ನಮಸ್ತೆ ಪ್ರಿಯ ಓದುಗರೇ, ದುಷ್ಟರ ಅಟ್ಟಹಾಸ ಎಲ್ಲೆ ಮೀರಿದಾಗಾ ಸರ್ವ ಶಕ್ತನಾದ ಭಗವಂತ ಭೂಮಿ ಮೇಲೆ ಅವತರಿಸಿ ತನ್ನ ನಂಬಿ ಬಂದ ಭಕ್ತರನ್ನು ಬಿಡದೇ ಕಾಪಾಡುತ್ತಾನೆ. ಅದರಲ್ಲಿ ಕೋಟಿಪೂರದ ಈಶ್ವರ ಕೈಟಭೇಶ್ವರ ಎಂಬ ಹೆಸರಿನಿಂದ ನೆಲೆ ನಿಂತು ಇಲ್ಲಿನ ಜನರ ಸಂಕಷ್ಟವನ್ನು ನೀಗಿಸುತ್ತಿದ್ದಾನೆ. ಬನ್ನಿ ಇವತ್ತಿನ ಲೇಖನದಲ್ಲಿ ಆ ಮಹೇಶ್ವರನ ನ್ನೂ ದರ್ಶನ ಮಾಡಿ ಅವನ ಅನುಗ್ರಹ ಪಡೆದು ಕೊಳ್ಳೋಣ. ಕುಪಟೂರು ಅಥವಾ ಕುಪ್ಪತ್ತೂರು ಎಂಬ ಹೆಸರಿನ ಕರೆಯುವ ಈ ಕೋಟಿ ಪುರದಲ್ಲಿ ಚಿನ್ಮಯನಾದ ಶಿವನು ದೇಗುಲದ ಗರ್ಭ ಗುಡಿಯಲ್ಲಿ ತನ್ನ ಶಾಂತವಾದ ಮುಖ ಮುದ್ರೆಯಿಂದ ಕಂಗೊಳಿಸುತ್ತಿ ದ್ದಾನೆ. ಇವನನ್ನು ನಂಬಿ ಬಂದ ಭಕ್ತರಿಗೆ ಈ ದೇವ ಸದಾ ಒಳಿತನ್ನು ಮಾಡುತ್ತಿದ್ದಾನೆ. ಇಲ್ಲಿಗೆ ಬಂದು ದೇವರಿಗೆ ಬಿಲ್ವಾರ್ಚನೆ ಅಥವಾ ಅಭಿಷೇಕ ಸೇವೆ ಮಾಡಿಸಿದರೆ ನಮ್ಮ ಮನಸಿನ ದುಗುಡವನ್ನು ದೂರ ಮಾಡಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಾನೆ ಈ ಪರಮಾತ್ಮ. ಈ ದೇವಾಲಯವು ಕ್ರಿಸ್ತ ಶಕ 100 ರಲ್ಲಿ ಹೊಯ್ಸಳರ ರಾಜ ವಿಕ್ರಮಾದಿತ್ಯ ನಿಂದಾ ನಿರ್ಮಿತವಾಗಿದೆ. ಸಾಮಾನ್ಯವಾಗಿ ಬೇರೆ ಎಲ್ಲ ಕಡೆ ಈಶ್ವರನ ಲಿಂಗವು ಕಪ್ಪು ಬಣ್ಣದಲ್ಲಿ ಇದ್ದರೆ ಇಲ್ಲಿನ ಈಶ್ವರ ಲಿಂಗವು ನೀಲ ವರ್ಣದಲ್ಲಿ ಇದೆ.
ಇಂತಹ ಅಪರೂಪದ ಬಣ್ಣದ ಜಗದಿಶ್ವರ ಲಿಂಗವನ್ನು ಬೇರೆ ಕಡೆ ನೋಡೋದು ತುಂಬಾ ವಿರಳ. ಈ ಕ್ಷೇತ್ರದ ಮತ್ತೊಂದು ವಿಶೇಷತೆ ಏನೆಂದರೆ ಯುಗಾದಿ ಹಬ್ಬದ ದಿನ ಕೈಟಭೇಶ್ವರ ಸ್ವಾಮಿಯ ಮೇಲೆ ಸೂರ್ಯನ ಪ್ರಥಮ ಕಿರಣ ಸ್ಪರ್ಶ ಆಗೋದು. ಆ ದಿನ ಸಾವಿರಾರು ಭಕ್ತರು ಈ ಕುತೂಹಲಕಾರಿ ವಿಸ್ಮಯವನ್ನು ನೋಡಿ ತಮ್ಮ ಜನ್ಮ ಪಾವನ ಮಾಡಿಕೊಳ್ಳುತ್ತಾರೆ. ಇನ್ನೂ ಇಲ್ಲಿನ ಕೈಟಭೇಶ್ವರ ಸ್ವಾಮಿಯನ್ನು ಗಿರಿಶಂ ಗಣೇಶಂ ಗಲೇ ನೀಲವರ್ಣಂ. ಗವೆಂದ್ರದಿರೂಢಂ ಗುಣಾತೀತ ರೂಪಂ. ಭವಂ ಭಸ್ವರಂ ಭಸ್ಮನಾ ಭೋಷಿತಾಂಗ. ಭವಾನಿ ಕಲತ್ರಂ ಭಜೇ ಪಂಚವಕ್ತ್ರಂ.. ಎಂದು ವರ್ಣಿಸಲಾಗಿದೆ. ಈ ದೇವಸ್ಥಾನವು ಅದ್ಭುತ ಶಿಲ್ಪ ಕಲೆಗಳಿಂದ ಕೆತ್ತಲಾಗಿದ್ದು, ದೇವಾಲಯವು ವಿಶಾಲವಾದ ಜಾಗ, ಎತ್ತರವಾದ ಮೇಲ್ಚಾವಣಿ, ಕಣ್ಣು ಕೋರೈಸುವ ಸುಂದರವಾದ ಕಲ್ಲಿನ ಕೆತ್ತನೆಗಳಿಂದ ನೋಡುಗರನ್ನು ಆಕರ್ಷಿಸುತ್ತದೆ. ಈ ಕ್ಷೇತ್ರದಲ್ಲಿ ಕೈಟಭೇಶ್ವರ ಸ್ವಾಮಿಯ ಜೊತೆ ಸುಬ್ರಮಣ್ಯ ಸ್ವಾಮಿ, ಪಾರ್ವತಿ ದೇವಿ, ಗಣಪತಿ, ಸಪ್ತ ಮಾಥ್ರುಕೆಯರು, ಷಣ್ಮುಖ, ವಿಷ್ಣು, ಹನುಮಂತ ದೇವರು ಕೂಡ ನೆಲೆ ನಿಂತಿದ್ದಾರೆ. ಹೀಗಾಗಿ ಇಲ್ಲಿಗೆ ಬಂದರೆ ಎಲ್ಲಾ ದೇವರ ಆಶೀರ್ವಾದವನ್ನು ಪಡೆಯಬಹುದು. ಇನ್ನೂ ಇಲ್ಲಿನ ನವರಂಗದ ಇಕ್ಕಿಲಗಳ ದ್ವಾರದಲ್ಲಿ 16 ಅದ್ಭುತ ಕಲ್ಲಿನ ಕಂಬಗಳು ಇವೆ.
ಈ ಕಲ್ಲಿನ ಕಂಬಗಳ ವಿಶಿಷ್ಟತೆ ಎಂದ್ರೆ ಈ ಕಲ್ಲಿನ ಮೇಲೆ ನಮ್ಮ ಪ್ರತಿಬಿಂಬವು ನೇರವಾಗಿ ಮತ್ತು ತಲೆ ಕೆಳಗಾಗಿ ಯು ಕಾಣಿಸುತ್ತೆ. ಅಲ್ಲದೆ ಇಲ್ಲಿನ ಸುಖಾಸಿನ ಛಾವಣಿಯಲ್ಲಿ ಸುಮಾರು 400 ದಳಗಳು ಇರುವ ಕಮಲದ ಹೂವನ್ನು ಕೆತ್ತಲಾಗಿದೆ. ಈ ತರಹದ ಕಮಲದ ಕೆತ್ತನೆಯನ್ನು ನಾವು ಕೈಟಭೇಶ್ವರ ದೇವಾಲಯ ಮತ್ತು ಹಾಲಗಲ್ಲಿನ ತಾರಕೇಶ್ವರ ದೇವಾಲಯ ದಲ್ಲಿ ಮಾತ್ರ ಕಾಣಬಹುದು. ಅತ್ಯಂತ ಪುರತನವಾದ ಈ ದೇವಾಲಯದಲ್ಲಿ ಶಿವರಾತ್ರಿ ಮತ್ತು ಯುಗಾದಿ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮಂದಸ್ಮಿತ ಆದ ಕೈಟಭೇಶ್ವರ ದೇವರನ್ನು ಬೆಳಿಗ್ಗೆ 7.30 ರಿಂದ 9.30 ರ ವರೆಗೆ, ಸಂಜೆ 5.30 ರಿಂದ 7.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಭಕ್ತಾದಿಗಳು ಕ್ಷೀರಾಭಿಷೇಕ, ಜಲಾಭಿಷೇಕ, ಕುಂಕುಮಾರ್ಚನೆ, ಹಾಗೂ ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಅನೇಕ ವಿಶೇಷತೆಗಳಿಂದ ಕೂಡಿದ ಈ ದೇವಾಲಯವು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಇದೆ. ಈ ದೇವಾಲಯವು ಬೆಂಗಳೂರಿನಿಂದ 362 ಕಿಮೀ, ಶಿವಮೊಗ್ಗದಿಂದ 99 ಕಿಮೀ, ಸಾಗರದಿಂದ 56 ಕಿಮೀ, ಆಲಮಟ್ಟಿ ಇಂದ 2 ಕಿಮೀ ದೂರದಲ್ಲಿದೆ. ಸೊರಬಕ್ಕೆ ಶಿವಮೊಗ್ಗ ಹಾಗೂ ಸಾಗರ ಮತ್ತು ಹಾನಗಲ್ ಇಂದ ಕರ್ನಾಟಕ ಬಸ್ ಸಾರಿಗೆ ವ್ಯವಸ್ಥೆ ಇದ್ದು, ಈ ಕ್ಷೇತ್ರಕ್ಕೆ ಸಾಗರ ಮತ್ತು ಶಿವಮೊಗ್ಗ ಹತ್ತಿರದ ರೈಲ್ವೇ ನಿಲ್ದಾಣ ಆಗಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಪ್ರಶಂತವಾದ ಪರಿಸರದ ನಡುವೆ ನೆಲೆ ನಿಂತು ತನ್ನ ಬಳಿ ಬರುವ ಭಕ್ತರನ್ನು ಕರುಣೆಯ ಕೈಗಳಿಂದ ಆಶೀರ್ವದಿಸುವ ದೇವನನ್ನು ದರ್ಶನ ಮಾಡಿ. ಶುಭದಿನ.