ನಮಸ್ತೆ ಪ್ರಿಯ ಓದುಗರೇ, ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಮನೆಯ ಗೋಡೆಯಲ್ಲಿ ನೇತು ಹಾಕುವ ಗಡಿಯಾರ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇರುವುದಕ್ಕೂ ವಾಸ್ತು ನಿಯಮಗಳಿವೆ. ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಹಾಗಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಸೂಕ್ತ ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಹಲವಾರು ಬಾರಿ ಹಲವು ಜನರು ಕೇಳುವುದು ಮಾತನಾಡುವ ವಿಷಯ ಎಂದರೆ ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು, ಹಾಗೆಯೇ ಯಾವ ರೀತಿಯ ಶೇಪ್ ಇರುವ ಗಡಿಯಾರವನ್ನು ಮನೆಯಲ್ಲಿ ಹಾಕಬೇಕು ಎನ್ನುವುದು. ಸಾಮಾನ್ಯವಾಗಿ ಮನೆಯಲ್ಲಿ ಮುಖ್ಯವಾಗಿ ನಿಮ್ಮ ಮಲಗುವ ಕೋಣೆಯಲ್ಲಿ ಗೋಡೆ ಗಡಿಯಾರ ನೀವು ಎದ್ದ ತಕ್ಷಣ ಕಾಣುವ ಹಾಗೆ ಹಾಕಬೇಡಿ, ಹೀಗೆ ಹಾಕುವುದರಿಂದ ನೀವು ಎದ್ದ ತಕ್ಷಣ ಗಡಿಯಾರ ನೋಡು ಗಾಬರಿಯಿಂದ ಎದ್ದು, ಗಡಿ ಬಿಡಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ದಿನ ಶುಭವಾ ಗಿ ಇರಲಾರದು. ಹಾಗಾಗಿ ಮನೆಯಲ್ಲಿ ಗೋಡೆ ಗಡಿಯಾರವನ್ನು ನಿಮ್ಮ ಮನೆಯ ಹಾಲ್ ನಲ್ಲಿ ಹಾಕುವುದು ಉತ್ತಮ.
ನಿಮ್ಮ ಮಲಗುವ ಕೋಣೆಯಲ್ಲಿ ಇದ್ದರೂ ನಿಮಗೆ ಎದ್ದ ತಕ್ಷಣ ಕಾಣುವ ಹಾಗೆ ಹಾಕೊಳೊಳ್ಳಬೇಡಿ. ಮುಖ್ಯವಾದ ಸಂಗತಿ ಏನೆಂದರೆ ಯಾವ ದಿಕ್ಕಿನಲ್ಲಿ ಗಡಿಯಾರ ಹಾಕಿದರೆ ಒಳ್ಳೆಯದು? ಸಾಮಾನ್ಯವಾಗಿ ಗಿದೇ ಗಡಿಯಾರ ಉತ್ತರ ಅಥವಾ ಪೂರ್ವ ದಿಕ್ಕಿನ ಗೋಡೆಗೆ ನೇತು ಹಾಕಿದರೆ ಒಳ್ಳೆಯದು. ಈ ರೀತಿ ಗಡಿಯಾರವನ್ನು ಈ ಮೇಲೆ ತಿಳಿಸಿರುವ ದಿಕ್ಕಿನಲ್ಲಿ ಹಾಕಿದರೆ ನಿಮಗೆ ಆಗುವ ಲಾಭಗಳು ಈ ರೀತಿ ಇವೆ. ನಿಮಗೆ ಯಾವುದೋ ಒಂದು ಪ್ರಾಜೆಕ್ಟ್ ಸಿಗಬೇಕು, ಟೆಂಡರ್ ಸಿಗಬೇಕಿತ್ತು ಯಾಕೋ ತಡ ಆಗ್ತಿದೆ, ಅಥವಾ ನಿಮಗೆ ಯಾವುದೋ ಹಣ ಬರಬೇಕಿತ್ತು ಎಲ್ಲೋ ಮಧ್ಯದಲ್ಲಿ ಸಿಲುಕಿದೆ ಎಂದಾಗ, ಸರ್ಕಾರದಿಂದ ಯಾವುದೋ ಕೆಲಸ ಆಗಬೇಕಿತ್ತು ವಿನಾ ಕಾರಣ ತಡ ಆಗುತ್ತಿದ್ದರೆ, ಹೀಗೆ ಹಲವಾರು ಕಾರಣಗಳಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣ ಆಗಬೇಕು ಎಂದರೆ ಗಡಿಯಾರವನ್ನು ಉತ್ತರ ದಿಕ್ಕಿಗೆ ಹಾಕಿ ನೋಡಿ ಎಲ್ಲಾ ಕೆಲಸಗಳು ಸುಗಮ ಆಗುತ್ತವೆ. ನಿಮ್ಮ ಮನೆ ಸುಭೀಕ್ಷವಾಗಿ ಇರಬೇಕು ಹಾಗೂ ಮನೆಯ ಜನರ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ, ಅಥವಾ ಮನೆಯ ಮಂದಿಯ ಏಳಿಗೆ ಆಗಬೇಕು ಅಂದ್ರೆ ನೀವು ಪೂರ್ವಕ್ಕೆ ಗಡಿಯಾರ ಹಾಕುವುದರಿಂದ ಈ ಎಲ್ಲಾ ಯೋಗಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ನಾವು ಮನೆಯಲ್ಲಿ ಒಮ್ಮೊಮ್ಮೆ ಗಡಿಯಾರವನ್ನು 5-10 ನಿಮಿಷ ಮುಂದಕ್ಕೆ ಇಡುತ್ತಾ ಇರುತ್ತೇವೆ. ಸಾಮಾನ್ಯವಾಗಿ ಎಲ್ಲರೂ ಹೀಗೆ ಜೀವನದಲ್ಲಿ ಒಮ್ಮೆಯಾದರೂ ಮಾಡಿಯೇ ಇರ್ತಿರ. ಹೀಗೆ ಮಾಡಬಾರದು ಏಕೆಂದರೆ ನಿಮಗೆ ಹೇಗೋ ಗಡಿಯಾರ 5-10 ನಿಮಿಷ ಮುಂದೆ ಇರುವುದು ಗೊತ್ತಿರುವುದರಿಂದ ಮನದಲ್ಲಿ ಒಂಥರಾ ಗಾಬರಿ ಸಹಜ.
ಹಾಗೆಯೇ ಗಡಿಯಾರ ಮುಂದಕ್ಕೆ ಇದೆ ಬಿಡು ಎಂದು ಮಾಡುವ ಕೆಲಸದಲ್ಲಿ ನಿಧಾನ, ಆಲಸ್ಯ ಆಗುತ್ತಾ ಹೋಗುತ್ತದೆ. ಹಾಗಾಗಿ ಮನೆಯಲ್ಲಿನ ಗಡಿಯಾರ ಹಿಂದೆಯೂ ಇರದೇ ಮುಂದೆಯೂ ಇರದೇ ಕರೆಕ್ಟ್ ಆಗಿ ಸರಿಯಾಗಿ ಇರಬೇಕು. ಗಡಿಯಾರ ನಮ್ಮ ಮನೆಯಲ್ಲಿ ಕಷ್ಟವೇ ಇರಲಿ ಸುಖವೇ ಇರಲಿ ಅದರ ಕೆಲಸ ಅದು ಮಾಡ್ತಾನೆ ಇರುತ್ತೆ. ಯಾವತ್ತೂ ನಿಲ್ಲಲ್ಲ. ಒಂದುವೇಳೆ ನಿಂತಿತು ಅಂದ್ರೆ ಒಂದು ಶೆಲ್ ಕಾಲಿ ಆಗಿರಬೇಕು ಇಲ್ಲ ಗಡಿಯಾರ ಕೆಟ್ಟು ಒಡೆದು ಹೋಗಿರಬೇಕು. ಹಾಗಾಗಿ ಒಂದುವೇಳೆ ನಿಮ್ಮ ಮನೆಯಲ್ಲಿ ನಿಂತಿರುವ ಗಡಿಯಾರ ಯಾವುದೇ ಕಾರಣಕ್ಕೋ ಹಾಕಬೇಡಿ. ಇದು ನಿಮ್ಮ ಮನೆಯಲ್ಲಿ ಋಣಾತ್ಮಕ ಕಂಪನ ಬೀರಬಹುದು. ಮತ್ತೆ ನಿಮ್ಮ ಮನೆಯಲ್ಲಿ ಸಾಕಷ್ಟು ಗೋಡೆ ಗಡಿಯಾರ ಇಟ್ಟು ಎಂದು ಬೇರೆಯವರಿಗೆ ಗಡಿಯಾರ ಕೊಡಲು ಅಥವಾ ಉಡುಗೊರೆ ರೀತಿ ಕೂಡ ಕೊಡಲು ಹೋಗಬೇಡಿ. ಹೀಗೆ ಮಾಡಿದರೆ ನಿಮ್ಮ ಗುಡ್ ಟೈಂ ಅಥವ ನಿಮ್ಮ ಬ್ಯಾಡ್ ಟೈಂ ಎರಡನ್ನೂ ಅವರ ಬಳಿ ಶೇರ್ ಮಾಡಿಕೊಂಡಂತೆ ಆಗುತ್ತದೆ. ಯಾರ ಮನೆಯ ಗೃಹ ಪ್ರವೇಶಕ್ಕೆ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಕೂಡ ಗಡಿಯಾರವನ್ನು ಗಿಫ್ಟ್ ಮಾಡಬೇಡಿ. ಕೊನೆಗೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬಾರದು ಎಂದ್ರೆ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿಗೆ ಗಡಿಯಾರ ಹಾಕಬಾರದು. ಪಶ್ಚಿಮ ದಿಕ್ಕಿಗೆ ಮೆಟಲ್ ಫ್ರೇಮ್ ಇರುವಂಥ ಗಡಿಯಾರ ಇಟ್ಟರೆ ಒಳ್ಳೆಯದು ಉತ್ತರ ದಿಕ್ಕಿಗೆ ನೀವು ಸಿಲ್ವರ್ ಫ್ರೇಮ್ ಇರುವ ಚೌಕ, ವೃತ್ತ ಯಾವ ರೀತಿ ಶೇಪ್ ಗಡಿಯಾರ ಬೇಕಾದರೂ ಹಾಕಬಹುದು. ಮನೆಯ ಯಾವ ಜಾಗದಲ್ಲಿ ಗಡಿಯಾರ ಹಾಕಬಾರದು ಎಂದರೆ, ಮನೆಯ ಬಾಗಿಲ ಮೇಲೆ ಹಾಕಬಾರದು ಹಾಗೆಯೇ ಮನೆಯ ಮೂಲ ಬಾಗಿಲಿನ ಮೇಲೆಯೂ ಗಡಿಯಾರ ಹಾಕಬೇಡಿ. ಇದು ನಿಮ್ಮ ಮನೆಗೆ ಆಂತಂಕಕಾರಿ ವಿಷಯ ತಂದು ಕೊಡುವ ಸಾಧ್ಯತೆ ಇರುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.