ಜನರು ನಿದ್ದೆಯಲ್ಲಿದ್ದಾಗ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಗೊರಕೆ ಬಂದರೆ ಏನು ಮಹಾ ಇದರಿಂದ ಹೆಚ್ಚಿನದಾಗಿ ಪಕ್ಕದಲ್ಲಿ ಮಲಗುವವರ ನಿದ್ರೆ ಹಾಳಾಗಬಹುದು ಹೊರೆತು ಆರೋಗ್ಯಕ್ಕೆ ಏನು ಅಪಾಯವಿಲ್ಲ ಅಂತ ಎಲ್ಲರೂ ಭಾವಿಸುತ್ತಾರೆ. ಆದರೆ ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಸಂಶೋಧನಾ ವರದಿಯೊಂದು ಹೇಳಿದೆ. ಗೊರಕೆ ಯು ಭವಿಷ್ಯದ ಆರೋಗ್ಯದ ಸೂಚಕವಾಗಿದೆ. ಇನ್ನು ನಿದ್ದೆ ಯು ನಮ್ಮ ಕೆಲಸ ಶಕ್ತಿ ಮಾನಸಿಕ ಸಾಮರ್ಥ್ಯ ಸಾಮಾನ್ಯದ ಆರೋಗ್ಯದ ಮೇಲೆ ಪ್ರಭಾವ ಬೀರುವ ಜೀವನದ ಪ್ರಮುಖ ಭಾಗವಾಗಿದೆ ಅಂತ ನ್ಯೂಯಾರ್ಕ್ನ ವಿಶ್ವವಿದ್ಯಾಲಯ ನಿಲಯದ
ಪ್ರಮುಖ ಸಂಶೋಧಕಿ ಹೇಳಿಕೊಂಡಿದ್ದಾರೆ. ನಿದ್ರೆಯು ಆರೋಗ್ಯಕರ ಆರೋಗ್ಯಕರವಾದ ನಿದ್ರೆ ಅಭ್ಯಾಸ ಒಟ್ಟಾರೆ ಜೀವನವನ್ನು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ ಅಂತ ಅವರು ಹೇಳಿದ್ದಾರೆ ಇನ್ನು ಈ ಸಂಶೋಧನೆಯ ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ನಿದ್ದೆಯ ಬಗ್ಗೆ ಹೆಚ್ಚು ಸಾಮಾನ್ಯವಾದ 20 ಊಹೆಗಳನ್ನು ಗುರುತಿಸಲು ಸಂಶೋಧಕರು ಎಂಟು ಸಾವಿರಕ್ಕಿಂತ ಹೆಚ್ಚು ಜಾಲತಾಣ ವೆಬ್ಸೈಟ್ಗಳನ್ನು ಪರಿಶೀಲಿಸಿದ್ದಾರೆ. ಗೊರಕೆ ಇಂದ ಆಗುವ ಅಪಾಯ ಹಾಗೂ ಸತ್ಯದ ಬಗ್ಗೆ ವೈಜ್ಞಾನಿಕ ಸಾಕ್ಷಿಗಳ ಆಧಾರದ ಮೇಲೆ ಈ ವರದಿಯನ್ನು ತಯಾರು ಮಾಡಲಾಗಿದೆ ಅಂತೆ.
ಇನ್ನು ಗೊರಕೆ ಯು ನಿರುಪದ್ರವ ವಾಗಿದ್ದರೂ ಕೂಡ ಇದು ಗಂಭೀರವಾದ ನಿದ್ರಾಹೀನತೆಗೆ ಕಾರಣವಾಗಲಿದೆ ಅಂತ ಅಧ್ಯಯನ ಹೇಳಿದೆ. ಇನ್ನು ಈ ನಿದ್ದೆ ವರ್ತನೆಯು ಹೃದಯಾಘಾತ ಅಥವಾ ಇತರ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಅಂತ ಅವರು ಹೇಳುತ್ತಾರೆ. ಅತಿಯಾದ ಗೊರಕೆ ಸಮಸ್ಯೆ ಇದ್ದರೆ ಅಂತಹ ವ್ಯಕ್ತಿಗಳು ವೈದ್ಯರ ಸಲಹೆ ಪಡೆಯಬೇಕು ಅಂತ ಸಂಶೋಧಕರು ತಿಳಿಸಿದ್ದಾರೆ. ಇನ್ನು ನಂಬಿಕೆಯ ಹೊರತಾಗಿಯೂ ಮಲಗುವ ಮುನ್ನ ಆಲ್ಕೊಹಾಲ್ಯುಕ್ತ ಪಾನೀಯ ಗಳನ್ನು ಸೇವಿಸುವುದರಿಂದ ನಿದ್ರೆಗೆ ಭಂಗ ಬರುವ ಸಾಧ್ಯತೆ ಇದೆ.