ಶ್ರದ್ಧೆಯಿಂದ ಮಾಡುವ ಕೆಲಸ ಯಾವುದಾದರೇನು..? ಅದರ ಪ್ರತಿಫಲ ಖಂಡಿತಾ ಅಷ್ಟೇ ದುಡಿಯೋದಕ್ಕೆ ಸಾವಿರಾರು ದಾರಿ ಇದೆ ಶ್ರಮ ಇದ್ದರೆ ಖಂಡಿತ ನಾವು ಎಲ್ಲಿದ್ದರೂ ಹಣ ಗಳಿಸಬಹುದು ಇಲ್ಲಿ ಒಂದು ಉತ್ತಮವಾದ ಉದಾಹರಣೆ ಇದೆ ಈ ವ್ಯಕ್ತಿ ವಿಜಯಪುರದವನು ಇವನ ಹೆಸರು ಸಾಯಿನಾಥ್ ಶೇರ್ಖಾನೆ . ಮನುಷ್ಯನ ಪರಿಶ್ರಮ ಉತ್ತಮವಾಗಿರುತ್ತದೆ ಅನ್ನೋದಕ್ಕೆ ವಿಜಯಪುರದ ಎಂಬಿಎ ಪದವೀಧರನೊಬ್ಬ ಸಾಕ್ಷಿಯಾಗಿದ್ದಾನೆ.
ಹೌದು ಕೋವಿಡ್ ಸಮಯದಲ್ಲಿಬಹಳಷ್ಟ ಜನರಿಗೆ ಸಂಸಾರವನ್ನು ಹಾಳು ಮಾಡಿದೆ ಹಲವಾರು ಜನ ಬಿದಿಗೆ ಬಂದಿದ್ದಾರೆ. ಇದು ಮಾತ್ರ ನಮ್ಮ ಜೀವನದಲ್ಲಿ ಕಪ್ಪು ಚುಕ್ಕಿಯಾಗಿ ಉಳಿದಿದೆ ಬೆಂಗಳೂರಿನಿಂದ ಕೆಲಸ ಬಿಟ್ಟು ಊರಿಗೆ ತೆರಳಿದ್ದ ಯುವಕ ಕಂಡುಕೊಂಡ ವಿಭಿನ್ನ ದಾರಿಯೇ ಇದೀಗ ಆತನ ಬದುಕಿಗೊಂದು ಒಳ್ಳೆ ದಾರಿಯನ್ನು ತೋರಿಸಿದೆ. ಅಲ್ಲದೇ ಆರ್ಥಿಕವಾಗಿಯೂ ಆ ಯುವಕನನ್ನು ಸಶಕ್ತನನ್ನಾಗಿಸಿದೆ. ಹೆಚ್ಆರ್ ಆಗಿದ್ದ ಯುವಕ ಇದೀಗ ಸ್ವಂತ ಉದ್ಯಮಿ, ಸಾಧಕ. ಅಷ್ಟಕ್ಕೂ ಆ ಯುವಕ ಕಂಡುಕೊಂಡ ಉದ್ಯಮವೇ ಆಡು ಸಾಕಾಣಿಕೆ ಈ ವಿಶಿಷ್ಟ ಸುದ್ದಿ ನೋಡಿ.
ಈ ರೀತಿಯಾಗಿ ಆಡು ಸಾಕಾಣಿಕೆ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ಯುವಕನ ಹೆಸರು ಸಾಯಿನಾಥ್ ಶೇರಖಾನೆ. ವಿಜಯಪುರ ನಗರದ ಗ್ಯಾಂಗಬಾವಡಿ ಗ್ರಾಮದವರು. ಎಂಬಿಎ ಪದವೀಧರನಾದ ಸಾಯಿನಾಥ್ ಶೇರಖಾನೆ ಅರ್ಹವಾಗಿಯೇ ಬೆಂಗಳೂರಿನ ಕಾರ್ಪೊರೇಟ್ ಕಂಪೆನಿಯೊಂದರಲ್ಲಿ ಹೆಚ್ಆರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತಿಂಗಳಿಗೆ ₹40ಸಾವಿರ ಸಂಬಳ ಪಡೆಯುತ್ತಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಲಾಕ್ ಡೌನ್ ಆಗುತ್ತಲೇ ತಮ್ಮ ತವರಿಗೆ ವಾಪಾಸ್ ಆಗಿದ್ದರು. ನಂತರ ಏನು ಕೆಲಸ ಇಲ್ಲದೇ ಬೀದಿ ಬೀದಿ ಸುತ್ತುತ್ತಿದ್ದರು ಮನೆಯಲ್ಲಿ ಕೂಡ ಹಿಯಾಳಿಸುತ್ತಿದ್ದರು.ಹೀಗೆ ಬಂದವರೇ ಮತ್ತೆ ರಾಜ್ಯ ರಾಜಧಾನಿಯ ಕನಸು ಕಾಣದೆ, ತಮ್ಮದೇ ಊರಲ್ಲಿ ಆಡು ಸಾಕಾಣಿಕೆ ನಡೆಸಲು ನಿರ್ಧರಿಸಿದರು. ಹೀಗೆ ಆರಂಭವಾದ ಅವರ ಹೊಸ ಉದ್ಯೋಗ ಈಗ ಉದ್ಯಮವಾಗಿ ಬದಲಾಗಿದೆ.
ಸಾಯಿನಾಥ್ ಶೇರಖಾನೆ ಅವರ ಪರಿಶ್ರಮದಿಂದಾಗಿ ಆಡು ಸಾಕಾಣಿಕೆಯಿಂದಾಗಿ ವರ್ಷಕ್ಕೆ 10 ರಿಂದ 14 ಲಕ್ಷ ಆದಾಯ ಬರುತ್ತಿದೆ. ತಮಗಿರುವ 8 ಎಕರೆ ಜಮೀನಿನಲ್ಲಿ 6 ಎಕರೆಯಷ್ಟು ಕಬ್ಬು ಹಾಕಿ ಇನ್ನುಳಿದ ಎರಡು ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಸಿದ್ದಾರೆ. ಬಹುಬೇಗ ಬೆಳೆಯುವ ಪಂಜಾಬ್ ಬಿಟಲ್ ತಳಿಯ ಆಳೆತ್ತರದ ಆಡುಗಳನ್ನೇ ಅವರು ಸಾಕುತ್ತಿದ್ದಾರೆ. ಸಾಮಾನ್ಯ ಆಡುಗಳಿಗಿಂತ ಇವುಗಳು ವಿಭಿನ್ನವಾಗಿ ಕಾಣುವುದರಿಂದ ಇವುಗಳ ಬೇಡಿಕೆ, ಜೊತೆಗೆ ಆದಾಯವೂ ಹೆಚ್ಚಾಗಿದೆ.
ಬಿಟೆಲ್ ತಳಿ ಆಡುಗಳ 1 ತಿಂಗಳ ಮರಿಗೆ ಸುಮಾರು 16 ರಿಂದ 20 ಸಾವಿರ ಬೆಲೆಯಿದೆ. ವಿಜಯಪುರದ ರೈತರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಯ ಹಾಗೂ ಮಹಾರಾಷ್ಟ್ರದ ರೈತರು ಸಹ ಇವರಲ್ಲಿಗೆ ಬಂದು ಆಡುಗಳನ್ನು ಖರೀದಿಸುತ್ತಾರೆ. ಅದಲ್ಲದೇ, ಸಾಮಾಜಿಕ ಜಾಲತಾಣದ ಮೂಲಕವೂ ಆಡುಗಳ ವ್ಯಾಪಾರ ಮಾಡುತ್ತಾರೆ. ಈಗ ಇವನು ಹಲವಾರು ಜನಗಳಿಗೆ ಮಾದರಿಯಾಗಿದ್ದಾನೆ ನಮ್ಮ ಚಲ ಹೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇದು ಒಂದು ದೊಡ್ಡ ಸಾಕ್ಷಿ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.