ನಮಸ್ತೆ ಪ್ರಿಯ ಓದುಗರೇ, ಬಾಳೆ ಗಿಡ ಎಂದ ತಕ್ಷಣ ನಮಗೆ ಮೊದಲಿಗೆ ನೆನಪಾಗೋದು ಬಾಳೆ ಹಣ್ಣು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಾಳೆಹಣ್ಣನ್ನು ಸೇವನೆ ಮಾಡಿರುತ್ತಿರ ಮತ್ತು ಇದರ ಔಷಧೀಯ ಗುಣಗಳನ್ನು ಸಹ ತಿಲಿದಿರುತ್ತಿರಿ. ಆದ್ರೆ ಬಾಳೆಹಣ್ಣಿನ ಹೂವಿನಲ್ಲಿ ಕೂಡ ಅತ್ಯುತ್ತಮವಾದ ಔಷದೀಯ ಗುಣಗಳನ್ನು ಹೊಂದಿದೆ. ಹೌದು ಸ್ನೇಹಿತರೆ ಈ ಬಾಳೆಹಣ್ಣಿನ ಹೂವನ್ನು ಬಾಳೆಹಣ್ಣಿನ ಹೃದಯ ಎಂದು ಕರೆಯುವುದು ಉಂಟು. ಇದ್ರಲ್ಲಿ ಉತ್ತಮವಾದ ಪೌಷ್ಟಿಕಾಂಶಗಳು ಇವೆ. ಈ ಬಾಳೆ ಹೂವಿನಲ್ಲಿ ರಂಜಕ,ಕ್ಯಾಲ್ಸಿಯಂ, ಪೊಟ್ಯಾಸಿಯಂ, ತಾಮ್ರ, ಮಾಗ್ನೆಸಿಯಮ್ ಮತ್ತು ಕಬ್ಬಿಣದಂತಹ ಅಗತ್ಯ ಖನಿಜಗಳು ಸಹ ತುಂಬಿದೆ. ಇದನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು ಹಾಗೂ ಹಲವಾರು ಕಾಯಿಲೆಗಳನ್ನು ಕೂಡ ನಿವಾರಣೆ ಮಾಡುವ ಶಕ್ತಿ ಈ ಬಾಳೆಹಣ್ಣಿನ ಹೂವಿಗೆ ಇದೆ.

 

ಇವತ್ತಿನ ಲೇಖನದಲ್ಲಿ ಬಾಳೆಹಣ್ಣಿನ ಹೂವನ್ನು ಬಳಸಿ ಯಾವೆಲ್ಲ ರೋಗಗಳನ್ನು ಗುಣ ಪಡಿಸಬಹುದು ಎಂದು ಕೆಲವೊಂದಿಷ್ಟು ಮಾಹಿತಿ ತಿಳಿಯೋಣ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಸಕ್ಕರೆ ಕಾಯಿಲೆ ಅನ್ನುವುದು ಸಾಮಾನ್ಯ ಕಾಲಿಯೆ ಆಗಿ ಮಾರ್ಪಟ್ಟಿದೆ. ಈ ಸಮಸ್ಯೆ ಕಾಣಿಸಿಕೊಂಡರೆ ರಕ್ತದಲ್ಲಿರುವ ಸಕ್ಕರೆ ಅಥವಾ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಮತ್ತು ಆಹಾರದ ಮೂಲಕ ದೇಹ ಸೇರುವ ಗ್ಲುಕೋಸ್ ಅಂಶವನ್ನು ಇನ್ಸುಲಿನ್ ಎಂಬ ಹಾರ್ಮೋನ್ ದೇಹದ ಜೀವಕೋಶಗಳಿಗೆ ತಲುಪುವಂತೆ ಮಾಡುತ್ತದೆ. ಆದ್ರೆ ನಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ ದೇಹದ ಪ್ರಮುಖ ಭಾಗಗಳಿಗೆ ಅನೇಕ ಬಾರಿ ಹಾನಿ ಆಗುತ್ತದೆ ಹೀಗಾಗಿ ಸಕ್ಕರೆ ಕಾಯಿಲೆ ಇದ್ದವರು ಆಹಾರ ಕ್ರಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದ್ರೆ ಈ ಸಮಸ್ಯೆ ಇಂದ ಬಳಲುವವರು ಕೆಲ ಆಹಾರಗಳನ್ನು ಸೇವನೆ ಮಾಡುವುದರಿಂದ ಅಥವ ಕುಡಿಯುವುದರಿಂದ ದೇಹದಲ್ಲಿ ಇರುವ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿ ಅತಿಯಾದ ಗ್ಲೂಕೋಸ್ ಹೆಚ್ಚಾದರೆ ಕಣ್ಣಿನ ಸಮಸ್ಯೆ, ಮೂತ್ರ ಪಿಂಡದ ಸಮಸ್ಯೆಗಳು, ನರಗಳಿಗೆ ಹಾನಿಯಾಗಬಹುದು. ಹೀಗಾಗಿ ಸಕ್ಕರೆ ಕಾಯಿಲೆ ಇದ್ದವರು ನೈಸರ್ಗಿಕವಾಗಿ ಸಿಗುವ ಗಿಡ ಮೂಲಿಕೆಗಳ ಉಪಯೋಗ ಮಾಡಿಕೊಂಡು ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಇನ್ನೂ ಸಕ್ಕರೆ ಕಾಯಿಲೆ ಇದ್ದವರು ಇದನ್ನು ಯಾವ ರೀತಿ ಸೇವನೆ ಮಾಡಬೇಕು ಎಂದು ನೋಡುವುದಾದರೆ, ನೀವು ಇದನ್ನು ಪಲ್ಯದ ರೂಪದಲ್ಲಿ ಸಹ ಸೇವನೆ ಮಾಡಬಹುದು. ಬಾಳೆ ಹಣ್ಣಿನ ಹೂವನ್ನು ತಂದು ಅದನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ ನೀವು ಮಾಡುವಂತಹ ತರಕಾರಿ ಪಲ್ಯದಲ್ಲಿ ಸ್ವಲ್ಪ ಸೇರಿಸಿ ಇದನ್ನು ಸೇವನೆ ಮಾಡಬಹುದು ಅಥವಾ ಸಲಾಡ್ ರೂಪದಲ್ಲಿ ಕೂಡ ಇದನ್ನು ಸೇವನೆ ಮಾಡಬಹುದು.

 

ಇನ್ನೂ ಇದನ್ನು ನಿಮ್ಮ ತೂಕವನ್ನು ಇಳಿಸುವಲ್ಲಿ ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಹೂವಿನಲ್ಲಿ ಇರುವ ಪೌಷ್ಟಿಕಾಂಶಗಳು ಸಮೃದ್ಧವಾಗಿ ಇರುವುದರಿಂದ ಇದು ತೂಕ ಇಳಿಸಲು ಸಹ ಸಹಕಾರಿ ಆಗಿದೆ. ತೂಕ ಇಳಿಕೆಗೆ ಬಾಳೆಹಣ್ಣಿನ ಸಲಾಡ್ ಅಥವಾ ಸೂಪ್ ನ್ನೂ ಸೇವನೆ ಮಾಡುವುದು ಬಹಳ ಸೂಕ್ತ. ಇನ್ನೂ ನೀವು ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದ ಒತ್ತಡ ಕಡಿಮೆ ಆಗಿ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿ ಇರುವ ಮೆಗ್ನೀಸಿಯಂ ನಮ್ಮ ದೇಹದಲ್ಲಿರುವ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡಿ ನಮ್ಮನ್ನು ಖಿನ್ನತೆ ಇಂದ ಹೊರಗೆ ಬರಲು ಸಹಾಯ ಮಾಡುತ್ತದೆ. ಈ ಬಾಳೆ ಹೂವು ಉತ್ಕರ್ಷಕ ನಿರೋಧಕ ಗುಣಗಳನ್ನು ಹೊಂದಿದೆ ಇದರಿಂದ ಅಲ್ಜಿಮಲ್ ಅಂತಹ ಸಮಸ್ಯೆಗಳು ಬರುವುದು ಕಡಿಮೆ ಆಗುತ್ತದೆ. ಇದು ನಿಮ್ಮ ಜೀರ್ಣ ಕ್ರಿಯೆಗೆ ಒಳ್ಳೆಯದು. ಈ hoovunalliriva ಉತ್ತಮವಾದ ಫೈಬರ್ ಅಂಶ ನಮ್ಮ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ ಜೊತೆಗೆ ಹೊಟ್ಟೆಯಲ್ಲಿ ಆಹಾರ ಹೀರಿಕೊಳ್ಳಲು ಉತ್ತೇಜಿಸುತ್ತದೆ. ಈ ಬಾಳೆಹಣ್ಣಿನ ಹೂವಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಇರುವುದರಿಂದ ಇದು ನಮ್ಮ ಸಂಪೂರ್ಣ ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಚರ್ಮದ ಮೇಲೆ ಆದ ಸೋಂಕುಗಳು, ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಬಾಳೆ ಹೂವಿನಲ್ಲಿ ಸಹ ನಮ್ಮ ಆರೋಗ್ಯವನ್ನು ಗುಣಪಡಿಸುವ ಅಂಶಗಳು ಸಾಕಷ್ಟಿವೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *