ನಮಸ್ತೇ ಪ್ರಿಯ ಓದುಗರೇ, ಹಸಿ ಕೊಬ್ಬರಿ ಎಲ್ಲರಿಗೂ ಚಿರಪರಿಚಿತ. ಹಸಿ ಕೊಬ್ಬರಿಯನ್ನು ಮಸಾಲೆ ಮಾಡಿಕೊಂಡು ಅದ್ಭುತವಾದ ರುಚಿಕರವಾದ ಅಡುಗೆಯನ್ನು ತಯಾರಿಸುತ್ತಾರೆ. ಆದರೆ ನಿಮಗೆ ಗೊತ್ತೇ ಕೇವಲ ಹಸಿ ಕೊಬ್ಬರಿ ತಿನ್ನುವುದರಿಂದ ಏನೆಲ್ಲ ಲಾಭಗಳು ಆಗುತ್ತದೆ ಎಂದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ತಿಳಿಸಿ ಕೊಡುತ್ತೇವೆ. ಕೆಲವರು ಹಸಿ ಕೊಬ್ಬರಿಯನ್ನು ಹಾಗೆಯೇ ತಿನ್ನುತ್ತಾರೆ. ಇನ್ನೂ ಕೆಲವರು ಕೊಬ್ಬರಿ ಚಟ್ನಿ, ಕೊಬ್ಬರಿ ಹಲ್ವಾದಂತಹ ತಿಂಡಿಗಳನ್ನು ಮಾಡಿಕೊಂಡು ತಿನ್ನುತ್ತಾರೆ ಹಸಿ ಕೊಬ್ಬರಿ ತಿನ್ನುವುದರಿಂದ ಶಕ್ತಿ ದುಪ್ಪಟ್ಟು ಆಗುತ್ತದೆ. ಏಕೆಂದರೆ ಹಸಿ ಕೊಬ್ಬರಿ ಪೋಷಕಾಂಶಗಳ ಆಗರ ಅಂತ ಹೇಳಿದರೆ ತಪ್ಪಾಗಲಾರದು. ಹಾಗೂ ನಮ್ಮ ದೇಹಕ್ಕೆ ಅಗತ್ಯವಾದ ಎಲ್ಲಾ ಪೌಷ್ಟಿಕತೆಯನ್ನು ಈ ಹಸಿ ಕೊಬ್ಬರಿ ಒಳಗೊಂಡಿರುತ್ತದೆ. ಹಸಿ ಕೊಬ್ಬರಿ ತಿನ್ನುವುದರಿಂದ ನಮ್ಮ ಆರೋಗ್ಯವೂ ವೃದ್ಧಿ ಆಗುವುದರ ಜೊತೆಗೆ ಅನೇಕ ಅನಾರೋಗ್ಯದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಮೊದಲಿಗೆ ಥೈರಾಯಿಡ್ ಸಮಸ್ಯೆ ಇದ್ದವರು ನಿತ್ಯವೂ ಹಸಿ ಕೊಬ್ಬರಿ ಸೇವನೆ ಮಾಡುತ್ತಾ ಬನ್ನಿ ಇದರಿಂದ ಥೈರಾಯಿಡ್ ಸಮಸ್ಯೆ ದೂರವಾಗುತ್ತದೆ. ಇನ್ನೂ ಪ್ರತಿನಿತ್ಯವೂ ಯಾವುದೇ ಒಂದು ಮುಖಾಂತರ ಹಸಿ ಕೊಬ್ಬರಿ ತಿನ್ನುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ದೊರೆಯುತ್ತದೆ. ನಿಮಗೆ ಯಾವುದೇ ಇನ್ಫೆಕ್ಷನ್ ರೋಗಗಳು ಬರುವುದಿಲ್ಲ. ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನ ಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ. ಹಸಿ ಕೊಬ್ಬರಿಯಲ್ಲಿ ಜೀವಸತ್ವಗಳು, ಖನಿಜಗಳು, ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದು
ಜೀರ್ಣ ಸಮಸ್ಯೆಗಳು ದೂರ ಮಾಡುತ್ತವೆ. ಜೀರ್ಣಕೋಶ ಶುದ್ಧವಾಗುತ್ತದೆ. ಗ್ಯಾಸ್, ಅಸಿಡಿಟಿ, ಅಜೀರ್ಣ, ಮಲಬದ್ಧತೆಯಂತಹ ಸಮಸ್ಯೆಗಳು ಬರುವುದಿಲ್ಲ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮಧುಮೇಹವನ್ನು ನಿವಾರಿಸಲು ಮಧುಮೇಹಿಗಳು ನಿತ್ಯವೂ ಹಸಿ ಕೊಬ್ಬರಿ ಎಣ್ಣೆ ತಿನ್ನಬೇಕು. ಕ್ಯಾನ್ಸರ್ ವಿರೋಧ ಹೋರಾಡಲು ಈ ಹಸಿ ಕೊಬ್ಬರಿ ಸೇವನೆ ರಾಮಬಾಣ ಇದ್ದಂತೆ.ಹಲವು ವಿಧದ ಕ್ಯಾನ್ಸರ್‌ಗಳಿಗೆ ವ್ಯತಿರಿಕ್ತವಾಗಿ ಹೋರಾಡುವ ಔಷಧಿ ಗುಣಗಳು ಹಸಿ ಕೊಬ್ಬರಿಯಲ್ಲಿವೆ. ಹಸಿ ಕೊಬ್ಬರಿಯಲ್ಲಿನ ಆಂಟಿ ಆಕ್ಸಿಡೆಂಟ್‌ಗಳೂ ಕ್ಯಾನ್ಸರ್ ಕಣಗಳ ವೃದ್ಧಿಯನ್ನು ತಡೆಯುತ್ತದೆ.
ಕೆಟ್ಟ ಕೊಲೆಸ್ಟಾರಾಲ್ ಅನ್ನು ಹೋಗಲಾಡಿಸಿ ಉತ್ತಮವಾದ ಒಳ್ಳೆಯ ಗುಣ ಮಟ್ಟದ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ಅನೇಕ ಹೃದ್ರೋಗದ ಸಮಸ್ಯೆಯನ್ನು ರಕ್ಷಣೆಯನ್ನು ಒದಗಿಸುತ್ತದೆ. ಚರ್ಮ, ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಚರ್ಮದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತವೆ. ಕೂದಲು ಸೊಂಪಾಗಿ, ದೃಢವಾಗಿ ಬೆಳೆಯುತ್ತವೆ. ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ಇದು ಸಹಕಾರಿ. ಮಕ್ಕಳಿಗೆ ಇದರ ಹಾಲನ್ನು ಕುಡಿಯಲು ಕೊಡುವುದರಿಂದ ಮೂಳೆ ಬಲಿಷ್ಠವಾಗುತ್ತದೆ. ಮಲಬದ್ಧತೆ ನಿವಾರಣೆಗೂ ಇದು ಹೇಳಿ ಮಾಡಿಸಿದ ಪಾನೀಯ. ಹಸಿಕೊಬ್ಬರಿ ಸೇವಿಸುವುದರಿಂದ ದೇಹದ ಮೂಳೆಗಳು ಬಲಶಾಲಿಯಾಗುತ್ತವೆ. ಹಸಿ ಕೊಬ್ಬರಿ ಸೇವನೆ ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೂಳೆಗಳ ಅಂಗಾಂಶಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಮಾಡಲು ಹಸಿ ಕೊಬ್ಬರಿ ಸಹಾಯ ಮಾಡುತ್ತದೆ. ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಗೆ ಕೂಡಾ ಹಸಿಕೊಬ್ಬರಿ ಒಳ್ಳೆಯ ಔಷಧಿ. ಹಸಿ ಕೊಬ್ಬರಿಯನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ. ಹಸಿ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡಾ ಸರಿಪಡಿಸುತ್ತದೆ. ಅನೇಕ ಲಾಭಗಳನ್ನು ಪಡೆಯಬಹುದು ಕೇವಲ ಅಡುಗೆ ಮನೆಯಲ್ಲಿ ದೊರೆಯುವ ಹಸಿ ಕೊಬ್ಬರಿ ತಿನ್ನುವುದರಿಂದ. ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.