WhatsApp Group Join Now

ಸ್ನೇಹಿತರೆ ನಮ್ಮೆಲ್ಲರಿಗೂ ಕನಸು ಅಂತು ಇದ್ದೇ ಇರುತ್ತದೆ ಅದನ್ನು ಮುಟ್ಟುವುದಕ್ಕೆ ನಾವು ಹಗಲು ರಾತ್ರಿ ಕಷ್ಟಪಡುತ್ತೇವೆ ಆದರೆ ನಮಗೆ ಸಹಕಾರ ವಾಗಲು ಸರಕಾರ ಸಹ ಸಹಾಯ ಮಾಡುತ್ತದೆ. ರೈತರಿಗೆ ಕೃಷಿಗೆ ಟ್ರ್ಯಾಕ್ಟರ್ ಬಹಳ ಮುಖ್ಯ. ಆದರೆ ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಟ್ರ್ಯಾಕ್ಟರ್ ಇಲ್ಲದ ತುಂಬಾ ಜನ ರೈತರು ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಟ್ರ್ಯಾಕ್ಟರ್ ಅಥವಾ ಎತ್ತುಗಳನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ರೈತರ ನೆರವಿಗೆ ಸರಕಾರ ಈ ಯೋಜನೆ ತಂದಿದೆ. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಅಡಿಯಲ್ಲಿ ರೈತರಿಗೆ ಅರ್ಧ ಬೆಲೆಗೆ ಟ್ರ್ಯಾಕ್ಟರ್‌ಗಳನ್ನು ನೀಡಲಾಗುತ್ತದೆ.

ಕೇಂದ್ರ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಕಡಿಮೆ ದರದಲ್ಲಿ ಟ್ರ್ಯಾಕ್ಟರ್ ನೀಡುವ ಯೋಜನೆಯನ್ನೂ ಜಾರಿಗೊಳಿಸುತ್ತಿದೆ. ಈ ಯೋಜನೆಯಡಿ ಅರ್ಧ ಬೆಲೆಗೆ ಟ್ರ್ಯಾಕ್ಟರ್‌ಗಳನ್ನು ನೀಡುತ್ತಿದೆ. ಯೋಜನೆಯ ವಿವರಗಳೇನು? ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ಎಂದು ಇಲ್ಲಿ ತಿಳಿಯೋಣ. ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನಮಂತ್ರಿ ಕುಸುಮ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚೈ ಯೋಜನೆ, ಪ್ರಧಾನಮಂತ್ರಿ ಕೃಷಿ ವಿಕಾಸ್ ಯೋಜನೆ. ರೈತರಿಗೆ ತುಂಬಾ ಪ್ರಯೋಜನಕಾರಿಯಾದ ಇಂತಹ ಯೋಜನೆ ಬಗ್ಗೆ ಇಂದು ತಿಳಿಯೋಣ.

ಕೃಷಿಯಲ್ಲಿ ಕೂಲಿ ವೆಚ್ಚಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕಾರ್ಮಿಕರ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರವು ಯಾಂತ್ರೀಕರಣವನ್ನು ಉತ್ತೇಜಿಸುತ್ತಿದೆ. ಇದರ ಭಾಗವಾಗಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ. ಈ ಆದೇಶದಲ್ಲಿ ಟ್ರ್ಯಾಕ್ಟರ್ ಖರೀದಿಗೂ ಸಬ್ಸಿಡಿ ನೀಡಲಾಗಿದೆ. ‘ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ’ ಅಡಿಯಲ್ಲಿ ಸಹಾಯಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು ಸಬ್ಸಿಡಿ ನೀಡುತ್ತದೆ. ಇದರ ಅಡಿಯಲ್ಲಿ ರೈತರು ಯಾವುದೇ ಕಂಪನಿಯ ಟ್ರ್ಯಾಕ್ಟರ್‌ಗಳನ್ನು ಅರ್ಧ ಬೆಲೆಗೆ ಖರೀದಿಸಬಹುದು. ಉಳಿದ ಅರ್ಧದಷ್ಟು ಹಣವನ್ನು ಸರ್ಕಾರವು ಸಹಾಯಧನವಾಗಿ ನೀಡುತ್ತದೆ. ಇದಲ್ಲದೆ, ಅನೇಕ ರಾಜ್ಯ ಸರ್ಕಾರಗಳು ತಮ್ಮದೇ ಮಟ್ಟದಲ್ಲಿ ರೈತರಿಗೆ ಟ್ರ್ಯಾಕ್ಟರ್‌ಗಳ ಮೇಲೆ ಶೇಕಡಾ 20 ರಿಂದ 50 ರಷ್ಟು ಸಬ್ಸಿಡಿಯನ್ನು ಸಹ ನೀಡುತ್ತವೆ.

ಈ ಸಬ್ಸಿಡಿಯನ್ನು 1 ಟ್ರಾಕ್ಟರ್ ಖರೀದಿಗೆ(Buy Tractor) ಮಾತ್ರ ಸರ್ಕಾರವು ನೀಡುತ್ತದೆ. ನೀವು ಸಹ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ರೈತರು ಇದಕ್ಕೆ ಅಗತ್ಯವಾದ ದಾಖಲೆಗಳಾಗಿ ಆಧಾರ್ ಕಾರ್ಡ್, ಜಮೀನು ಕಾಗದ, ಬ್ಯಾಂಕ್ ವಿವರಗಳು, ಪಾಸ್‌ಪೋರ್ಟ್ ಅಳತೆಯ ಫೋಟೋ ಹೊಂದಿರಬೇಕು. ಈ ಯೋಜನೆಯಡಿ, ರೈತರು ಯಾವುದೇ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

WhatsApp Group Join Now

Leave a Reply

Your email address will not be published. Required fields are marked *