ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ದೇಶದ ಎಲ್ಲಾ ದೇವಸ್ಥಾನಗಳಲ್ಲಿ ವರ್ಷಕ್ಕೆ ಒಮ್ಮೆ ದೇವರ ಜಾತ್ರಾ ಮಹೋತ್ಸವ ವನ್ನಾ ನಡೆಸಲಾಗುತ್ತದೆ. ಆದ್ರೆ ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ವೂ ಬೇರೆಲ್ಲಾ ಜಾಥ್ರೆಗಳಿಗಿಂತ ತುಂಬಾನೇ ಭಿನ್ನವಾಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಶಿರಸಿಯ ಶಕ್ತಿ ದೇವತೆಯಾದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಕುರಿತು ಒಂದಿಷ್ಟು ವಿಶೇಷ ಮಾಹಿತಿಗಳನ್ನು ಪಡೆದುಕೊಂಡು ಬರೋಣ. ಜಗದ ಜನನಿ ಆದ ಮಾರಿಕಾಂಬಾ ದೇವಿಯು ಶಿರಸಿಯಲ್ಲಿ ನೆಲೆ ನಿಂತು ತನ್ನ ಬಳಿ ಬರುವ ಭಕ್ತರನ್ನು ಹರಸುತ್ತಿದ್ದಳೆ. ಸಾಕಷ್ಟು ಮನೆಗಳಿಗೆ ಕುಲ ದೇವತೆ ಆಗಿರೋ ಈ ದೇವಿಯ ಮಹಿಮೆ ಅಪಾರ. ನಮ್ಮ ಕರ್ನಾಟಕದಲ್ಲಿ ಇರುವ ಸಾಕಷ್ಟು ಶಕ್ತಿ ಪೀಠಗಳ ಪೈಕಿ ಶಿರಸಿಯ ಸಿರಿದೇವಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನ ಕೂಡ ಒಂದಾಗಿದ್ದು, ಈ ದೇವಿಯ ವಿಗ್ರಹ ವೂ ಕೆರೆಯೊಂದರಲ್ಲಿ ಸಿಕ್ಕಿತು ಎಂಬ ಮಾತು ಇದೆ. 1888 ರಾಲ್ಲಿ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ತಾಯಿ ಮಾರಿಕಾಂಬಾ ದೇವಿಯ ವಿಗ್ರಹ ವೂ 7 ಅಡಿ ಎತ್ತರವಿದ್ದು, ದೇವಿಯ ವಿಗ್ರಹವನ್ನು ಮರದಿಂದ ಕೆತ್ತಲಾಗಿದೆ. 8 ಕೈಗಳನ್ನು ಹೊಂದಿದ ಈ ಶಕ್ತಿ ಸ್ವರೂಪಿಣಿ 8 ಕೈಗಳಲ್ಲಿ ಒಂದೊಂದು ಬಗೆಯ ಆಯುಧಗಳನ್ನು ಹೊಂದಿ ಸರ್ವ ಆಭರಣ ಭೋಷಿಥೆ ಆಗಿ ಅರಳಿದ ಕಣ್ಣುಗಳಿಂದ ತನ್ನ ಬಳಿ ಸಂಕಷ್ಟಗಳನ್ನು ಹೊತ್ತು ಬರುವ ಭಕ್ತರನ್ನು ಉದ್ಧರಿಸುತ್ತ ಇದ್ದಾಳೆ. ಇನ್ನೂ ಮಾರಿಕಾಂಬಾ ದೇವಿಯಷ್ಟೇ ಪ್ರಸಿದ್ಧ ಆಗಿರೋದು ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ. ಕರ್ನಾಟಕದ ಅತೀ ದೊಡ್ಡ ಜಾತ್ರೆಗಳ ಸಾಲಿನಲ್ಲಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರ ಆಗ್ರ ಸ್ಥಾನದಲ್ಲಿ ಇದೆ. ಈ ಜಾತ್ರೆಯ ಇನ್ನೊಂದು ವಿಶೇಷ ಎಂದು ಆದ್ರೆ ಮಾರಿ ಜಾತ್ರೆ ಇರುವ ವರ್ಷ ಇಡೀ ಶಿರಸಿ ಯಲ್ಲಿ ಹೋಳಿ ಹುಣ್ಣಿಮೆ ಹಬ್ಬವನ್ನು ಆಚರಿಸುವುದಿಲ್ಲ. ಹೋಳಿ ಹುಣ್ಣಿಮೆ ದಿನ ನಡೆಯುವ ಬೇಡರ ಉತ್ಸವ ಕೂಡ ನಾವು ಜಾತ್ರೆ ಸಮಯದಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ. ಹಾಗೂ ಜಾತ್ರೆ ಇದ್ದ ವರ್ಷದಲ್ಲಿ ಎಲ್ಲೊ ಕಾಮನ ಮೂರ್ತಿಯನ್ನು ಪ್ರತಿಷ್ಠಾಪಿಸು ವುದಿಲ್ಲ ಹಾಗೂ ಬಣ್ಣದ ಆಟವನ್ನು ಕೂಡ ಅಡೋಡಿಲ್ಲ.
ಅಲ್ಲದೆ ಬೇರೆ ದೇವಸ್ಥಾನಗಳಲ್ಲಿ ದೇವರ ಮೂಲ ವಿಗ್ರಹದ ಬದಲು ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಆದ್ರೆ ಮಾರಿಕಾಂಬಾ ದೇವಿಯ ಮೂಲ ವಿಗ್ರಹವನ್ನೆ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿ ತಾಯಿಯನ್ನು ಭಕ್ತರ ದರ್ಶನಕ್ಕೆ ಬಿದಕಿ ಬೈಲಿನ ಗದ್ದುಗೆಯಲ್ಲಿ ಕುಳ್ಳಿರಿಸಿ ಸಲಾಗುತ್ತದೆ. ಇದು ಶಿರಸಿ ಜಾತ್ರೆಯ ವಿಶೇಷ ಆಗಿದ್ದು, ಗದ್ದುಗೆ ಮೇಲೆ ಸರ್ವಂಕೃತ ಬೋಶಿತೇ ಆಗಿ ಇರುವ ಈ ದೇವಿಯನ್ನು ಕಣ್ಣು ತುಂಬಿಕೊಳ್ಳಲು ಲಕ್ಷಾಂತರ ಮಂದಿ ಶಿರಸಿಗೆ ಆಗಮಿಸುತ್ತಾರೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ಮೊದಲೆಲ್ಲ ಮಾರಿ ಜಾತ್ರೆಯಲ್ಲಿ ಕೋಣದ ರುಂಡವನ್ನು ಕಡಿದು ದೇವಿಯನ್ನು ಸಂತುಷ್ಟಿ ಗೊಳಿಸಲಾಗುತ್ತಿತ್ತು. ಆದ್ರೆ 1933 ರಾಲಿ ಗಾಂಧೀಜಿ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿನ ಕೋಣ ಬಳಿಯ ಪದ್ಧತಿ ನಿಲ್ಲಿಸಬೇಕು ಎಂದು ಜನರಲ್ಲಿ ಮನವು ಮಾಡಿಕೊಂಡಿದ್ದಾರೆ ಫಲವಾಗಿ 1933 ರ ನಂತರ ಸಾಂಕೇತಿಕವಾಗಿ ಕೋಣದ ರಕ್ತವನ್ನು ಸಿರಿಂಜ್ ಮೂಲಕ ತೆಗೆದು ದೇವಿಗೆ ಅರ್ಪಣೆ ಮಾಡಲಾಗುತ್ತಿದೆ. 9 ದಿನಗಳ ಕಾಲ ನಡೆಯುವ ಈ ಜಾತ್ರೆಯು ಈಗಾಗಲೇ ಪ್ರಾರಂಭ ಆಗಿದ್ದು ಮಾರ್ಚ್ 23 ರಂದು ಗದ್ದುಗೆ ಇಂದ ಇಳಿಯುತ್ತಾರೆ. ಸಾಧ್ಯವಾದರೆ ಒಮ್ಮೆ ಈ ತಾಯಿಯ ಸನ್ನಿಧಾನಕ್ಕೆ ಭೇಟಿ ನೀಡಿ ಕೆಂಪು ವರ್ಣದಲ್ಲಿ ಶೋಭಿಸುವ ಶ್ರೀ ಮಾರಿಕಾಂಬಾ ದೇವಿಯ ಅನುಗ್ರಹ ಪಡೆಯಿರಿ. ಶುಭದಿನ.