ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಕಲ್ಲು ಸಕ್ಕರೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ನೀವೆಲ್ಲರೂ ಕಲ್ಲು ಸಕ್ಕರೆ ನೋಡಿರುತ್ತೀರಿ, ಹಾಗೂ ಅದರ ಬಗ್ಗೆ ಕೇಳಿರುತ್ತೀರಿ. ಸಕ್ಕರೆಗೆ ಇಲ್ಲದ ಒಳ್ಳೆಯ ಸ್ವಭಾವ ಈ ಕಲ್ಲು ಸಕ್ಕರೆ ಯಲ್ಲಿ ಏನಿದೆ ಎಂದು ನಿಮ್ಮ ಮನಸಿನಲ್ಲಿ ನೀವು ಅಂದುಕೊಳ್ಳುತ್ತಾ ಇರಬಹುದು. ಇದಕ್ಕೆ ಕಲ್ಲು ಸಕ್ಕರೆ ಯನ್ನೂ ತಯಾರು ಮಾಡುವ ಪ್ರಕ್ರಿಯೆಯನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಈ ಕಲ್ಲುಸಕ್ಕರೆ ತಯಾರು ಮಾಡುವ ವಿಧಾನ ನೋಡಿದರೆ ಬೆಲ್ಲ ಅಥವಾ ಸಕ್ಕರೆ ಯನ್ನ ತಯಾರು ಮಾಡುವ ಸಂದರ್ಭದಲ್ಲಿ ಕೆಲವೊಂದಿಷ್ಟು ಉಳಿದ ಪದಾರ್ಥಗಳನ್ನು ಬಳಸಿ ಸಾವಯವ ಪದ್ದತಿಯಲ್ಲಿ ನೈಸರ್ಗಿಕವಾಗಿ ಈ ಕಲ್ಲುಸಕ್ಕರೆ ನ ತಯಾರು ಮಾಡುತ್ತಾರೆ. ಈ ಕಲ್ಲುಸಕ್ಕರೆ ಸೇವೆನೇ ಮಾಡುವುದರಿಂದ ನಮ್ಮ ಅರೋಗ್ಯಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಾಗಿ ಹಿಂದೆ ಮನೆಯ ಹಿರಿಯರು ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಮೂಗಿನಿಂದ ರಕ್ತ ಸುರಿಯು ತ್ತಿದ್ದರೆ ಅಥವಾ ಮಲದಲ್ಲಿ ರಕ್ತ ಹೋಗುತ್ತಿದ್ದಾರೆ ಆಗ ಮನೆಯ ಹಿರಿಯರು ಕಲ್ಲು ಸಕ್ಕರೆ ತಿನ್ನಲು ಹೇಳುತ್ತಾ ಇರುತ್ತಾರೆ. ಇನ್ನೂ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಾಯಿಲೆಗಳಿಗೆ ಕೂಡ ಗುಳಿಗೆಗಳನ್ನು ತೆಗೆದುಕೊಳ್ಳುತ್ತಾರೆ ಹಾಗಾಗಿ ತುಂಬಾ ಸಂಕಟ ಆಗುತ್ತಾ ಇರುತ್ತದೆ ಅಂಥವರು ಈ ಕಲ್ಲುಸಕ್ಕರೆ ಚೀಪುವುದರಿಂದ ಸಂಕಟ ಕಡಿಮೆ ಆಗುತ್ತದೆ. ಇನ್ನೂ ಕೆಲವರಿಗೆ ಊಟಾ ಆದ ತಕ್ಷಣ ಕೂಡ ಹಸಿವು, ಸಂಕಟ, ನಿಶ್ಯಕ್ತಿ ಇರುತ್ತದೆ ಹಾಗೂ ತಲೆ ತಿರುಗುವ ಅನುಭವ ಆಗುತ್ತಾ ಇರುತ್ತದೆ ಅಂಥವರು ಒಂದು ಸಣ್ಣ ಕಲ್ಲುಸಕ್ಕರೆ ಚೂರನ್ನು ಬಾಯಿಗೆ ಹಾಕಿಕೊಂಡು ಅದರ ರಸವನ್ನು ಹೀರಿಕೊಳ್ಳುತ್ತದೆ ಇರಬೇಕು, ಇದರಿಂದ ಸಂಕಟ, ನಿಶ್ಯಕ್ತಿ, ತಲೆ ತಿರುಗುವುದು ಕಡಿಮೆ ಆಗುತ್ತದೆ.
ಇನ್ನೂ ಸಾಮಾನ್ಯವಾಗಿ ನಮಗೆ ನೆಗಡಿ ಆದಾಗ ನಮಗೆ ಆಹಾರ ಬಾಯಿಗೆ ರುಚಿ ಅನ್ನಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಜೀರ್ಣ ಕ್ರಿಯೆ ಕೂಡ ಚೆನ್ನಾಗಿ ಆಗುತ್ತಾ ಇರುವುದಿಲ್ಲ. ಹೆಚ್ಚಾಗಿ ವಾಕರಿಕೆ ಹಾಗೂ ವಾಂತಿ ಸಮಸ್ಯೆ ಕಾಡುತ್ತಾ ಇರುತ್ತವೆ. ಕೆಲವರಿಗೆ ಅಜೀರ್ಣದ ಸಮಸ್ಯೆ ಉಂಟಾಗಿ ಮಲಬದ್ದತೆ ಸಮಸ್ಯೆ ಕಾಡುತ್ತಾ ಇರುತ್ತವೆ. ಇಂತಹ ಸಂದರ್ಭದಲ್ಲಿ ಒಂದು ಸಣ್ಣ ತುಂಡು ಕಲ್ಲುಸಕ್ಕರೆ ಹಾಕಿಕೊಂಡು ಸ್ವಲ್ಪ ಹೊತ್ತು ಅದರ ರಸವನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ನಿಧಾನವಾಗಿ ಜೀರ್ಣ ಕ್ರಿಯೆ ಕೂಡ ಉತ್ತಮವಾಗುತ್ತದೆ. ಮತ್ತು ನಮ್ಮ ಆರೋಗ್ಯ ಕೂಡ ವೃದ್ಧಿ ಆಗುತ್ತದೆ ಹಾಗೆಯೇ ನಮ್ಮ ಬಾಯಿಗೂ ಕೂಡ ರುಚಿ ಸಿಗುತ್ತದೆ. ಇನ್ನೂ ಈ ಕಲ್ಲುಸಕ್ಕರೆ ಯನ್ನೂ ಕೆಮ್ಮು ಮತ್ತು ಶೀತಕ್ಕೆ ಕೂಡ ಮನೆಮದ್ದು ಆಗಿ ಬಳಸಬಹುದು. ಕೆಲವರಿಗೆ ಆಗಾಗ ಕೆಮ್ಮು ಮತ್ತು ಶೀತದ ಸಮಸ್ಯೆ ಕಾಡುತ್ತಾ ಇರುತ್ತದೆ. ಅಂಥವರು ಈ ಕಲ್ಲುಸಕ್ಕರೆ ಪುಡಿಯಲ್ಲಿ ಕರಿ ಮೆಣಸಿನ ಪುಡಿಯನ್ನು ಹಾಕಿಕೊಂಡು ಅದಕ್ಕೆ ತುಪ್ಪವನ್ನು ಬೆರೆಸಿ ಪೇಸ್ಟ್ ರೀತಿಯಲ್ಲಿ ತಯಾರು ಮಾಡಿ ರಾತ್ರಿ ಸಮಯದಲ್ಲಿ ಸೇವನೆ ಮಾಡಬಹುದು. ಅಥವಾ ಕಲ್ಲುಸಕ್ಕರೆ ಮತ್ತು ಕರಿ ಮೆಣಸಿನ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ಕೆಮ್ಮು ಬೇಗನೆ ನಿವಾರಣೆ ಆಗಲು ಸಹಾಯ ಮಾಡುತ್ತದೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಮಹಿಳೆಯರಿಗೆ ಹಿಮೋಗ್ಲೋಬಿನ್ ಕೊರತೆ ಉಂಟಾಗುತ್ತದೆ. ನಿಯಮಿತವಾಗಿ ಈ ಕಲ್ಲುಸಕ್ಕರೆ ಸೇವನೆ ಮಾಡುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಋತುಚಕ್ರ ಸಮಯದಲ್ಲಿ ಮಹಿಳೆಯರಿಗೆ ಉಂಟಾಗುವ ಮನಸಿನ ಕಿರಿಕಿರಿ ಕೂಡ ಕಲ್ಲುಸಕ್ಕರೆ ಇಂದ ತಪ್ಪುತ್ತದೆ. ಇದನ್ನು ಚಿಕ್ಕಮಕ್ಕಳು ಸೇವನೆ ಮಾಡುವುದರಿಂದ ಅವರ ನೆನಪಿನ ಶಕ್ತಿ ಜಾಸ್ತಿ ಆಗುತ್ತೆ ಹಾಗೆ ದೀರ್ಘ ಕಾಲದ ಮೆದುಳಿನ ಆಯಾಸವನ್ನು ಕಡಿಮೆ ಮಾಡುವ ಶಕ್ತಿ ಈ ಕಲ್ಲುಸಕ್ಕರೆ ಗೆ ಇದೆ. ಮಕ್ಕಳಿಗೆ ರಾತ್ರಿ ಸಮಯದಲ್ಲಿ ಮಲಗುವ ಮುಂಚೆ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಕಲ್ಲುಸಕ್ಕರೆ ಹಾಕಿ ಮಿಶ್ರಣ ಮಾಡಿ ಕೊಡುವುದರಿಂದ ಅವರಿಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಬೇಸಿಗೆ ಕಾಲದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿದರೂ ದಣಿವು ಉಂಟಾದಾಗ ಹಾಗೆಯೇ ಯಾವ ಕೆಲಸವನ್ನೂ ಮಾಡಲು ಇಷ್ಟವೆ ಆಗುತ್ತಿಲ್ಲ ಎಂದಾಗ ಈ ಕಲ್ಲುಸಕ್ಕರೆ ಸೇವನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ನವ ಶೈತನ್ಯ ಸಿಗುತ್ತದೆ. ಜೊತೆಗೆ ನಮ್ಮ ದೇಹದ ದಣಿವು ಸಹ ಮಾಯವಾಗುತ್ತದೆ. ನೋಡಿದ್ರಲ್ವ ಸ್ನೇಹಿತರೆ ಈ ಕಲ್ಲುಸಕ್ಕರೆ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಇವೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.