ನಮಸ್ತೇ ಪ್ರಿಯ ಓದುಗರೇ, ಇಂದಿನ ಇಂದಿನ ಲೇಖನದಲ್ಲಿ ನಾವು ನಿಮಗೆ ಪೂರ್ವ ಜನ್ಮದಲ್ಲಿ ಪಾಪಗಳಿಗೆ ಮುಕ್ತಿ ಸಿಗಬೇಕು ಅಂದರೆ ಏನೆಲ್ಲ ಮಾರ್ಗಗಳನ್ನು ಅನುಸರಿಸಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮನುಷ್ಯ ಅಂದ ಮೇಲೆ ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಆದರೆ ಪದೇ ಪದೇ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಮನುಷ್ಯನು ನಾವು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೇನೆಯೋ ಹಾಗೂ ಯಾವ ಜನ್ಮದ ಕರ್ಮವೋ ಅಂತ ತನ್ನನ್ನು ತಾನು ಬೈದುಕೊಳ್ಳುತ್ತಾನೆ. ಇನ್ನೂ ಜೀವನದಲ್ಲಿ ಸುಖವನ್ನು ಮಾತ್ರ ಅನುಭವಿಸುವ ವ್ಯಕ್ತಿ ಯಾವ ಜನ್ಮದಲ್ಲಿ ಏನು ಪುಣ್ಯವನ್ನು ಮಾಡಿದ್ದೇನೆಯೊ ಈ ಜನ್ಮದಲ್ಲಿ ಸುಖವನ್ನು ಪಡೆಯುತ್ತಿದ್ದೇನೆ ಅಂತ ಹೇಳುವ ಮಾತುಗಳನ್ನು ನಾವು ಕೇಳಿಯೇ ಇರುತ್ತೇವೆ. ಹೀಗಾಗಿ ಈ ಜನ್ಮದಲ್ಲಿ ನಾವು ಹೇಗೆ ಪುಣ್ಯವನ್ನು ಗಳಿಸಬೇಕು ಅಂತ ನಾವು ನಿಮಗೆ ಕೆಲವು ಸಲಹೆಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ. ನಮ್ಮ ಹಿಂದೂ ಧರ್ಮದಲ್ಲಿ ನಾವು ಮಾಡುವ ಪ್ರತಿ ಒಳ್ಳೆಯ ಕೆಲಸ ಕಾರ್ಯಗಳು ಹಾಗೂ ಕೆಟ್ಟ ಕೆಲಸಗಳನ್ನು ಪುಣ್ಯ ಪಾಪಗಳಿಗೆ ಹೋಲಿಕೆ ಮಾಡುತ್ತಾರೆ.

ಒಳ್ಳೆಯ ಕೆಲಸಗಳನ್ನು ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಸುಖ ಜೀವನ ದೊರೆಯುತ್ತದೆ. ಹಾಗೂ ಪುಣ್ಯ ಸಿಗುತ್ತದೆ ಅಂತೆಲ್ಲ ಮಾತನಾಡುತ್ತಾರೆ. ಜೊತೆಗೆ ಕೆಟ್ಟ ಕೆಲಸಗಳನ್ನು ಮಾಡಿದರೆ ಜೀವನವೇ ಹಾಳಾಗುತ್ತದೆ ಅಂತ ಹೇಳುತ್ತಾರೆ. ಈಗಿನ ಎಲ್ಲ ಸುಖ ದುಃಖಗಳಿಗೆ ಕಷ್ಟ ನಷ್ಟಗಳಿಗೆ ಪೂರ್ವ ಜನ್ಮವನ್ನು ನೆನೆಯುತ್ತಾರೆ. ಕೆಲವರು ಪೂರ್ವಜನ್ಮದಲ್ಲಿ ನಂಬಿಕೆಯನ್ನು ಕೂಡ ಇಟ್ಟಿರುತ್ತಾರೆ. ಪ್ರತಿಯೊಂದಕ್ಕೂ ಈಗಿನ ಜನ್ಮವನ್ನು ಹಿಂದಿನ ಕಾಲದ ಜನ್ಮಕ್ಕೆ ಹೋಲಿಕೆ ಮಾಡುತ್ತಲೇ ಇರುತ್ತಾರೆ. ಹೋದ ಜನ್ಮದಲ್ಲಿ ಅದೇನ್ ಪಾಪಾ ಮಾಡಿದ್ದೇನೋ ಈ ಜನ್ಮದಲ್ಲಿ ತೀರಿಸುತ್ತಿದ್ದೇನೆ ಅಂತ ತಮ್ಮನ್ನು ತಾವು ಬೈದುಕೊಳ್ಳುತ್ತಾರೆ. ಹಾಗಾದರೆ ನಾವು ಈ ಜನ್ಮದಲ್ಲಿ ಕೆಟ್ಟ ಜನ್ಮದಿಂದ ಹೊರಗೆ ಬರಲು ಏನು ಮಾಡಬೇಕು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ನಾವು ದೇವರಲ್ಲಿ ಒಳ್ಳೆಯ ನಂಬಿಕೆಯನ್ನು ಇಡಬೇಕು. ದೇವರು ಎಷ್ಟೇ ಕಷ್ಟ ಕೊಟ್ಟರೂ ಕೂಡ ದೇವರು ಇದ್ದಾರೆ ಅಂತ ನಂಬಿಕೆ ಇಡಬೇಕು. ಹೇಳಲಾಗುತ್ತದೆ, ದೇವರಲ್ಲಿ ನಂಬಿಕೆ ಇಟ್ಟರೆ ದೇವರು ಪಾತಾಳದಲ್ಲಿ ಇದ್ದರೂ ಕೂಡ ಸಹಾಯಕ್ಕೆ ಬರುತ್ತಾರೆ ಹೇಳುತ್ತಾರೆ.

ಇನ್ನೂ ಎರಡನೆಯದು ದೇವರನ್ನು ನಿತ್ಯವೂ ಪೂಜೆ ಮಾಡುತ್ತಾ ಧನ್ಯವಾದಗಳನ್ನು ಹೇಳಬೇಕು. ಮತ್ತು ನಾವು ಯಾರಿಗೂ ಕೂಡ ಕೆಟ್ಟದ್ದು ಬಯಸಬಾರದು. ಬೇರೆಯವರ ಖುಷಿಯಲ್ಲಿ ನಮ್ಮ ಖುಷಿಯನ್ನು ಕಾಣಬೇಕು. ಆದಷ್ಟು ನಾವು ಕಷ್ಟ ಅಂತ ಬಂದಾಗ ಎಂದಿಗೂ ಬೇರೆಯವರನ್ನು ಖಾಲಿ ಬರಿಗೈಯಲ್ಲಿ ಕಳುಹಿಸಬಾರದು. ಅವರಿಗೆ ಸ್ವಲ್ಪವಾದರೂ ಕೂಡ ಸಹಾಯ ಮಾಡಬೇಕು. ಇನ್ನೂ ಮನಸ್ಸಿನಿಂದ ಯಾರಿಗೂ ಕೆಟ್ಟದ್ದನ್ನು ಬಯಸಬಾರದು.
ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು ಹೊರಗಿನಿಂದ ಒಳ್ಳೆಯವರಾಗಿ ಇರಬಾರದು. ಎಲ್ಲ ರೀತಿಯಿಂದ ನಾವು ಒಳ್ಳೆಯದನ್ನೇ ಮಾಡಬೇಕು. ನಾವು ಮಾಡಿದ ಕಾರ್ಯಗಳು ನಮಗೆ ಒಂದಲ್ಲ ಒಂದು ರೀತಿಯಲ್ಲಿ ದೇವರು ಸಹಾಯ ಮಾಡುತ್ತಾನೆ. ಹೌದು ಒಟ್ಟಾರೆ ಹೇಳುವುದಾದರೆ ನಾವು ಎಷ್ಟು ಒಳ್ಳೆಯವರಾಗಿ ಇರುತ್ತೇವೆ ದೇವರು ಅಷ್ಟೊಂದು ನಮಗೆ ಸಹಾಯ ಮಾಡುತ್ತಾನೆ. ಆದ್ದರಿಂದ ಹೋದ ಜನ್ಮದಲ್ಲಿ ಮಾಡಿದ ಎಲ್ಲ ಪಾಪಗಳನ್ನು ಕಳೆದು ಕೊಳ್ಳಲು ಈ ಜನ್ಮದಲ್ಲಿ ಒಳ್ಳೆಯವರಾಗಿ ಬದುಕಬೇಕು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *