ನಮಸ್ತೆ ಪ್ರಿಯ ಓದುಗರೇ, ಬಹಳಷ್ಟು ಜನರು ತಿಳಿದುಕೊಂಡಿರುವ ಹಾಗೆ ಮೊಟ್ಟೆ, ಮೀನು ಹಾಗೂ ನಾನ್ ವೆಜ್ ಗಳಲ್ಲಿ ಅತೀ ಹೆಚ್ಚು ಶಕ್ತಿವರ್ಧಕ ಪ್ರೊಟೀನ್ ಗಳು ಇರುತ್ತದೆ ಎಂದು ತಿಳಿದಿರುತ್ತಾರೆ. ಆದ್ರೆ ಮಾಂಸವನ್ನು ಎಲ್ಲರೂ ಇಷ್ಟ ಪಡುವುದಿಲ್ಲ ಕೆಲವರಿಗೆ ಸೇವನೆ ಮಾಡಲು ಆಗುವುದಿಲ್ಲ ಮತ್ತು ಮೊಟ್ಟೆ, ಮೀನು , ನಾನ್ ವೆಜ್ ಗಳಿಗಿಂತ ಹೆಚ್ಚು ನಮ್ಮ ಸಸ್ಯ ಆಹಾರದಲ್ಲಿ ಪ್ರೊಟೀನುಗಳು ಮತ್ತು ನಮಗೆ ಬೇಕಾಗಿರುವಂತಹ ಶಕ್ತಿವರ್ಧಕ ವಿಟಮಿನ್ ಗಳು ಎಲ್ಲ ದೊರಕುತ್ತವೆ. ಅಂತಹ ಆಹಾರಗಳನ್ನು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಅಗಸೆ ಬೀಜ , ಸಾವಿರಾರು ವರ್ಷಗಳ ಹಿಂದೆ ಪ್ರತಿನಿತ್ಯ ಆಹಾರವಾಗಿ ಬಳಕೆ ಮಾಡುತ್ತಾ ಇರುವ ಅಗಸೆ ಬೀಜ ಈಗಿನ ಆಧುನಿಕ ಜೀವನದ ಶೈಲಿಯಲ್ಲಿ ಬಹಳಷ್ಟು ಜನರು ಇದನ್ನು ಮರೆತೇ ಬಿಟ್ಟಿದ್ದಾರೆ. ಆದ್ರೂ ಕೂಡ ಉತ್ತರ ಕರ್ನಾಟಕದಲ್ಲಿ ಇದನ್ನು ಅತೀ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಅಗಸೇಬೀಜದಲ್ಲಿ ಇರುವ ಪೌಷ್ಟಿಕಾಂಶಗಳು ಬೇರ್ ಯಾವುದೇ ದಿನನಿತ್ಯ ಆಹಾರದಲ್ಲಿ ಸಿಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಹೌದು ಸ್ನೇಹಿತರೆ, ನೀವೇನಾದರೂ ಇದನ್ನು ಪ್ರತಿನಿತ್ಯ ಉಪಯೋಗ ಮಾಡಿದರೆ ನಿಮ್ಮ ಆರೋಗ್ಯದಲ್ಲಿ ಅದ್ಭುತವಾದ ಬದಲಾವಣೆಯನ್ನು ಕಾಣಬಹುದು.
ಪ್ರಪಂಚದಲ್ಲಿ ಸಿಗುವ ಆಧುನಿಕ ಹಾಗೂ ಉತ್ತಮ ಆಹಾರ ಪದ್ಧತಿ ಪಟ್ಟಿ ಮಾಡಿದರೆ ಅದ್ರಲ್ಲಿ ಮೊದಲನೇ ಸ್ಥಾನ ಈ ಅಗದೇಬೀಜಕ್ಕೆ ಸಿಕ್ಕಿದೆಯಂತೆ. ಕೇವಲ 15 ಗ್ರಾಂ ಅಗಸೇಬೀಜ ನೀವು ತೆಗೆದುಕೊಂಡರೆ ಅದ್ರಲ್ಲಿ 20 ಕೆಜಿ ಶೇಂಗಾ 10 ಕೆಜಿ ಬಾದಾಮಿ ಹಾಗೂ 1 ಕೆಜಿ ಮೀನಿನಲ್ಲಿ ಸಿಗುವಂತಹ ಪೌಷ್ಟಿಕಾಂಶಗಳು ಈ ಅಗಸೆ ಬೀಜದಲ್ಲಿ ಸಿಗುತ್ತದೆ. ಇನ್ನೂ ನೀವು ನಿಯಮಿತವಾಗಿ ಪ್ರತಿನಿತ್ಯ ಸೇವನೆ ಮಾಡಿದರೆ ನಿಮಗೆ ಹೃದಯಕ್ಕೆ ಸಂಬಂಧ ಪಟ್ಟ ಯಾವುದೇ ಕಾಯಿಲೆ ಬರುವುದಿಲ್ಲ ಹಾಗೂ ಹೃದಯಾಘಾತ ಆಗುವುದಿಲ್ಲ. ಅಗಸೆ ಬೀಜದಲ್ಲಿ ನಾರಿನ ಅಂಶ ಇರುವುದರಿಂದ ತೂಕ ಇಳಿಸಲು ಬಹಳ ಉಪಯುಕ್ತವಾಗಿದೆ. ಇದನ್ನು ಸೇವನೆ ಮಾಡುವುದರಿಂದ ಬ್ಯಾಡ್ ಕೊಲೆಸ್ಟ್ರಾಲ್ ಕೂಡ ಕಡಿಮೆ ಆಗುತ್ತದೆ. ಅಗಸೆ ಬೀಜವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಸ್ಥನ ಹಾಗೂ ರಕ್ತ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ. ಅಗಸೆ ಬೀಜದಲ್ಲಿ ಒಮೆಗಾ 3 ಇದೆ. ಇದು ಹೆಚ್ಚಾಗಿ ಮೀನಿನಲ್ಲಿ ಸಿಗುತ್ತದೆ. ಹೆಚ್ಚಾಗಿ ಮೀನನ್ನು ಸೇವನೆ ಮಾಡದೇ ಇರುವವರು ಈ ಅಗಸೆ ಬೀಜವನ್ನು ಸೇವನೆ ಮಾಡಿದರೆ ಒಮೆಗಾ 3 ನಿಮಗೆ ಸಿಕ್ಕಂತೆ ಆಗುತ್ತದೆ. ಒಮೆಗಾ 3 ಇರುವಂತಹ ಆಹಾರಗಳನ್ನು ಸೇವನೆ ಮಾಡಿದರೆ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಹಾಗೂ ಹೃದಯಾಘಾತ ಆಗುವುದಿಲ್ಲ.
ಕೀಲುಗಳ ಹಾನಿಯನ್ನು ತಡೆಗಟ್ಟುತ್ತದೆ. ಮೆದುಳಿನ ಆರೋಗ್ಯಕ್ಕೆ ಹಾಗೂ ಲಿವರ್ ಸಮಸ್ಯೆಗೆ ಕೂಡ ತೊಲಗಿ ಹೋಗುತ್ತದೆ. ಸಕ್ಕರೆ ಕಾಯಿಲೆ ಇದ್ದವರು ಕೂಡ ಇದನ್ನು ಸೇವನೆ ಮಾಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಅಗಸೆ ಬೀಜ ನಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡದೇ ನಿಮ್ಮ ದಿನದ ದಿನಚರಿಯಲ್ಲಿ ಬಳಸಿ. ಪ್ರತಿನಿತ್ಯ ಇದನ್ನು ಸೇವನೆ ಮಾಡಲು ಆಗದೆ ಇದ್ರೆ ವಾರದಲ್ಲಿ ಮೂರು ನಾಲ್ಕು ಬಾರಿಯಾದರೂ ದಯವಿಟ್ಟು ಸೇವನೆ ಮಾಡಿ ಒಳ್ಳೆಯ ಬಂಗಾರದಂತಹ ಆರೋಗ್ಯ ನಿಮ್ಮದಾಗಿಸಿಕೊಳ್ಳಿ. ಯಾಕೆಂದ್ರೆ ಒಂದು ಸಲ ಆರೋಗ್ಯ ಹದಗೆಡಲು ಶುರು ಆದರೆ ವೈದ್ಯರ ಬಳಿ ಹೋದ್ರೆ ದುಬಾರಿ ಔಷಧದ ಮೊರೆ ಹೋಗಬೇಕಾಗುತ್ತದೆ. ಹಾಗಾಗಿ ಆರೋಗ್ಯ ಸರಿ ಇರುವಾಗ ಒಳ್ಳೆಯ ಆಹಾರವನ್ನು ಸೇವನೆ ಮಾಡಿದರೆ ಮುಂದೆ ನಮ್ಮ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ ಜೊತೆಗೆ ಯಾವುದೇ ದೊಡ್ಡ ಕಾಯಿಲೆಗಳು ಬಾರದಂತೆ ಇದು ತಡೆಗಟ್ಟುತ್ತದೆ. ಈ ಆಗದೆ ಬೀಜ ನಿಮ್ಮ ಊರಿನ ಮಾರುಕಟ್ಟೆಯಲ್ಲಿ ಸಿಗುತ್ತದೆ ಇಲ್ಲವಾದರೆ ಅಮೆಜಾನ್ ನಲ್ಲಿ ಸಿಗುತ್ತದೆ. ದಯವಿಟ್ಟು ಇಂದೇ ಆರ್ಡರ್ ಮಾಡಿ ತರಿಸಿಕೊಳ್ಳಿ ಹಾಗೂ ಅತ್ಯಂತ ಹೆಚ್ಚು ಶಕ್ತಿ ಕೊಡುವ ಅಗಸೆ ಬೀಜವನ್ನು ಇಂದಿನಿಂದಲೇ ಸೇವಿಸಲು ಶುರು ಮಾಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.