ನಮಸ್ತೆ ಪ್ರಿಯ ಓದುಗರೇ, ಉತ್ತಮ ಆರೋಗ್ಯದೊಂದಿಗೆ ದೀರ್ಘವಾಗಿ ಬಾಳುವುದಕ್ಕೆ ಆಯುರ್ವೇದದಲ್ಲಿ ಅನೇಕ ಮಾರ್ಗಗಳನ್ನು ಸೂಚಿಸಲಾಗಿದೆ. ಸಸ್ಯ ಶಾಸ್ತ್ರದ ಪ್ರಕಾರ ಒಂದೆಲಗ ಅಥವಾ ಬ್ರಾಹ್ಮೀ ಸರಸ್ವತಿಯ ಔಷಧೀಯ ಆಹಾರವಾಗಿ ಉಪಯೋಗಕ್ಕೆ ಬರುವ ಒಂದು ಸಸ್ಯ. ಇದರ ಹೆಸರೇ ಸೂಚಿಸುವಂತೆ ಒಂದೇ ಎಲೆ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯ ಇರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಕರಾವಳಿ ಪರಿಸರದಲ್ಲಿ ಭತ್ತದ ಗದ್ದೆಗಳ ಬದಿಯಲ್ಲಿ ಮತ್ತು ಅಡಿಕೆ ತೋಟಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಈ ಗಿಡದ ಕಾಂಡವೂ ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡು ಮೂರು ನಾಲ್ಕು ಅಂಗುಕಕ್ಕೆ ಬೆಳೆಯುತ್ತದೆ. ಎಲೆಗಳು ಹಸಿರು ಬಣ್ಣದಿಂದ ಕೂಡಿ ದುಂಡಾಗಿ ಇರುತ್ತವೆ. ಏಷ್ಯಾ ಇದರ ಮೂಲ ಉಗಮ ಸ್ಥಾನ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚೀನಾ ಹಾಗೂ ಆಫ್ರಿಕಾಗಳಲ್ಲಿ ಕೂಡ ಇದು ಪಾರಂಪರಿಕ ಔಷಧಿ ಆಗಿ ಬಳಕೆಯಲ್ಲಿದೆ. ಇದರ ವೈಜ್ಞಾನಿಕ ಹೆಸರು ಸೆಂಟ್ರೆಲ್ಲ ಏಷಿಯಾಟಿಕ್ ಎಂದು ಹೇಳಲಾಗುತ್ತದೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಕನ್ನಡದಲ್ಲಿ ಒಂದೆಲಗ ಹಿಂದಿಯಲ್ಲಿ ಬ್ರಾಹ್ಮೀ ಎಂದು ಹೇಳಲಾಗುತ್ತದೆ. ಈ ಸಸ್ಯ ಪ್ರಾಚೀನ ಕಾಲದಿಂದಲೂ ಔಷಧಿ ಗುಣಗಳನ್ನು ಹೊಂದಿದೆ ಎಂದು ಗುರುತಿಸಿಕೊಂಡಿದೆ. ಈ ಸಸ್ಯದ ಎಲ್ಲಾ ಭಾಗಗಳೂ ಆರೋಗ್ಯಕರ ಗುಣಗಳನ್ನು ಔಷಧೀಯ ಗುಣಗಳನ್ನು ಹೊಂದಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಒಂದೆಲಗದ ವಿಶಿಷ್ಟ ರಾಸಾಯನಿಕ ಅಂಶಗಳು ವಿಕೊಸೈಡ್ ಮತ್ತು ರಾಸಾಯನಿಕಗಳು ಮೆದುಳಿನ ಹಾಗೂ ನೆನಪಿನ ಶಕ್ತಿಗೆ ಸಂಭಂದಿಸಿದ ಜೀವಕೋಶಗಳಿಗೆ ಆಧಾರವಾಗಿದೆ. ಮತ್ತು ನರಗಳೊಂದಿಗೆ ಇದು ದಿವ್ಯ ಔಷಧಿ ಎಂದು ಆಯುರ್ವೇದದಲ್ಲಿ ಪರಿಗಣಿಸುತ್ತಾರೆ. ಬ್ರಾಹ್ಮೀ ಎಂಬ ದಿವ್ಯ ಔಷಧೀಯ ಉಲ್ಲೇಖಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಯುರ್ವೇದದಲ್ಲಿ ಎರಡು ಸಾವಿರ ವರ್ಷಕ್ಕೂ ಹೆಚ್ಚು ಮುನ್ನವೇ ಬ್ರಾಹ್ಮೀ ಯನ್ನೂ ಔಷಧಿಯಾಗಿ ಬಳಸುತ್ತಿದ್ದರು. ಹಿಂದಿನ ಋಷಿಗಳು ಬ್ರಾಹ್ಮೀ ಯ ಉಪಯುಕ್ತತೆ ಚಿಕಿತ್ಸೆಗಳಲ್ಲಿ ಬಳಸಿದ್ದಾರೆ, ಅವರ ಪ್ರಕಾರ ಈ ಗಿಡದಲ್ಲಿ ಇರುವ ಗುಣಗಳು ಯಾವುವು ಎಂದರೆ, ಬುದ್ಧಿಯನ್ನು ಹೆಚ್ಚಿಸುವ ಗುಣಗಳು. ನೆನಪಿನ ಶಕ್ತಿವರ್ಧಕ, ಆಯಸ್ಸು ವೃದ್ಧಿಸುವುದು, ಬೌದ್ಧಿಕ ಸಾಮರ್ಥ್ಯ, ಮೆದುಳಿನ ಶಕ್ತಿಯನ್ನು ವೃದ್ಧಿಸುತ್ತದೆ. ಸ್ವರ ಮತ್ತು ದೇಹ ಕಾಂತಿ ವೃದ್ಧಿಸುವ ಗುಣಗಳನ್ನು ಹೊಂದಿರುವ ದಿವ್ಯ ಔಷಧಿ ಆಗಿದೆ. ಇನ್ನೂ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಗಿಡವನ್ನು ಯಾವ ರೀತಿ ಬಳಕೆ ಮಾಡಬೇಕು ಎಂದರೆ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಗಿಡದ ಎರಡು ತಾಜಾ ಎಲೆಗಳನ್ನು ತೆಗೆದುಕೊಂಡು ಸೇವನೆ ಮಾಡಬಹುದು. ಇದರ ಸೇವನೆ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚುವುದು ಜೊತೆಗೆ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೆದುಳಿಗೆ ಸಂಬಂಧಿಸಿದ ಎಲ್ಲ ಕಾಯಿಲೆಗಳನ್ನು ಹೋಗಲಾಡಿಸುತ್ತದೆ. ಈ ಎಲೆಗಳನ್ನು ನೀವು ಹಾಗೆಯೇ ತಿನ್ನಲು ಆಗದೆ ಇದ್ದರೆ ನೀವು ಈ ಗಿಡದ ಎಲೆಗಳನ್ನು ಕೊತ್ತಂಬರಿ ಸೊಪ್ಪಿನ ಹಾಗೆ ಸಲಾಡ್ ಗಳ ಮೇಲೆ ಉದುರಿಸಿ ಬಳಸಬಹುದು. ಇನ್ನೂ ಮಕ್ಕಳು ಇದನ್ನು ಇಷ್ಟ ಪಟ್ಟು ತಿನ್ನಲು ಒಂದೆಲಗದ ಎಲೆಗಳನ್ನು ಕಿತ್ತು ಬಿಸಿಲಿನಲ್ಲಿ ಒಣಗಿಸಬೇಕು. ಅಷ್ಟೇ ಪ್ರಮಾಣದ ಬಾದಾಮಿಯನ್ನು ಹುರಿದು ಇಡಬೇಕು. ಬಳಿಕ ಎರಡನ್ನೂ ಮಿಕ್ಸಿಯಲ್ಲಿ ಪುಡಿ ಮಾಡಿ, ಸ್ವಲ್ಪ ಏಲಕ್ಕಿ ಪುಡಿ, ಶುದ್ಧ ಕೇಸರಿ ದಳಗಳನ್ನು ಸೇರಿಸಿ. ಈ ಪುಡಿಯನ್ನು ಎರಡು ಚಮಚದಷ್ಟು ಒಂದು ಲೋಟ ಹಾಲಿಗೆ ಬೆರೆಸಿ ಸ್ವಲ್ಪ ಕಲ್ಲುಸಕ್ಕರೆ ಅಥವಾ ಬೆಲ್ಲ ಬೆರೆಸಿ ಕೊಡಬೇಕು. ಕಾಡು ಆರಿದ ಹಾಲು ಅಥವಾ ತಂಪು ಹಾಲಿಗೆ ಈ ಪುಡಿಯನ್ನು ಸೇರಿಸಿ. ಕಲ್ಲುಸಕ್ಕರೆ ಅಥವಾ ಬೆಲ್ಲದ ಬಲದು ಜೇನುತುಪ್ಪವನ್ನು ಸಹ ಬೆರೆಸಬಹುದು. ನಿತ್ಯ ಬೆಳಿಗ್ಗೆ ಮಕ್ಕಳಿಗೆ ಇದನ್ನು ಕೊಡುವುದರಿಂದ ಅವರಿಗೆ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ. ಇನ್ನೂ ಮಲಬದ್ದತೆ ಇದ್ದರೆ ಈ ಗಿಡದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿಯನ್ನು ಸೇವಿಸಬಹುದು. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಡಲು ಊಟಾದೊಂದಿಗೆ ಈ ಗಿಡದ ಚಟ್ನಿಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ನೋಡಿದ್ರಲ್ವಾ ಗೆಳೆಯರೇ ಒಂದೆಲಗವನ್ನು ಆಹಾರದೊಂದಿಗೆ ಸೇವಿಸುವುದರಿಂದ ಕೇವಲ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಎಷ್ಟೆಲ್ಲಾ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.