ನಮಸ್ತೆ ಪ್ರಿಯ ಓದುಗರೇ, ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲಿ ನೆಲೆಸಿರುವ ಸಾಕ್ಷಾತ್ ಲಕ್ಷ್ಮೀ ಎಂದೇ ಹೇಳಬಹುದು. ಯಾಕೆಂದ್ರೆ ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತದೋ ಅವರ ಮನೆಯಲ್ಲಿ ಸದಾ ಸಂತೋಷ ನೆಮ್ಮದಿ ಇಂದ ಕೂಡಿರುತ್ತದೆ. ಜೊತೆಗೆ ಅವರ ಮನೆಯಲ್ಲಿ ಕಾಯಿಲೆಗಳು ಕೂಡ ತುಂಬಾ ಬೇಗ ದೂರಾಗುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದ್ರೆ ಈ ಗಿಡದಲ್ಲಿ ಅಷ್ಟು ಔಷದೀಯ ಗುಣಗಳಿವೆ. ಮತ್ತು ಇದನ್ನು ಪುಟ್ಟ ಕಂದನಿಂದ ಹಿಡಿದು ಅಜ್ಜನವರೂ ಉಪಯೋಗಿಸಬಹುದು. ಅಷ್ಟು ಆರೋಗ್ಯದ ಗುಣಗಳು ಈ ತುಳಸಿ ಗಿಡದಲ್ಲಿ ಇದೆ. ಸಾವಿರಾರು ವರ್ಷಗಳಿಂದ ಈ ತುಳಸಿ ಗಿಡವನ್ನು ಆಯುರ್ವೇದ ಔಷಧ ದಲ್ಲಿ ಇದನ್ನು ಬಳಕೆ ಮಾಡುತ್ತಾ ಬಂದಿದ್ದಾರೆ. ಇವತ್ತಿನ ಲೇಖನದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ಮೊದಲನೆಯದಾಗಿ ಈ ತುಳಸಿ ಗಿಡ ಯಾವೆಲ್ಲ ಪೋಷಕಾಂಶಗಳನ್ನು ಒಳಗೊಂಡಿದೆ ಎಂದು ನೋಡುವುದಾದರೆ ಈ ತುಳಸಿ ಗಿಡದ ಎಲೆಗಳಲ್ಲಿ ವಿಟಮಿನ್ ‘ಏ’ ಇದೆ, ವಿಟಮಿನ್ ‘ಕೆ’ ಹಾಗೂ ಕ್ಯಾಲ್ಸಿಯಂ, ಕಬ್ಬಿಣ, ಮೇಜ್ಞೆಸಿಯಮ್, ಕಲೋರೀಸ್ ಕೂಡ ಇವೆ.
ನೋಡಿ ಇಷ್ಟೆಲ್ಲಾ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ತುಳಸಿ ಎಲೆ ಯು ನಮ್ಮ ಆರೋಗ್ಯಕ್ಕೆ ತುಂಬಾನೆ ಉತ್ತಮವಾದದ್ದು. ಇನ್ನೂ ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನು ತಿನ್ನುವುದರಿಂದ ಇದು ನಮ್ಮ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ತುಳಸಿ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಇದು ಸೋಂಕಿನ ವಿರುದ್ಧ ಕೂಡ ಹೊರಡುತ್ತದೆ. ಇನ್ನೂ ಸಕ್ಕರೆ ಕಾಯಿಲೆ ಇದ್ದವರು ನಿತ್ಯ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣ ಕ್ರಿಯೆ ವ್ಯವಸ್ಥೆಯನ್ನು ಕೂಡ ಆರೋಗ್ಯವಾಗಿ ಇಡುತ್ತದೆ. ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದ ಪೀ.ಹೆಚ್ ಮಟ್ಟವನ್ನು ಸಮತೋಲನದಲ್ಲಿ ಇಡುತ್ತದೆ. ಜೊತೆಗೆ ನಮ್ಮ ದೇಹದಲ್ಲಿನ ಆಮ್ಲೀಯತೆ ಅನ್ನು ಕೂಡ ನಿಯಂತ್ರಣದಲ್ಲಿ ಇಡುತ್ತದೆ. ಇನ್ನೂ ಪ್ರತಿನಿತ್ಯ ತುಳಸಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿನ ಕೆಟ್ಟ ವಿಷಕಾರಿ ಅಂಶಗಳನ್ನು ಹೊರ ಹಾಕಲು ನೆರವಾಗುತ್ತದೆ.
ಹಾಗೆ ಈ ತುಳಸಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಶೀತ, ಕೆಮ್ಮು, ಜ್ವರ, ಅಲರ್ಜಿ ಹಾಗೂ ಗಂಟಲು ನೋವಿನಿಂದ ಪರಿಹಾರ ಸಿಗುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಬಾಯಿಂದ ಬರುವ ದುರ್ವಾಸನೆ ಹಾಗೂ ಇತರೆ ಸಮಸ್ಯೆಗಳನ್ನು ನಿವಾರಣೆ ಆಗುತ್ತದೆ. ಈ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮಲಬದ್ಧತೆ ಕೂಡ ನಿವಾರಣೆ ಆಗುತ್ತದೆ. ಈ ತುಳಸಿ ಎಲೆಗಳನ್ನು ನೀವು ಯಾವ ರೀತಿ ಸೇವನೆ ಮಾಡಬೇಕು ಎಂದು ಹೇಳುವುದಾದರೆ, ತುಳಸಿ ಎಲೆಗಳನ್ನು ಕಿತ್ತು ಅವುಗಳನ್ನು ನೀರಿನಲ್ಲಿ ಉಪ್ಪು ಹಾಕಿ ಚೆನ್ನಾಗಿ ತೊಳೆದು ನಂತರ ಅದರಲ್ಲಿ ಎರಡು ಮೂರು ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಜಗಿದು ಅದರ ರಸ ನುಂಗಿ ಒಂದು ಲೋಟ ನೀರು ಕುಡಿಯಿರಿ ಆಮೇಲೆ 30 ನಿಮಿಷಗಳ ಕಾಲ ಏನನ್ನೋ ತಿನ್ನಬೇಡಿ ಹಾಗೂ ಟೀ ಕಾಫಿ ಕುಡಿಯಬೇಡಿ. ಇದನ್ನೂ ಟೀ ರೀತಿ ತಯಾರಿಸಿ ಸಹ ಕುಡಿಯಬಹುದು. ಒಂದು ಲೋಟ ನೀರನ್ನು ಕು ದೀಯಲು ಇಟ್ಟು, ಅದಕ್ಕೆ 3-4 ತುಳಸಿ ಎಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಿ, ಉಗುರು ಬೆಚ್ಚಗೆ ಇರುವಾಗಲೇ ಗುಟುಕರಿಸಿ. ನೋಡಿದ್ರಲ್ವ ಸ್ನೇಹಿತರೆ ಮನೆಯ ಮುಂದಿನ ತುಳಸಿ ಎಷ್ಟು ದಿವ್ಯ ಔಷಧಿ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.