ನಮಸ್ಕಾರ ವೀಕ್ಷಕರೇ. ಇವತ್ತಿನ ಮಾಹಿತಿಯಲ್ಲಿ ಕಾಲಿ ಹೊಟ್ಟೆಯಿಂದ ತುಪ್ಪವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿಸಿ ಕೊಳ್ಳುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಲಾಭವಾಗುತ್ತದೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಆದರೆ ಇದೇನಪ್ಪ ನಾವು ಬೆಳಗ್ಗೆ ಎದ್ದ ತಕ್ಷಣ ಹಾಲು ಟೀ ಕಾಫಿಯನ್ನು ಕುಡಿಯುತ್ತೇವೆ. ಅಂತದ್ರಲ್ಲಿ ತುಪ್ಪ ಜಿಡ್ಡಿನ ಪದಾರ್ಥ ವನ್ನೂ ಸೇವನೆ ಮಾಡಬೇಕಾ ಎಂದುಕೊಳ್ಳುತ್ತಾರೆ. ಆದರೆ ನಿಮ್ಮ ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ನಿಮ್ಮ ಜೀವನ ಶೈಲಿಯನ್ನು ಕೂಡ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ತುಪ್ಪ ಎಂದರೆ ಕೇವಲ ಕೊಬ್ಬಿನ ಪದಾರ್ಥಕ್ಕೆ ಸೀಮಿತವಾಗಿಲ್ಲ. ಆಯುರ್ವೇದದಲ್ಲಿ ತುಪ್ಪಕ್ಕಿ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ಹೌದು ಆಯುರ್ವೇದ ಔಷಧಿ ಪದ್ಧತಿಯಲ್ಲಿ ತುಪ್ಪದ ಬೆಳವಣಿಗೆಯನ್ನು ಹೆಚ್ಚಾಗಿ ಮಾಡುತ್ತಾರೆ.
ಯಾವುದೇ ಚಿಕಿತ್ಸೆ ಇದ್ದರು ಅಥವಾಖಾಲಿ ಹೊಟ್ಟೆಯಿಂದ ಸೇವನೆ ಮಾಡುವುದರಿಂದ ಹೆಚ್ಚಾಗಿ ಪರಿಣಾಮಕಾರಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಯಾಕೆಂದರೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಆಗ ನಮ್ಮ ದೇಹವು ಅದನ್ನು ಸರಿಯಾಗಿ ಹೀರಿಕೊಳ್ಳುತ್ತದೆ. ಇಂದಿನ ದಿನದ ಬಗ್ಗೆ ಆರೋಗ್ಯದಲ್ಲಿ ಹೆಚ್ಚಿನ ಜನರು ಕಾಳಜಿಯನ್ನು ವಹಿಸುತ್ತಾರೆ. ಅದರಲ್ಲಿ ಖಾಲಿ ಹೊಟ್ಟೆಯಲ್ಲಿ ಏನಾದರೂ ಕುಡಿಯಬೇಕು ಏನಾದರೂ ತಿನ್ನಬೇಕು ಅಂತ ಪ್ರತಿನಿತ್ಯ ಮಾಡುತ್ತಾ ಇರುತ್ತಾರೆ. ಕೆಲವರು ಬಿಸಿ ನೀರಿಗೆ 1 ಚಮಚ ಜೇನುತುಪ್ಪ ಅಥವಾ ನಿಂಬೆಹಣ್ಣನ್ನು ಹಿಂಡಿ ಕುಡಿಯುವ ಅಭ್ಯಾಸ ಇರುತ್ತೆ. ಅದೇ ರೀತಿಯಾಗಿ ಮಲಬದ್ಧತೆಯಂತಹ ಸಮಸ್ಯೆ ಇದ್ದವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವನೆ ಮಾಡುತ್ತಾ ಇರುತ್ತಾರೆ. ಈ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಕೇವಲ ಮಲಬದ್ಧತೆ ಸಮಸ್ಯೆ ಅಲ್ಲ. ಇನ್ನು ಹಲವಾರು ರೀತಿಯಾಗಿ ಆರೋಗ್ಯದ ಪ್ರಯೋಜನಗಳನ್ನು ನೀವು ಪಡೆಯಬಹುದು.
ಆ ಪ್ರಯೋಜನಗಳು ಯಾವುದು ಎಂದರೆ ಮೊದಲನೇದಾಗಿ ನಿಮ್ಮ ಜೀವಕೋಶದ ಚಟುವಟಿಕೆ ಹೆಚ್ಚಾಗುವುದಕ್ಕೆ ಆಯುರ್ವೇದದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವನೆ ಮಾಡಬೇಕು. ಇದರಿಂದ ದೇಹದ ಎಲ್ಲ ಜೀವಕೋಶಗಳಿಗೆ ಉತ್ತಮವಾದ ಪೋಷ್ಟಿಕಾಂಶ ಸಿಗುತ್ತದೆ. ಜೊತೆಗೆ ನಮ್ಮ ಜೀವಕೋಶಗಳಿಗೆ ಪುನರ್ಚೇತನ ಸಿಗುತ್ತದೆ. ಎಂದು ಆಯುರ್ವೇದ ಹೇಳುತ್ತದೆ ಅಲ್ಲದೆ. ಉತ್ತಮವಾದ ಆರೈಕೆಯನ್ನು ಕೂಡ ನೀಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮ ತ್ವಚೆಯನ್ನು ಕೂಡ ಕಾಪಾಡುತ್ತದೆ.