ಮೈಕೈ ನೋವು ಈಗ ಮೈಕೈನೋವು ಎನ್ನುವುದು ಸಹಜ ಎಂಬಂತಾಗಿದೆ. ದಿನವೆಲ್ಲ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ದೇಹಕ್ಕೆ ಸಾಕಷ್ಟು ವ್ಯಾಯಾಮ ಇಲ್ಲದಿರುವುದು ಹಾಗೂ ವಿಶ್ರಾಂತಿ ಸಿಗದಿರುವುದು ಹಾಗೂ ಮಲಗುವ ಭಂಗಿಗಳು ಆರೋಗ್ಯದಾಯಕ ವಾಗಿ ಇಲ್ಲದಿರುವಂತಹ ಸಮಸ್ಯೆಗಳಿಂದ ಮೈಕೈ ನೋವು ಸಹಜ ಎಂಬಂತಾಗಿದೆ. ಇದಕ್ಕೆ ಪರಿಹಾರ ಎಂದು ಅನೇಕ ಮಂದಿ ನಾನಾ ರೀತಿಯ ಔಷಧಿಗಳಿಗೆ ಮರೆ ಹೋಗುತ್ತಾರೆ. ಇದು ತಾತ್ಕಾಲಿಕವಾಗಿ ಉಪಶಮನ ನೀಡಿದರು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಇದಕ್ಕೆ ಮನೆಯಲ್ಲಿ ಸಾಕಷ್ಟು ಮದ್ದುಗಳಿವೆ.
ಅವು ಯಾವುವು ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮೊದಲು ನೀವು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಒಂದು ಚಮಚ ಹಸಿ ಶುಂಠಿ ತುಂಡುಗಳನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ತಣ್ಣಗಾದ ಮೇಲೆ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಮೈಕೈ ನೋವು ನಿವಾರಣೆಯಾಗುತ್ತದೆ. ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಮೆಂತೆ ಬೀಜದ ಪುಡಿಯನ್ನು ಬಿಸಿನೀರಿಗೆ ಹಾಕಿ ಸೇವಿಸಿದರೆ ನೋವು ಬೇಗ ಕಡಿಮೆಯಾಗುತ್ತದೆ. ಒಂದು ಲೋಟ ಬಿಸಿ ನೀರಿಗೆ 1 ಚಮಚ ಚಕ್ಕೆ ಪುಡಿ ಸೇರಿಸಿ ಸೇವಿಸಿದರೂ ಸಹ ನೋವು ಕಡಿಮೆಯಾಗುತ್ತದೆ. ಪ್ರತಿದಿನ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯಿಂದ
ಇಡೀ ದೇಹವನ್ನು ಮಸಾಜ್ ಮಾಡಿ ನಂತರ ಬಿಸಿನೀರು ಸ್ನಾನ ಮಾಡಿದರೂ ಸಹ ಮೈಕೈ ನೋವು ಶಮನವಾಗುತ್ತದೆ. ಬಾಳೆಹಣ್ಣು ಸೇಬು ಬಾದಾಮಿ ಒಣ ದ್ರಾಕ್ಷಿಗಳನ್ನು ಪ್ರತಿದಿನ ಸೇವಿಸಿದರೂ ಸಹ ನೋವು ಮಾಯವಾಗುತ್ತದೆ. ಪ್ರತಿದಿನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಮತ್ತು ಬೆಳ್ಳುಳ್ಳಿಯಿಂದ ತಯಾರಿಸಿದ ಎಣ್ಣೆಯನ್ನು ದೇಹಕ್ಕೆ ಮಸಾಜ್ ಮಾಡಿದರೂ ಸಹ ಮೈಕೈ ನೋವು ನಿವಾರಣೆಯಾಗುತ್ತದೆ. 10 ಹಸಿ ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ದಿನ ಕ್ಕೆ ಎರಡು ಬಾರಿ ಸೇವಿಸಿದರು ಸಹ ಮೈಕೈ ನೋವು ಕಡಿಮೆಯಾಗುತ್ತದೆ.