WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಪ್ರತಿಯೊಂದು ಊರಲ್ಲಿ ಆಯಾ ಊರನ್ನು ಕಾಯಲು ಆದಿಶಕ್ತಿ ಜಗನ್ಮಾತೆ ನೆಲೆಸಿರುತ್ತಾಳೆ ಎಂದು ನಂಬಿರುವ ಸುಸಂಸ್ಕೃತ ಸಂಸ್ಕೃತಿ ನಮ್ಮದು. ಹೇಗೆ ಜಗನ್ಮಾತೆ ಯು ಶಿರಸಿಯಲ್ಲಿ ಮಾರಿಕಾಂಬೆ ಆಗಿ, ಸವದತ್ತಿಯಲ್ಲಿ ಯಲ್ಲಮ್ಮಳಾಗಿ, ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ಆಗಿ, ಸಿಗಂದೊರಿನಲ್ಲಿ ಚೌಡೇಶ್ವರಿ ಆಗಿ ಮೈಸೂರಿನಲ್ಲಿ ಚಾಮುಂಡೇಶ್ವರಿ ಆಗಿ ದುಷ್ಟ ಶಕ್ತಿಗಳಿಂದ ಜನರನ್ನು ರಕ್ಷಿಸುತ್ತಿದ್ದಾರೆ ಹಾಗೆಯೇ ಹುಲಿಗಿಯ ಪಕ್ಕದ ಊರಿನಲ್ಲಿ ನೆಲೆ ನಿಂತ ಈ ದೇವಿಯು ಆ ಭಾಗದ ಜನರನ್ನು ರಕ್ಷಿಸುತ್ತ ಇದ್ದಾಳೆ. ಬನ್ನಿ ಹುಲಿಗೆಮ್ಮ ದೇವಿಯಷ್ಟೆ ಪ್ರಭಾವಿತ ದೇವಿಯ ಆ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ತುಂಗಭದ್ರಾ ನದಿ ಒಂದು ಬದಿಯಲ್ಲಿ ಹುಲಿಗೆಮ್ಮ ದೇವಿಯ ದೇವಾಲಯ ಇದ್ರೆ, ಈ ನದಿಯ ಮತ್ತೊಂದು ಭಾಗದಲ್ಲಿ ಹೋಸೂರಮ್ಮ ನ ಭವ್ಯ ಆಲಯ ಇದೆ. ಗೋಪುರ, ನವರಂಗ, ಗರ್ಬಾಗೃಹ, ಮುಖ ಮಂಟಪ, ಪ್ರದಕ್ಷಿಣಾ ಪಥವನ್ನೂ ಒಳಗೊಂಡ ಈ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ ಆಯಿತು ಎಂದು ಹೇಳಲಾಗುತ್ತದೆ. ಮುಂದೆ ಈ ದೇಗುಲವನ್ನು ವಿಸ್ತರಿಸಿದ ಖ್ಯಾತಿ ಹರಪನಹಳ್ಳಿಯ ನಾಯಕರಿಗೆ ಸಲ್ಲುತ್ತದೆ.

ಏಕನಾತೆಶ್ವರೀ ಎಂಬ ಹೆಸರಿನಿಂದ ಕರೆಯುವ ಈ ದೇವಿಯ ಮೂರ್ತಿಯ ವೈಶಿಷ್ಟ್ಯ ಎನೆಂದ್ರೆ, ಬೇರೆ ದೇಗುಲದಲ್ಲಿ ದೇವಿಯ ಮೂರ್ತಿಗೆ ಕಣ್ಣು ಅಂಟಿಸುವ ಹಾಗೆ ನಾವಿಲ್ಲಿ ದೇವಿಯ ಕೈ ಕಾಳು ಮೂಗು ಕಣ್ಣುಗಳನ್ನು ಕಾಣಲು ಸಾಧ್ಯವಿಲ್ಲ, ಬದಲಿಗೆ ತಾಯಿಯು ಲಿಂಗ ರೂಪದಲ್ಲಿ ಅಲಂಕೃತವಾಗಿ ಭಕ್ತರಿಗೆ ದರ್ಶನವನ್ನು ನೀಡುವ ಸೌಮ್ಯ, ಮಂದಸ್ಮಿತ ಆಗಿರುವ ಈ ತಾಯಿಯ ಸಾನಿದ್ಯಕ್ಕೆ ಬಂದು ಏನನ್ನೇ ಭಕ್ತಿಯಿಂದ ಬೇಡಿಕೊಂಡರೂ ಅವೆಲ್ಲ ಶೀಘ್ರವಾಗಿ ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಇನ್ನೂ ಈ ಕ್ಷೇತ್ರಕ್ಕೆ ಬಂದು ದೇವಿಗೆ ಸಿಹಿ ಅಡುಗೆಯ ಪ್ರಸಾದವನ್ನು ನೀಡುತ್ತೇವೆ ಎಂದು ಹರಕೆ ಹೊತ್ತರೆ ಎಷ್ಟೇ ಕಠಿಣವಾದ ಸಮಸ್ಯೆಗಳು ಇದ್ದರೂ ಅವು ದೂರಾಗುತ್ತದೆ ಎನ್ನುವುದು ಇಲ್ಲಿಗೆ ಬಂದು ತಾಯಿಯ ಕೃಪೆಯಿಂದ ಒಳಿತನ್ನು ಕಂಡ ಭಕ್ತರ ಮನದ ಮಾತಾಗಿದೆ. ಪ್ರತಿ ವರ್ಷ ಹೋಸೋರಮ್ಮ ದೇವಿಯ ಜಾತ್ರಾ ಮಹೋತ್ಸವ ವನ್ನಾ ನಡೆಸಲಾಗುತ್ತದೆ. ಈ ಸಮಯದಲ್ಲಿ ಇಲ್ಲಿ ಕುದಿಯುವ ಪಾಯಸಕ್ಕೆ ಕೈ ಹಾಕುವ ವಿಶಿಷ್ಟ ಪದ್ಧತಿಯನ್ನು ಆಚರಿಸಲಾಗುತ್ತದೆ. ಹುಲಿಗೆಮ್ಮ ದೇಗುಲ ಬಿಟ್ಟರೆ ಈ ಕ್ಷೇತ್ರದಲ್ಲಿ ಮಾತ್ರ ಕುದಿಯುವ ಪಾಯಸಕ್ಕೆ ಕೈ ಹಾಕುವ ವಿಶಿಷ್ಟ ಪದ್ಧತಿಯನ್ನು ನೋಡಬಹುದಾಗಿದೆ. ಅಲ್ಲದೆ ಇಲ್ಲಿ ಬಾಳೆ ದಿಂಡು ಪವಾಡ ಮತ್ತು ಅಗ್ನಿ ಕುಂಡ ಪವಾಡಗಳು ಜಾತ್ರೆಯಲ್ಲಿ ನೆರೆದ ಜನರ ಮೈ ರೋಮಾಂಚನಗೊಳಿಸುತ್ತದೆ.

ಎಷ್ಟೇ ಜನರು ಬಂದು ಅಗ್ನಿ ಕುಂಡ ಹಾರಿದರೂ ಅವರ ದೇಹಕ್ಕೆ ಕಿಂಚಿತ್ತೂ ಅಗ್ನಿ ಸುಡದೆ ಇರುವುದು ಹೊಸೂರಮ್ಮಾ ದೇವಿಯ ಪವಾಡ ಎಂದೇ ಹೇಳಬಹುದು. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ನವರಾತ್ರಿ ಹಬ್ಬದಂದು ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಮಂಗಳವಾರ ಶುಕ್ರವಾರ ಹುಣ್ಣಿಮೆ ಅಮಾವಾಸ್ಯೆ ಅಂದು ಹೋಸೂರಮ್ಮಾ ದೇವಿಗೆ ಬಗೆ ಬಗೆಯ ಅಲಂಕಾರ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ಹೋಸೂರಮ್ಮನ ಜೊತೆ ಗಣಪತಿ, ಪರಶುರಾಮ, ಮಾತಂಗೇಶ್ವರಿ, ಮೈಲಾರ ಲಿಂಗೇಶ್ವರ, ಆಂಜನೇಯ ಸ್ವಾಮಿ ಮತ್ತು ಮದ್ದಮ್ಮ ದೇವಿಯ ಗುಡಿಗಳನ್ನು ನೋಡಿ ಕಣ್ಣು ತುಂಬಿಕೊಳ್ಳಬಹುದು. ಈ ಕ್ಷೇತ್ರಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಪ್ರತಿನಿತ್ಯ ಉಚಿತ ಅನ್ನ ದಾಸೋಹ ವ್ಯವಸ್ಥೆ ಇದ್ದು, ಅತ್ಯಂತ ಶಕ್ತಿಶಾಲಿ ಆದ ಈ ದೇವಿಯನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ದೇವಿಗೆ ಆಭರಣ ಸಮರ್ಪಣೆ ಸೇವೆ, ಕುಂಕುಮಾರ್ಚನೆ, ನಂದಾ ದೀಪ ಸೇವೆ, ಉಡಿ ಸೇವೆ, ಹಣ್ಣು ಕಾಯಿ ಸಮರ್ಪಣಾ ಸೇವೆಗಳನ್ನು ಮಾಡಿಸಬಹುದು. ಹೊಸುರಮ್ಮಾ ದೇವಿ ನೆಲೆ ನಿಂತ ಈ ಕ್ಷೇತ್ರವು ಹೊಸದಾಗಿ ಘೋಷಣೆ ಆದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿದೆ. ಹುಲಿಗಿ ಕ್ಷೇತ್ರಕ್ಕೆ ಹೋದಾಗ ತಪ್ಪದೇ ಈ ದೇವಿಯ ಆಲಯಾಕ್ಕೆ ಭೇಟಿ ನೀಡಿ ಹೋಸುರಮ್ಮನ ಆಶೀರ್ವಾದವನ್ನು ಸಾಧ್ಯವಾದರೆ ನೀವೂ ಒಮ್ಮೆ ಪಡೆಯಿರಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *