WhatsApp Group Join Now

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ರೇಟ್ ಗಗನಕ್ಕೇರಿದೆ ಮನೆಯಲ್ಲಿ ಬೈಕ್ ಇಟ್ಟು ಸರ್ಕಾರದ ವಾಹನಗಳನ್ನು ಬಳಸಲು ಸುಮಾರು ಜನ ಮುಂದಾಗಿದ್ದಾರೆ ಹೌದು ಒಂದು ಹಂತಕ್ಕೆ ಪೆಟ್ರೋಲ್ ರೇಟ್ 113 ಕ್ಕೆ ಏರಿತ್ತು ಇದರಿಂದ ಜನಸಾಮಾನ್ಯರಿಗೆ ತುಂಬಾನೇ ತೊಂದರೆಯಾಗಿತ್ತು ದಿನಗೂಲಿ ಕಾರ್ಮಿಕರ ಪರಿಸ್ಥಿತಿ ತುಂಬಾನೇ ಹದಗೆಟ್ಟಿತ್ತು ಇದೇ ಕಾರಣಕ್ಕೆ ಎಷ್ಟೋ ಜನ ಸೈಕಲ್ ಕೂಡ ಬಳಸುತ್ತಿದ್ದರು. ಆದರೆ ಇದಕ್ಕೆಲ್ಲ ರಿಲೀಫ್ ಸಿಗುವ ಸಾಧ್ಯತೆಗಳು ಬಹಳ ಇವೆ.

ಸರಕು ಸೇವಾ ತೆರಿಗೆ ಮಂಡಿಯ ಬಹುನಿರೀಕ್ಷಿತ ಸಭೆ ಇಂದಿನಿಂದ ಎರಡು ದಿನಗಳ ಕಾಲ ಚಂಡೀಗಡದಲ್ಲಿ ನಡೆಯಲಿದೆ. ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ. ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಲಿ ಚಾಲ್ತಿಯಲ್ಲಿರುವ ಜಿಎಸ್​ಟಿ‌ ಸ್ಲ್ಯಾಬ್​ಗಳಲ್ಲಿ ಅಗತ್ಯ ಬದಲಾವಣೆ ತರುವುದು, ಹೊಸ ಸರಕು ಸೇವೆಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವುದೂ ಸೇರಿದಂತೆ ಹಲವು ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಜಿಎಸ್​ಟಿ ಪರಿಹಾರ ನೀಡಿಕೆಯನ್ನು 5 ವರ್ಷದ ನಂತರವೂ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರಗಳು ಆಗ್ರಹಿಸಲಿವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ಸೇರಿಸಬೇಕೆ ಬೇಡವೇ ಎಂಬ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯುವ ನಿರೀಕ್ಷೆಯಿದೆ. ಪೆಟ್ರೋಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ಸೇರಿಸಿದರೆ ಪೆಟ್ರೋಲ್ ದರವು ಲೀಟರ್​ಗೆ 33 ರೂಪಾಯಿ ಕಡಿಮೆಯಾಗಬಹುದು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ ರಾಜ್ಯ ಸರ್ಕಾರಗಳಿಗೆ ಪೆಟ್ರೊಲ್, ಡೀಸೆಲ್ ಮೇಲೆ ವ್ಯಾಟ್ ವಿಧಿಸಲು ಅವಕಾಶ ಸಿಗುವುದಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರಗಳ ಆದಾಯಕ್ಕೆ ಧಕ್ಕೆಯೊದಗುವ ಅಪಾಯವಿದೆ. ಪರ್ಯಾಯ ಆದಾಯ ಮೂಲಗಳನ್ನು ತೋರಿಸಿಕೊಡದಿದ್ದರೆ ರಾಜ್ಯ ಸರ್ಕಾರಗಳು ಈ ಪ್ರಸ್ತಾವ ವಿರೋಧಿಸುವ ಸಾಧ್ಯತೆಯಿದೆ.

ಜಿಎಸ್​ಟಿ ಜಾರಿಯಾದ ನಂತರ ರಾಜ್ಯ ಸರ್ಕಾರಗಳು ಈ ಹಿಂದೆ ಅಸ್ತಿತ್ವದಲ್ಲಿದ್ದ ಹಲವು ರೀತಿಯ ತೆರಿಗೆಗಳ ಆದಾಯ ಮೂಲಗಳನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರವು ಹಲವಾರು ಈ ವಿಚಾರದಲ್ಲಿ ತಾರತಮ್ಯ ಮಾಡಿದೆ, ಸಕಾಲಕ್ಕೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಕೇಂದ್ರ ಸರ್ಕಾರದ ಸೂಚನೆ ಒಪ್ಪಿಕೊಂಡು, ವ್ಯಾಟ್ ಆದಾಯ ಕಳೆದುಕೊಳ್ಳಲು ರಾಜ್ಯ ಸರ್ಕಾರಗಳು ಸಹಮತ ಸೂಚಿಸುತ್ತಿಲ್ಲ. ಏನೇ ಆಗಲಿ ಇದಂತೂ ಸಾಧ್ಯವಾದರೆ ನಮ್ಮ ಕರ್ನಾಟಕ ಜನತೆಗೆ ತುಂಬಾನೇ ಖುಷಿ ಸುದ್ದಿ ಕೊಡುತ್ತದೆ.ಎಷ್ಟು ದಿನಗಳ ಕಾಲಇಟ್ಟಿದ್ದ ಗಾಡಿ ರಸ್ತೆ ಮೇಲೆ ಹೋಗಲು ಪ್ರಾರಂಭಿಸುತ್ತವೆ ಇದರ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ

WhatsApp Group Join Now

Leave a Reply

Your email address will not be published. Required fields are marked *