಜಾಗದಲ್ಲಿ ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ಅಲೋವೆರಾ ಜೆಲ್ ಹಾಕಿ ಗಾಯದ ಮೇಲೆ ಹಚ್ಚಿ ನೋಡಿ. ಗಾಯ ತುರಿಕೆ ನೋವು ಮಂಗಮಾಯ ಆಗುತ್ತದೆ. ಶುಭದಿನ.

Leave a Reply

Your email address will not be published. Required fields are marked *