ನಮಸ್ತೆ ಪ್ರಿಯ ಓದುಗರೇ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಹೀಗೆ ಹಲವಾರು ಧರ್ಮಿಯರು ಒಂದೇ ಸೂರಿನಡಿ ಬದುಕುತ್ತಿರುವ ದೇಶ ಅಂದ್ರೆ ಅದು ನಮ್ಮ ಭಾರತ ದೇಶ. ಈ ದೇಶದಲ್ಲಿ ಕಟ್ಟಿರುವ ಗುಡಿ ಗೋಪುರ ಗಳಿಗೆ ಲೆಕ್ಕವೇ ಇಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಅತ್ಯಂತ ಶಕ್ತಿಶಾಲಿ ಆದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ದರ್ಶನ ಮಾಡಿ ಪುನೀತರಾಗೋಣ. ಸಾಮಾನ್ಯವಾಗಿ ಹಿಂದೂ ದೇವಾಲಯಗಳನ್ನು ಹಿಂದೂ ಧರ್ಮೀಯರು ಕಟ್ಟಿಸಿರುವ ಬಗ್ಗೆ ನಾವು ಕೆಳಿರ್ಥಿವಿ. ಆದ್ರೆ ದುರ್ಗಾ ಪರಮೇಶ್ವರಿಯ ಈ ದೇವಾಲಯವನ್ನು ಮುಸ್ಲಿಂ ವ್ಯಾಪಾರಿ ಒಬ್ಬರು ಕಟ್ಟಿಸಿದ್ದಾರೆ. ಇದೆ ಕಾರಣದಿಂದಾಗಿ ಈ ಕ್ಷೇತ್ರ ಹೆಚ್ಚು ಪ್ರಸಿದ್ಧಿ ಆಗಿದ್ದು, ಬಪ್ಪನಾಡು ಡಿನ ಡೋಲು ಹೆಚ್ಚು ಕ್ಯಾತಿ ಆಗಿದೆ. ಹಾಗಾಗಿ ಈ ದೇವಾಲಯದ ಆವರಣದಲ್ಲಿ ಬಹಳಷ್ಟು ಡೋಲು ಗಳನ್ನಾ ನಾವು ಕಾಣಬಹುದು. ಬೇರೆಲ್ಲಾ ಕ್ಷೇತ್ರಗಳಲ್ಲಿ ಜಗನ್ಮಾತೆ ಯು ವಿಗ್ರಹ ರೂಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ರೆ ಈ ಕ್ಷೇತ್ರದಲ್ಲಿ ದುರ್ಗಾ ಪರಮೇಶ್ವರಿ ಯು ಲಿಂಗ ರೂಪದಲ್ಲಿ ನೆಲೆ ನಿಂತಿದ್ದಾಳೆ. ಇಲ್ಲಿನ ಪಾಲಿ ಪೀಠದ ಮೇಲೆ ದೇವಿಯ ಐದು ಲಿಂಗಗಳು ಇದ್ದು, ಆ ಲಿಂಗಗಳನ್ನು ಮೂಲ ದುರ್ಗಾ, ಅಗ್ನಿ ದುರ್ಗಾ, ಜಲ ದುರ್ಗಾ, ವನ ದುರ್ಗಾ, ಆಗ್ರ ದುರ್ಗಾ ಎಂದು ಕರೆಯಲಾಗುತ್ತದೆ. ಈ ದೇಗುಲಕ್ಕೆ ಬಂದು ದೇವಿಗೆ ಹರಕೆ ಹೊತ್ತರೆ ವ್ಯಾಪಾರ ಸಮಸ್ಯೆ, ವೈವಾಹಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ಬಗೆಯ ಸಮಸ್ಯೆಗಳು ಆ ತಾಯಿಯ ಅನುಗ್ರಹದಿಂದ ದೂರ ಆಗುತ್ತೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ಅಚಲವಾದ ನಂಬಿಕೆ ಆಗಿದೆ.
ಇನ್ನೂ ಈ ಕ್ಷೇತ್ರದಲ್ಲಿ ಮುಸ್ಲಿಂ ವ್ಯಾಪಾರಿ ದೇವಿಗೆ ದೇವಾಲಯವನ್ನು ಕಟ್ಟಿಸಿರೋ ಹಿಂದೆ ಒಂದು ರೋಚಕ ಘಟನೆ ಇದೆ. ಬಹಳ ಹಿಂದೆ ಕೇರಳದ ಮುಸ್ಲಿಂ ವ್ಯಾಪಾರಿ ಆಗಿದ್ದ, ಬಪ್ಪ ಬ್ಯಾರಿ ಅವರು ಒಮ್ಮೆ ವ್ಯಾಪಾರದ ಕಾರಣಕ್ಕೆ ಇಲ್ಲಿರುವ ಶಾಂಭವಿ ನದಿಯ ಮೂಲಕ ನೌಕಾ ಯಾನ ಮಾಡುತ್ತಿದ್ದರು ಆ ಸಮಯದಲ್ಲಿ ಪ್ರವಾಹಕ್ಕೆ ಬಪ್ಪ ಅವರ ಹಡಗು ಸಿಲುಕಿತು ಇದರಿಂದ ದಿಕ್ಕು ತೋಚದೆ ಕಂಗಾಲಾಗಿದ್ದ ಬಪ್ಪ ಅವರಿಗೆ ಭಕ್ತ ನಾನು ಈ ನದಿಯಲ್ಲಿ ಲಿಂಗ ರೂಪದಲ್ಲಿ ಬೆಳೆಸಿದ್ದೇನೆ. ನೀನು ನನಗೆ ದೇವಸ್ಥಾನ ಕಟ್ಟಿಸು ನಿನಗೆ ಎಲ್ಲಾ ಒಳ್ಳೆಯದು ಆಗುತ್ತೆ ಎನ್ನುವ ದೇವಿಯ ಅಶರೀರ ವಾಣಿ ಕೇಳಿಸಿತು. ಈ ಮಾತನ್ನು ಕೇಳಿದ ಮೇಲೆ ಬಪ್ಪ ಅವರು ನದಿಯನ್ನು ಈಜಿಕೊಂಡು ಬಂದು ಮುಂದೆ ದೇವಿಗೆ ದೇವಾಲಯವನ್ನು ಕಟ್ಟಿಸಿದ ಎಂದು ಹೇಳಲಾಗುತ್ತದೆ. ಬಪ್ಪ ಬಿಯಾರಿ ಈ ದೇವಾಲಯವನ್ನು ನಿರ್ಮಿಸುವು ಧರಿಂದ ಈ ದೇವಾಲಯವನ್ನು ಬಪ್ಪನಾಡು ಎಂದೇ ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಗೆ ಬಿಸಿ ನೀರಿನ ಜಳಕ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಸ್ವರ್ಣಲಂಕರ ಮಾಡಲಾಗುತ್ತದೆ. ರಥೋತ್ಸವದಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧ ಭಾವ ಇಲ್ಲದೆ ಎಲ್ಲಾ ಧರ್ಮದ ಜನರು ಸೇರಿ ದೇವಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಬ್ರಹ್ಮ ರಥೋತ್ಸವ ದ ಮಹಾ ಪೂಜೆ ನಂತರ ದೇವಿಯ ಮೊದಲ ಪ್ರಸಾದವನ್ನು ಬಪ್ಪ ಬ್ಯಾರಿ ಕುಟುಂಬಕ್ಕೆ ನೀಡುವುದು ತಲತಲಾಂರದಿಂದ ನಡೆದುಕೊಂಡು ಬಂದಿದೆ. ಈ ದೇವಸ್ಥಾನದಲ್ಲಿ ಯುಗಾದಿ, ನರಸಿಂಹ ಜಯಂತಿ, ನಾಗರ ಪಂಚಮಿ, ಮೂಡುವಾಡು ಉತ್ಸವ, ಶಯನ ರಾತ್ರಿ, ಆಯುಧ ಉತ್ಸವ, ಕೊಪ್ಪಲೋತ್ಸವ, ದೀಪೋತ್ಸವ ಮುಂತಾದ ಉಸ್ಥಾವಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಶಕ್ತಿಶಾಲಿ ಆದ ದುರ್ಗಾ ಪರಮೇಶ್ವರಿ ಅಮ್ಮನವರನ್ನು ಬೆಳಿಗ್ಗೆ 5.30 ರಿಂದ ಮಧ್ಯಾನ 2 ಗಂಟೆ ವರೆಗೆ, ಸಂಜೆ 4 ರಿಂದ ರಾತ್ರಿ 9 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ಕುಂಕುಮಾರ್ಚನೆ, ಕಾರ್ತಿಕ ಪೂಜೆ, ಕರ್ಪೂರದ ಆರತಿ, ಶ್ರೀದೇವಿ ಪಾರಾಯಣ, ಕ್ಷೀರ ಪಾಯಸ ಸೇವೆ, ಹೂವಿನ ಪೂಜೆ, ಅಲಂಕಾರ ಪೂಜೆ, ಲಲಿತಾ ಸಹಸ್ರಾ ನಾಮಾರ್ಚನೆ ಮುಂತಾದ ಸೇವೆಗಳನ್ನು ಮಾಡಿಸಬಹುದು. 1001 ರೂಪಾಯಿ ಕೊಟ್ಟು ಶಾಶ್ವತ ಸೇವಾ ಪೂಜೆ ಸಹ ಮಾಡಿಸಬಹುದು. ದುರ್ಗಾ ಪರಮೇಶ್ವರಿ ಯ ಈ ದೇವಾಲಯವು ಮೂಲ್ಕಿ ಪಟ್ಟಣದ ಲ್ಲಿ ಇದೆ. ಈ ಪುಣ್ಯ ಕ್ಷೇತ್ರವೂ ಬೆಂಗಳೂರಿನಿಂದ 374 ಕಿಮೀ, ಶಿವಮೊಗಗದಿಂದ 175 ಕಿಮೀ, ಮಂಗಳೂರಿನಿಂದ 26 ಕಿಮೀ, ಉಡುಪಿಯಿಂದ 30 ಕಿಮೀ ದೂರದಲ್ಲಿದೆ. ಉಡುಪಿ ಮತ್ತು ಮಂಗಳೂರಿಗೆ ರಾಜ್ಯದ ಹಲವಾರು ಭಾಗಗಳಿಂದ ಕರ್ನಾಟಕ ಬಸ್ ಸಾರಿಗೆ ಸೌಲಭ್ಯ ಇದೆ. ಸಾಧ್ಯವಾದರೆ ಅಮ್ಮನವರ ದರ್ಶನ ಪಡೆದು ಅವಳ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.