ನಮಸ್ತೆ ಪ್ರಿಯ ಓದುಗರೇ, ಜೀವಮಾನದಲ್ಲಿ ಒಮ್ಮೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲಾ ಬಾರಿಯೂ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡುವುದು ಸಾಧ್ಯವಿಲ್ಲ. ಅಂಥವರು ಈ ಕ್ಷೇತ್ರಕ್ಕೆ ಹೋದ್ರೆ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಪುಣ್ಯ ಬರುತ್ತಂತೆ. ಆದ್ರೆ ಈ ಕ್ಷೇತ್ರದಲ್ಲಿ ತಿಮ್ಮಪ್ಪ ದೇವರು ನಮಗೆ ದರ್ಶನ ನೀಡುವುದು ಶ್ರೀನಿವಾಸ ದೇವನ ರೂಪದಲ್ಲಿ ಅಲ್ಲ. ಬದಲಾಗಿ ಆಂಜನೇಯ ಸ್ವಾಮಿ ರೂಪದಲ್ಲಿ. ಬನ್ನಿ ಹಾಗಾದರೆ ತಿರುಪತಿಯ ತಿಮ್ಮಪ್ಪ ಯಾಕೆ ಈ ಸ್ಥಳದಲ್ಲಿ ಆಂಜನೇಯ ಸ್ವಾಮಿ ರೂಪದಲ್ಲಿ ನೆಲೆ ನಿಂತು ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ? ಈ ಕ್ಷೇತ್ರದ ಮಹಿಮೆಗಳನ್ನು ಏನೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಪೀನವೃತ್ತಂ ಮಹಬಾಹುಂ ಸರ್ವಶತ್ರು ನಿವಾರಣ ಮ್ಮ್, ರಾಮಪ್ರಿಯತಂ ದೇವಂ ಭಕ್ತಾ ಭೀಷ್ಟ ಪ್ರದಾಯಕಮ್. ಎಂದು ಧರ್ಮ ಗ್ರಂಥಗಳಲ್ಲಿ ಸ್ತುತಿಸುವ ಆಂಜನೇಯ ಸ್ವಾಮಿಯು ತುಳಸಿಗಿರಿಯಲ್ಲಿ ನೆಲೆ ನಿಂತು ಭಕ್ತರನ್ನು ಹಾರಸುತ್ತಿದ್ದಾನೆ. ಸುಮಾರು 12 ನೆಯ ಶತಮಾನದ ಈ ದೇಗುಲವು ವಿಶಾಲವಾದ ಪ್ರಾಂಗಣ, ಗರ್ಭಗೃಹ, ಗೋಪುರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಆಂಜನೇಯ ಸ್ವಾಮಿ ಅಭಯ ಹಸ್ತ ಮತ್ತು ಗದೆಯನ್ನು ಹಿಡಿದು ಭಕ್ತರಿಗೆ ದರ್ಶನ ನೀಡುತ್ತಿದ್ದು, ಇಲ್ಲಿ ಪವಾನಸುತನ ಜೊತೆ ಮಹೇಶ್ವರ, ಗೋಪಾಲ ಕೃಷ್ಣ, ಹಾಗೂ ನರಸಿಂಹ ದೇವರ ಗುಡಿಗಳು ಸಹ ಇವೆ. ಈ ಸ್ಥಳದಲ್ಲಿ ತುಳಸೀ ಗಿಡಗಳು ಯಥೇಚ್ಛವಾಗಿ ಬೆಳೆಯುತ್ತಿದ್ದು ಈ ಕಾರಣಕ್ಕೆ ಈ ಕ್ಷೇತ್ರಕ್ಕೆ ತುಳಸಿಗೆರೆ, ಅಥವಾ ತುಳಸಿಗಿರಿ ಎಂಬ ಹೆಸರು ಬಂದಿತು. ಹಲವಾರು ಭಕ್ತರು ಈ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ಬಂದು ಆಂಜನೇಯನನ್ನು ದರ್ಶನ ಮಾಡುವುದು ಈ ದೇಗುಲದ ವಿಶೇಷತೆ ಆಗಿದೆ.
ಯಾರೇ ಬಂದು ಏನನ್ನೇ ದೇವರಲ್ಲಿ ನಿಷ್ಕಲ್ಮಶ ಭಕ್ತಿಯಿಂದ ಬೇಡಿದರೆ ಈ ದೇವ ಕೋರಿಕೆಗಳನ್ನು ಪೂರ್ಣ ಮಾಡುತ್ತಾನೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಮನದ ಮಾತಾಗಿದೆ. ಬೇರೆಲ್ಲಾ ಆಂಜನೇಯ ಸ್ವಾಮಿ ದೇಗುಲಕ್ಕಿಂತ ಈ ದೇವಸ್ಥಾನ ತುಂಬಾ ಭಿನ್ನವಾಗಿದ್ದು, ಇಲ್ಲಿ ಸಾಕ್ಷಾತ್ ತಿಮ್ಮಪ್ಪ ದೇವರು ಹನುಮಂತ ದೇವರ ರೂಪದಲ್ಲಿ ದರ್ಶನ ನೀಡುತ್ತಿದ್ದಾನೆ ಎಂದು ಹೇಳಲಾಗುತ್ತದೆ. ತಿಮ್ಮಪ್ಪ ದೇವರುಬೇ ಕ್ಷೇತ್ರದಲ್ಲಿ ಆಂಜನೇಯ ಸ್ವಾಮಿ ರೂಪದಲ್ಲಿ ನೆಲೆಸಿರುವ ಹಿಂದೆ ಒಂದು ಕಥೆ ಕೂಡ ಇದೆ. ಬಹಳ ಹಿಂದೆ ಈ ಕ್ಷೇತ್ರದಲ್ಲಿ ಇದ್ದ ದೇಸಾಯಿ ಅವರು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದು ಪ್ರತಿ ವರ್ಷವೂ ತಿರುಪತಿಗೆ ಹೋಗಿ ದೇವರಿಗೆ ಕಾಣಿಕೆ ಅರ್ಪಿಸಿ ಬರುತ್ತಾ ಇದ್ರು. ಆದ್ರೆ ಒಂದು ಬಾರಿ ತಿರುಪತಿಗೆ ಹೋಗುವಾಗ ಅವರಿಗೆ ತೊಂದರೆ ಉಂಟಾಗಿ ತಿರುಪತಿಗೆ ಹೋಗಲು ಸಾಧ್ಯ ಆಗಲಿಲ್ಲ. ಇದ್ರಿಂದ ದುಖಿತರಾದ ದೇಸಾಯಿಗಳು ನನ್ನನ್ನು ಕ್ಷಮಿಸಿಬಿಡು ಎಂದು ಭಕ್ತಿಯಿಂದ ಬೇಡಿಕೊಂಡರು. ಅಂದು ರಾತ್ರಿ ಅವರ ಕನಸಿನಲ್ಲಿ ಸಾಕ್ಷಾತ್ ತಿಮ್ಮಪ್ಪ ದೇವರು ಕಾಣಿಸಿಕೊಂಡು “ಭಕ್ತ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ಇನ್ನೂ ಮುಂದೆ ನೀನು ತಿರುಪತಿಗೆ ಬರಬೇಕಿಲ್ಲ, ನಾನೇ ನಿನ್ನ ಊರಿನಲ್ಲಿ ಆಂಜನೇಯ ಸ್ವಾಮಿ ರೂಪದಲ್ಲಿ ನೆಲೆ ನಿಲ್ಲುತ್ತೇನೆ ಎಂದು ಹೇಳಿದರಂತೆ. ಮರುದಿನ ದೇಸಾಯಿ ಅವರು ತಮ್ಮೊರನ್ನು ಪೂರ್ತಿಯಾಗಿ ಶೋಧಿಸಿದಾಗ ಅವರಿಗೆ ಒಂದು ಹುತ್ತದಲ್ಲಿ ಆಂಜನೇಯ ಸ್ವಾಮಿ ವಿಗ್ರಹ ದೊರಕಿತು. ನಂತರ ದೇಸಾಯಿ ಅವರು ಈ ವಿಗ್ರಹವನ್ನು ತುಲಸಿಗಿರಿಯಲ್ಲಿ ದೇಗುಲವನ್ನು ನಿರ್ಮಿಸಿದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ಈ ಕ್ಷೇತ್ರಕ್ಕೆ ಹೋಗಿ ಆಂಜನೇಯ ಸ್ವಾಮಿಯ ದರ್ಶನ ಪಡೆದರೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಪುಣ್ಯ ಪ್ರಾಪ್ತಿ ಆಗುತ್ತೆ ಎಂದು ಹೇಳಲಾಗುತ್ತದೆ. ಶನಿವಾರ ಅಮಾವಾಸ್ಯೆ ಹುಣ್ಣಿಮೆ ಯಂದು ಇಲ್ಲಿನ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಈ ದೇಗುಲದಲ್ಲಿ ಪ್ರತಿ ವರ್ಷ ಕಾರ್ತಿಕೋತ್ಸವ ಹಾಗೂ ದೇವರ ಜಾತ್ರಾ ಮಹೋತ್ಸವವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಕಾರ್ತಿಕೋತ್ಸವದಲ್ಲಿ ನೂರಾರು ವರ್ಷದ ಪರಂಪರೆ ಅಂತೆ ಕುಂಬಾರ ಮನೆಯ ಮಡಿಕೆಯನ್ನು ತೊಳೆಯದೆ ಆ ಮಡಿಕೆಯಲ್ಲಿ ಹೆಸರು ಬೇಳೆ ಕಡುಬು, ಜೋಳದ ಕಿಚಡಿ ಹಾಗೂ ಅನ್ನವನ್ನು ಮಾಡಿ ದೇವರಿಗೆ ಸಮರ್ಪಿಸುವ ಪದ್ಧತಿ ಈ ದೇಗುಲದಲ್ಲಿ ನಡೆಯುವ ವಿಶೇಷ ಪದ್ಧತಿ ಆಗಿದೆ. ಇಲ್ಲಿಗೆ ಬರುವ ಪ್ರತಿ ಭಕ್ತರಿಗೆ ಜೋಳದ ಕಿಚಡಿನ ದೇವರ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಮಾರೂತೇಶ್ವರ, ತುಳಸಿಗಿರಿಶ್ವರ ಎಂಬೆಲ್ಲ ಹೆಸರಿನಿಂದ ಕರೆಯುವ ಇಲ್ಲಿನ ಆಂಜನೇಯ ಸ್ವಾಮಿಯನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಇಷ್ಟಾನುಸಾರ ದೇವರಿಗೆ ಪೂಜೆಯನ್ನು ಸಲ್ಲಿಸಬಹುದು. ಈ ಪುಣ್ಯ ಕ್ಷೇತ್ರವೂ ಬಾಗಲಕೋಟೆ ಜಿಲ್ಲೆಯ ತುಳಸಿಗಿರಿ ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ಜೀವಮಾನದಲ್ಲಿ ನೀವೂ ಒಮ್ಮೆ ತಿರುಪತಿ ತಿಮ್ಮಪ್ಪ ಆಂಜನೇಯ ಸ್ವಾಮಿ ರೂಪದಲ್ಲಿ ನೆಲೆ ನಿಂತ ಈ ಪುಣ್ಯ ಕ್ಷೇತ್ರದ ದರ್ಶನ ಪಡೆದು ಕೃತಾರ್ಥರಾಗಿ. ಶುಭದಿನ.