ನಮಸ್ತೆ ಪ್ರಿಯ ಓದುಗರೇ, ಪರಮೇಶ್ವರನು ಎಲ್ಲಿ ನೆಲೆಸಿರುತ್ತಾನೆ ಅಲ್ಲಿ ನಂದಿ ಕೂಡ ನೆಲೆ ನಿಂತಿರುತ್ತಾನೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಾವು ನೀವೆಲ್ಲ ಮಹೇಶ್ವರನ ಆಲಯಗಳಿಗೆ ಹೋದ್ರೆ ಅಲ್ಲಿ ದೇವರ ಮುಂದೆ ನಂದಿಯ ವಿಗ್ರಹ ವನ್ನಾ ಪ್ರತಿಷ್ಠಾಪಿಸಿರು ವುದನ್ನೂ ನೋಡಿರುತ್ತೇವೆ. ಆದ್ರೆ ನಾವು ಇಂದು ಪರಿಚಯಿಸಲು ಹೊರಟಿರುವ ದೇಗುಲದಲ್ಲಿ ವರ್ಷ ಪೂರ್ತಿ ನಂದಿಯ ಬಾಯಿಂದ ಔಷಧೀಯ ಗುಣಗಳನ್ನು ಹೊಂದಿದ ನೀರು ಚಿಮ್ಮುತ್ತಂತೆ. ಬನ್ನಿ ಹಾಗಾದರೆ ಆ ದೇವಸ್ಥಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಸುತ್ತಲೂ ಪಸರಿಸಿರುವ ಹಚ್ಚ ಹಸುರಿನ ವನಸಿರಿಯ ನಡುವೆ ಹರಿ ಶಂಕರ ದೇವರ ಪುಟ್ಟದಾದ ಆಲಯ ಇದ್ದು, ಗರ್ಭಗುಡಿ ಒಳಗಡೆ ಪರಮೇಶ್ವರನು ಲಿಂಗ ರೂಪಿಯಾಗಿ ನೆಲೆ ನಿಂತು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಚಿಕ್ಕದಾಗಿದ್ದರೂ ಕೂಡ ಇಲ್ಲಿರುವ ದೇವನ ಮಹಿಮೆಯಿಂದ ಈ ಕ್ಷೇತ್ರವು ಜಾಗೃತ ಕ್ಷೇತ್ರ ಎಂದು ಖ್ಯಾತವಾಗಿದೆ.
ಈ ಸ್ವಾಮಿಯನ್ನು ನಂಬಿ ಬಂದ್ರೆ ಬದುಕಿನ ಎಲ್ಲ ಸಂಕಷ್ಟಗಳು ದೂರ ಆಗುತ್ತೆ ಎಂದು ಹೇಳಲಾಗುತ್ತದೆ. ಈ ಆಲಯದ ಮುಖ್ಯ ಆಕರ್ಷಣೆ ಏನಂದ್ರೆ ದೇಗುಲದ ಹೊರ ಭಾಗದಲ್ಲಿ ಇರುವ ನಂದಿಯ ಬಾಯಿಂದ ಸದಾ ಕಾಲ ನೀರು ಹರಿದು ಬರುತ್ತದೆ ಎನ್ನುವು ದಾಗಿದ್ದು, ನಂದಿಯ ಬಾಯಿಂದ ಹೊರ ಬರುವ ನೀರಲ್ಲಿ ಔಷಧೀಯ ಗುಣಗಳು ಇದ್ದು, ಈ ನೀರನ್ನು ಕುಡಿದರೆ ರೋಗ ರುಜಿನಗಳು ವಾಸಿ ಆಗುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ರೀತಿಯಾಗಿ ನಂದಿಯ ಬಾಯಿಂದ ಹೊರ ಚಿಮ್ಮುತ್ತಿರುವ ನೀರು ಎಲ್ಲಿಂದ ಬರುತ್ತದೆ ಎನ್ನುವುದನ್ನು ಇಂದಿಗೂ ಕೂಡ ಯಾರಿಂದಲೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇನ್ನೂ ಎಷ್ಟೇ ಬಿರು ಬೇಸಿಗೆ ಇದ್ರೂ ನಂದಿಯ ಬಾಯಿಂದ ಹೊರ ಬರುವ ನೀರಿನ ಹರಿವು ಸ್ವಲ್ಪವೂ ಕಡಿಮೆ ಆಗುವುದಿಲ್ಲ ಎನ್ನುವುದು ಈ ಕ್ಷೇತ್ರದ ಅಚ್ಚರಿಯ ವಿಷಯಗಳಲ್ಲಿ ಒಂದಾಗಿದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ದೇಗುಲದ ಮುಂದಿರುವ ಕಲ್ಯಾಣಿಯಲ್ಲಿ ಸದಾ ಕಾಲ ನೀರು ತುಂಬಿಕೊಂಡು ಇರುತ್ತದೆ.
ಹೀಗಾಗಿ ಈ ನೀರನ್ನು ಮೈ ಮೇಲೆ ಪ್ರೊಕ್ಷಿಸಿಕೊಂಡರೆ ಪರಮೇಶ್ವರನ ಅನುಗ್ರಹದಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ಪಾಪಗಳು ಕಳೆದುಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ಪುಣ್ಯ ಆಲಯವನ್ನು ಸಂದರ್ಶಿಸಲು ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಗಳಿಂದ ಕೂಡ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷವೂ ಶಿವರಾತ್ರಿ ದಿನ ಇಲ್ಲಿನ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಪರಮೇಶ್ವರನು ನೆಲೆ ನಿಂತಿರುವ ಈ ಪುಣ್ಯ ಕ್ಷೇತ್ರವೂ ಬಳ್ಳಾರಿ ಜಿಲ್ಲೆಯ ಸಂಡೂರು ಬಳಿ ಇರುವ ನಂದಿಹಳ್ಳಿ ಎಂಬ ಗ್ರಾಮದಲ್ಲಿದೆ. ಈ ಆಲಯವು ಬೆಂಗಳೂರಿನಿಂದ 320 ಕಿಮೀ, ಶಿವಮೊಗ್ಗದಿಂದ 227 ಕಿಮೀ, ಹೊಸಪೇಟೆಯಿಂದ 33 ಕಿಮೀ, ತೋರಣ ಗಲ್ಲಿನಿಂದ 37 ಕಿಮೀ ದೂರದಲ್ಲಿದೆ. ಸಂಡೂರಿನ ಕಾರ್ತಿಕೇಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ದೇಗುಲಕ್ಕೆ ಭೇಟಿ ನೀಡಿ. ಸಾಧ್ಯವಾದರೆ ನೀವು ಒಮ್ಮೆ ಪ್ರಶಾಂತವಾದ ವಾತಾವರಣದಲ್ಲಿ ಇರುವ ಈ ಪರಮೇಶ್ವರನ ಅನುಗ್ರಹದಿಂದ ಪಾವನರಾಗಿ. ಶುಭದಿನ.