ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಗರ್ಭಿಣಿ ಮಹಿಳೆಯರ ಆರೋಗ್ಯದ ಬಗ್ಗೆ ಕೆಲವೊಂದು ಸಲಹೆಗಳನ್ನು ತಿಳಿಸಿ ಕೊಡುತ್ತೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿದರೇ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಸಿಗುತ್ತದೆ. ಗರ್ಭಿಣಿ ಮಹಿಳೆಯರ ಆರೋಗ್ಯ ಇತರ ಮಹಿಳೆಯರಿಗೆ ಹೋಲಿಸಿದರೆ ತುಂಬಾನೇ ಸೂಕ್ಷ್ಮ ಎಂದು ಹೇಳಲಾಗುತ್ತದೆ. ಗರ್ಭಾವಸ್ಥೆ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರು ಎಷ್ಟು ಜಾಗರೂಕರಾಗಿ ದ್ದರೊ ಕಡಿಮೆಯೇ. ಕಾರಣ ಇಷ್ಟೇ ಗರ್ಭಾವಸ್ಥೆಯಲ್ಲಿ ತಾಯಿ ತನ್ನ ಹಾಗೂ ತನ್ನ ಮಗುವಿನ ಮಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮತ್ತು ತಮ್ಮ ದಿನನಿತ್ಯ ಚಟುವಟಿಕೆಗಳಿಂದ ಹಿಡಿದು ಮಾನಸಿಕ ಒತ್ತಡದ ನಿರ್ವಹಣೆ ಜೊತೆಗೆ ತಮ್ಮ ಆಹಾರ ಪದ್ಧತಿಯಲ್ಲಿ ಸಹ ಸಾಕಷ್ಟು ಗಮನ ವಹಿಸಬೇಕಾಗುತ್ತದೆ. ಹಾಗಾದ್ರೆ ಬನ್ನಿ ಯಾವೆಲ್ಲ ವಿಷಯದ ಬಗ್ಗೆ ತಾಯಿ ಗಮನ ಹರಿಸಬೇಕು ಎಂದು ತಿಳಿದುಕೊಳ್ಳೋಣ. ಮೊದಲನೆಯದಾಗಿ ಪೈನಾಪಲ್ ಹಣ್ಣು, ಈ ಹಣ್ಣನ್ನು ಗರ್ಭಿಣಿ ತನ್ನ ಆಹಾರದಲ್ಲಿ ಸೇರಿಸಿಕೊಳ್ಳ ಬಾರದು. ಇದ್ರಲ್ಲಿ ಅಮ್ಲೀಯ ಗುಣ ಅಧಿಕವಾಗಿರುತ್ತದೆ.
ಇನ್ನೂ ಇದರಿಂದ ಹೊಟ್ಟೆ ಉರಿ ಉಂಟಾಗುತ್ತದೆ. ಇನ್ನೂ ಗರ್ಭಾವಸ್ಥೆಯ ಆರಂಭದ ಹಂತದಲ್ಲಿ ಇದನ್ನು ಸೇವಿಸುವುದರಿಂದ ಗರ್ಭಪಾತ ಆಗುವ ಸಾಧ್ಯತೆ ಇರುತ್ತದೆ. ಈ ಹಣ್ಣಿನಲ್ಲಿರುವ ಬ್ರೈನೋಲಿನ್ ಎಂಬ ಗುಣವೂ ಕೂಡ ಗರ್ಭಪಾತಕ್ಕೆ ಕಾರಣ ಆಗುತ್ತದೆ. ಹಾಗಾಗಿ ಗರ್ಭಿಣಿ ಸ್ತ್ರೀಯರು ಈ ಹಣ್ಣಿನಿಂದ ದೂರ ಇದ್ದರೆ ತುಂಬಾನೇ ಒಳ್ಳೆಯದು. ಎರಡನೆಯದಾಗಿ ಪಪ್ಪಾಯಿ ಹಣ್ಣು. ಎಲ್ಲರಿಗೂ ತಿಳಿದಿರುವ ಹಾಗೆ ಪಪ್ಪಾಯಿ ಹಣ್ಣನ್ನು ಗರ್ಭಿಣಿಯರು ಸೇವಿಸಲೆ ಬಾರದು. ಕಾರಣ ಇಷ್ಟೇ ಪಪ್ಪಯಿಯಲ್ಲಿ ಇರುವ ಲಾಕ್ಟಿಸ್ ಅಂಶ ಗರ್ಭಕೋಶದ ಮೇಲೆ ಒತ್ತಡ ಹಾಕುವುದನ್ನು ಹೆಚ್ಚು ಮಾಡುತ್ತದೆ. ಇದನ್ನು ಅಧಿಕವಾಗಿ ತಿನ್ನುವುದರಿಂದ ಭ್ರೂಣಕ್ಕೆ ಅಪಾಯ ಉಂಟು ಮಾಡುತ್ತದೆ. ಅದು ಗರ್ಭಕೋಶ ಕುಗ್ಗುವಂತೆ ಪ್ರಚೋದಿಸುತ್ತದೆ. ಪಪ್ಪಾಯಿ ಹಣ್ಣು ಒಳಗೊಂಡ ಸಲಾಡ್ ಅಥವಾ ಪಪ್ಪಾಯಿ ಮಿಶ್ರಿತ ಆಹಾರ ಪದಾರ್ಥಗಳನ್ನು ಪಪ್ಪಾಯಿ ಕಿಣ್ವಗಳು ಇರುವ ಪದಾರ್ಥಗಳನ್ನು ಗರ್ಭಿಣಿಯರು ಸೇವಿಸಲೇ ಬಾರದು. ಇದರಿಂದ ಗರ್ಭಕೋಶಕ್ಕೆ ಅಪಾಯ ಇರುತ್ತದೆ. ಈ ಹಣ್ಣಿನಿಂದ ಗರ್ಭಿಣಿಯರು ದೂರ ಇರುವುದೇ ತುಂಬಾ ಉತ್ತಮ.
ಇನ್ನೂ ಮೂರನೆಯದಾಗಿ ನೋಡುವುದಾದರೆ ಅಲೋವೆರಾ. ಗರ್ಭಿಣಿ ಸ್ತ್ರೀಯರು ಯಾವುದೇ ಕಾರಣಕ್ಕೂ ಅಲೋವೆರಾ ವನ್ನಾ ಸೇವಿಸಬಾರದು. ಅಲೋವೆರಾ ಮಿಶ್ರಿತ ಪಾನೀಯ ಮತ್ತು ಇದರ ಅಂಶ ಹೊಂದಿರುವ ಆಹಾರವನ್ನು ಸೇವಿಸಬೇಡಿ. ಇದನ್ನು ಸೇವಿಸುವುದರಿಂದ ರಕ್ತ ಸ್ರಾವ ಆಗುತ್ತದೆ ಅಲ್ಲದೆ ಗರ್ಭಪಾತ ಆಗಲು ಕಾರಣ ಆಗಬಹುದು. ಹಾಗಾಗಿ ಅಲೋವೆರಾ ವನ್ನಾ ಯಾವ ರೀತಿಯಾಗಿ ಸಹ ಗರ್ಭಿಣಿಯರು ದೇವಿಸಲೇ ಬಾರ್ದು. ಇನ್ನೂ ನಾಲ್ಕನೇಯ ದು ದ್ರಾಕ್ಷಿ. ದ್ರಾಕ್ಷಿಯನ್ನು ಉತ್ತಮ ಪೌಷ್ಟಿಕಾಂಶಗಳ ಇವೆ ನಿಜ. ಆದ್ರೆ ಅದರ ಮೇಲೆ ಸಿಂಪಡಿಸಿದ ಕೆಮಿಕಲ್ ಕೆಲವೊಮ್ಮೆ ತೊಳೆದರೂ ಹೋಗುವುದಿಲ್ಲ. ಇದನ್ನು ಗರ್ಭಿಣಿಯರಿಗೆ ಕೊಡುವುದರಿಂದ ಅವರಿಗೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೂ ಅದರ ಸಿಪ್ಪೆಯಲ್ಲಿರುವ ಅಂಶ ಅವರಿಗೆ ಅಷ್ಟು ಒಳ್ಳೆಯದಲ್ಲ. ಗರ್ಭಿಣಿಯರಿಗೆ ಕಪ್ಪು ದ್ರಾಕ್ಷಿ ತಿಂದರೆ ಬೇಗ ಜೀರ್ಣ ಆಗೋದಿಲ್ಲ. ಹಾಗಾಗಿ ಈ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳಿಂದ ದೂರವಿದ್ದರೆ ಒಳ್ಳೆಯದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.