ಗರ್ಭಿಣಿ ಮಹಿಳೆಯರ ಆರೋಗ್ಯದ ಬಗ್ಗೆ ಕೆಲವು ಸಲಹೆಗಳನ್ನು ಆಧರಿಸಿ ಕೊಡುತ್ತೀವಿ. ಈ ಮಾಹಿತಿ ಪೂರ್ತಿಯಾಗಿ ಓದುವುದರಿಂದ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ. ಗರ್ಭಿಣಿ ಮಹಿಳೆಯರ ಆರೋಗ್ಯ ಇತರರಿಗೆ ಹೋಲಿಸಿದರೆ ತುಂಬಾ ಸೂಕ್ಷ್ಮ ಎಂದು ಹೇಳಬಹುದು. ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ಎಷ್ಟು ಜಾಗರೂಕರಾಗಿ ಇದ್ದರೂ ಕಡಿಮೆಯೇ. ಕಾರಣ ಎಷ್ಟೇ ಗರ್ಭಾವಸ್ಥೆಯಲ್ಲಿ ತಾಯಿ ತನ್ನ ಹಾಗೂ ತನ್ನ ಮಗನ ಆರೋಗ್ಯ ದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ.ಮತ್ತು ತಮ್ಮ ದಿನನಿತ್ಯ ಚಟುವಟಿಕೆಗಳಿಂದ ಹಿಡಿದು ಮಾನಸಿಕ ಒತ್ತಡ ನಿವಾರಣೆ ಜೊತೆಗೆ ತಮ್ಮ ಆಹಾರ ಬದ್ಧತೆಯಲ್ಲಿ ಕೂಡ ಸಾಕಷ್ಟು ಗಮನ ಹರಿಸಬೇಕಾಗುತ್ತದೆ. ಹಾಗಾದ್ರೆ ಬನ್ನಿ ಯಾವೆಲ್ಲ ವಿಷಯದ ಬಗ್ಗೆ ತಾಯಿ ಗಮನಹರಿಸಬೇಕು ಎಂಬುವುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಪೈನಾಪಲ್ ಹಣ್ಣು. ಈ ಹಣ್ಣು ಗರ್ಭಿಣಿ ತನ್ನ ಆಹಾರದಲ್ಲಿ ಸೇವಿಸಿ ಕೊಳ್ಳಲೇ ಬಾರದು.
ಇದರಲ್ಲಿ ಆಮ್ಲೀಯ ಗುಣ ಹೆಚ್ಚು ಅಧಿಕವಾಗಿ ಇರುತ್ತದೆ. ಇನ್ನು ಇದರಿಂದ ಹೊಟ್ಟೆ ಉರಿ ಉಂಟಾಗುತ್ತದೆ. ಈ ಹಣ್ಣು ಗರ್ಭಾವಸ್ಥೆಯ ಆರಂಭದ ಹಂತದಲ್ಲಿ ಇದನ್ನು ಸೇವಿಸುವುದರಿಂದ ಗರ್ಭಪಾತ ಆಗುವ ಸಾಧ್ಯತೆ ಇರುತ್ತದೆ. ಈ ಹಣ್ಣಿನಲ್ಲಿರುವ ಬ್ರೈನೋ ನಿನ್ ಗುಣವು ಕೂಡ ಗರ್ಭಪಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ಗರ್ಭಿಣಿ ಮಹಿಳೆಯರು ಈ ಹಣ್ಣಿನಿಂದ ದೂರ ಇದ್ದರೆ ತುಂಬಾನೆ ಒಳ್ಳೆಯದು.ಹಾಗೆ ಎರಡನೆಯದಾಗಿ ಪಪ್ಪಾಯ. ಎಲ್ಲರಿಗೂ ತಿಳಿದಿರುವ ಹಾಗೆ ಪಪಾಯ ಹಣ್ಣು ಎನ್ನುವ ಗರ್ಭಿಣಿಯರು ಸೇವಿಸಲೇಬಾರದು. ಕಾರಣ ಇಷ್ಟೇ. ಪಪಾಯದಲ್ಲಿರುವ ಲ್ಯಾಕ್ಟೇಸ್ ಅಂಶ ಗರ್ಭಕೋಶದ ಮೇಲೆ ಒತ್ತಡ ಹಾಕುವುದನ್ನು ಹೆಚ್ಚು ಮಾಡುತ್ತದೆ. ಇದನ್ನು ಅಧಿಕವಾಗಿ ತಿನ್ನುವುದರಿಂದ ಭ್ರೂಣಕ್ಕೆ ಅಪಾಯ ಹೂಡುತ್ತದೆ. ಅದು ಗರ್ಭಕೋಶ ಹೋಗುವಂತೆ ಪ್ರಚೋದಿಸುತ್ತದೆ.
ಪಾಪಾಯ ಮಿಶ್ರಿತ ಆಹಾರ ಪದಾರ್ಥಗಳನ್ನು ಮತ್ತು ಪಪಾಯ ಕಿಂ ಪದಾರ್ಥವನ್ನು ಗರ್ಭಿಣಿಯರು ಸೇವಿಸಲೇಬಾರದು. ಇದರಿಂದ ಗರ್ಭಕೋಶಕ್ಕೆ ಅಪಾಯವಾಗುತ್ತದೆ. ಇದರಿಂದ ಗರ್ಭಿಣಿಯರು ದೂರ ಇರುವುದು ತುಂಬಾನೇ ಉತ್ತಮ. ಇನ್ನು ಮೂರನೆಯದಾಗಿ ನೋಡುವುದಾದರೆ ಅಲೋವೆರಾ. ಗರ್ಭಿಣಿ ಮಹಿಳೆಯರು ಯಾವುದೇ ಕಾರಣಕ್ಕೂ ಅಲೋವೆರಾವನ್ನು ಸೇವಿಸಬಾರದು.ಅಲೋವೆರಾ ಮಿಶ್ರಿತ ಪಾನೀಯ ಮತ್ತು ಇದರ ಅಂಶ ಹೊಂದಿರುವ ಆಹಾರವನ್ನು ಸೇವಿಸಬೇಡಿ ಇದನ್ನು ಸೇವಿಸುವುದರಿಂದ ರಕ್ತಸ್ರಾವ ಉಂಟಾಗುತ್ತದೆ. ಅದಲ್ಲದೆ ಗರ್ಭಪಾತಕ್ಕೆ ಕೂಡ ಇದು ಕಾರಣವಾಗುತ್ತದೆ. ಹಾಗಾಗಿ ಅಲೋವೆರಾವನ್ನು ಯಾವ ರೀತಿಯಾಗಿ ಗರ್ಭಿಣಿಯರು ಸೇವಿಸಲೇಬಾರದು.