ನಮಸ್ತೇ ಆತ್ಮೀಯ ಪ್ರಿಯ ಓದುಗರೇ ಹೈ ಬಿಪಿ ಅನ್ನುವುದು ಯಾವಾಗ ಬೇಕಾದರೂ ಹೆಚ್ಚಬಹುದು ಹಾಗೂ ಕಡಿಮೆ ಆಗಬಹುದು. ಅಧಿಕ ರಕ್ತದೊತ್ತಡ ಕಡಿಮೆ ಇದ್ದರೂ ಕಷ್ಟವೇ ಹಾಗೂ ಹೆಚ್ಚು ಇದ್ದರೂ ಕೂಡ ಕಷ್ಟ ಆಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಅಧಿಕ ರಕ್ತದೊತ್ತಡ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ನಾವು ತಿಳಿಸುವ ಈ ಮನೆಮದ್ದುಗಳನ್ನು ಮಾಡಿ ನೋಡಿ ಖಂಡಿತವಾಗಿ ನಿಮ್ಮ ರಕ್ತದಲ್ಲಿ ಇರುವಂತಹ ಒತ್ತಡವು ಕಡಿಮೆ ಆಗುತ್ತದೆ. ಬಿಪಿ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ನಾವು ನಿಮಗೆ ಕೆಲವು ಮನೆಮದ್ದುಗಳನ್ನು ಸಂಕ್ಷಿಪ್ತವಾಗಿ ತಿಳಿಸಿ ಕೊಡುತ್ತೇವೆ. ನೀವೇನಾದರೂ ಇವುಗಳನ್ನು ಬಳಕೆ ಮಾಡಿದರೆ ಸಾಕು ನಿಮ್ಮ ರಕ್ತದಲ್ಲಿ ಉಂಟಾಗುವ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ ಮನೆಮದ್ದು ಶುರು ಮಾಡೋಣ.
ಈ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಯಾವುದು ಅಂದರೆ ಅಂಜೂರ. ಇದನ್ನು ಅತ್ತಿ ಹಣ್ಣು ಎಂದು ಕೂಡ ಕರೆಯಲಾಗುತ್ತದೆ. ಮತ್ತು ಹಾಲು ಕೊನೆಯದಾಗಿ ಕರಿಬೇವು ಬೇಕಾಗುತ್ತದೆ. ಈ ಮೂರು ಪದಾರ್ಥಗಳು ಇದ್ದರೆ ಸಾಕು ಖಂಡಿತವಾಗಿ ಅಧಿಕ ರಕ್ತದೊತ್ತಡ ನಿವಾರಣೆ ಗೆ ಮನೆಮದ್ದು ಸಿದ್ದ ಪಡಿಸಬಹುದು. ಗೆಳೆಯರೇ ಇಂದಿನ ಲೇಖನದಲ್ಲಿ ಎರಡು ಮನೆಮದ್ದು ಗಳನ್ನೂ ತಿಳಿಸಿ ಕೊಡುತ್ತೇವೆ ನಿಮಗೆ ಯಾವುದು ಸುಲಭವಾಗುತ್ತದೆ ಅಥವಾ ಅನುಕೂಲ ಆಗುತ್ತದೆಯೋ ಅದನ್ನು ನೀವು ಪ್ರಯತ್ನ ಮಾಡಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಈ ಮನೆಮದ್ದು ಹೇಗೆ ತಯಾರಿಸಬೇಕು ಅಂದರೆ ಮೊದಲಿಗೆ ಎರಡು ಅಂಜೂರದ ಹಣ್ಣುಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಹಾಕಿ ರಾತ್ರಿವಿಡಿ ನೆನೆಸಿಡಿ. ಮರುದಿನ ಬೆಳಿಗ್ಗೆ ಎದ್ದು ತಕ್ಷಣವೇ ಆ ನೆನೆಸಿದ ಅಂಜೂರದ ಹಣ್ಣುಗಳನ್ನು ಜಗಿದು ತಿನ್ನಬೇಕು ಹಾಗೂ ಅದರ ನೀರನ್ನು ಕೂಡ ಬಿಸಾಡದೇ ಕುಡಿಯಬೇಕು.
ಹೀಗೆ ಮಾಡಿದ ನಂತರ ಒಂದು ಲೋಟ ಹಾಲನ್ನು ಕುಡಿಯಬೇಕು. ಹೀಗೆ ಒಂದು ತಿಂಗಳು ನೀವು ಮಾಡುತ್ತಾ ಬಂದರೆ ಖಂಡಿತವಾಗಿ ನಿಮಗೆ ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತದೆ. ಇನ್ನೂ ಎರಡನೆಯ ಮನೆಮದ್ದು ಬಗ್ಗೆ ಹೇಳುವುದಾದರೆ ಮೊದಲಿಗೆ ಒಂದು ಪಾತ್ರೆಯಲ್ಲಿ 200ಎಂ. ಎಲ್ ಅಷ್ಟು ಹಾಲನ್ನು ಕಾಯಿಸಿ ಕೊಳ್ಳಿ. ಬಳಿಕ 7-8 ಕರಿಬೇವಿನ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಚೆನ್ನಾಗಿ ಕುದಿಸಬೇಕು ಅಂದರೆ ಮಿತ್ರರೇ ಕರಿಬೇವಿನಲ್ಲಿ ಇರುವ ಎಲ್ಲ ಜೀವ ಸತ್ವಗಳು ಪೌಷ್ಟಿಕತೆ ಅಂಶಗಳು ಹಾಲಿನಲ್ಲಿ ಬಿಡುವಂತೆ ಅದರ ಬಣ್ಣವು ಬದಲಾಗುವಂತೆ ಕುದಿಸಿ ಕೊಳ್ಳಬೇಕು.ನೀವು ಇದನ್ನು ಕುದಿಸಿಕೊಳ್ಳುವಾಗ ನಿಮಗೆ ಗೊತ್ತಾಗುತ್ತದೆ ಗೆಳೆಯರೇ. ಬಳಿಕ ಈ ಮಿಶ್ರಣವನ್ನು ಒಂದು ಲೋಟದಲ್ಲಿ ಶೋಧಿಸಿಕೊಳ್ಳಿ. ಈಗ ಈ ಮನೆಮದ್ದು ಸಿದ್ಧವಾಗಿದೆ. ಇದನ್ನು ನೀವು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮಾಡುವುದರಿಂದ ಖಂಡಿತವಾಗಿ ಹೈ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ತುಂಬಾನೇ ಸರಳವಾದ ಸುಲಭವಾದ ವಿಧಾನಗಳು ಅಥವಾ ಮನೆಮದ್ದು ಇವಾಗಿವೆ. ಕೇವಲ ಮೂರು ಪದಾರ್ಥಗಳು ನಿಮ್ಮ ಅಡುಗೆ ಮನೆಯಲ್ಲಿ ಇದ್ದರೆ ಸಾಕು ಸುಲಭವಾಗಿ ಮಾಡಿಕೊಳ್ಳಬಹುದು. ನೋಡಿದ್ರಲಾ ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.