ಅಡುಗೆ ಅನಿಲ ಬಳಕೆದಾರರಿಗೆ ಗುಡ್ ನ್ಯೂಸ್ ಒಂದಿದೆ. ಪೆಟ್ರೋಲ್ ಮತ್ತು ಡೀಸೆಲ್‌ನ ಸ್ಥಿರ ಬೆಲೆಯ ನಡುವೆ, ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ಈ ಬಾರಿ ಎಲ್‌ಪಿಜಿ ಸಿಲಿಂಡರ್ ದರ 198 ರೂಪಾಯಿ ಇಳಿಕೆಯಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಕೊಂಚ ನೆಮ್ಮದಿ ದೊರೆತಂತಾಗಿದೆ. ತಿಂಗಳ ಮೊದಲ ದಿನ ಅಂದರೆ ಜುಲೈ 1 ರಂದು ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಜುಲೈ 1 ರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ 198 ರೂಪಾಯಿಗಳಷ್ಟು ಅಗ್ಗವಾಗಿದೆ.
ಇಂದಿನಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 198 ರೂ. ಇಳಿಕೆಯಾಗಿದೆ. ಇಂದಿನಿಂದ ವಾಣಿಜ್ಯ LPG ಸಿಲಿಂಡರ್ ಪರಿಷ್ಕೃತ ಬೆಲೆ ಜಾರಿಯಾಗಿದೆ. ಪ್ರತಿ ತಿಂಗಳ ಮೊದಲ ದಿನವೇ LPG ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ.
ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಡೇನ್ ಗ್ಯಾಸ್ ಸಿಲಿಂಡರ್‌ಗಳ ದರ 198 ರೂ. ಇಳಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ LPG ಸಿಲಿಂಡರ್ ಬೆಲೆ 2,021 ರೂ. ಆಗಿದೆ. ಕೊಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ದರ 182 ರೂ. ಕುಸಿತವಾಗಿದೆ. ಮುಂಬೈನಲ್ಲಿ 190.50 ರೂ. ಇಳಿಕೆಯಾಗಿದೆ. ಚೆನ್ನೈನಲ್ಲಿ 187 ರೂ. ಇಳಿಕೆಯಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಕಡಿತಗೊಳಿಸಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ತಿಳಿಸಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಗ್ರಾಹಕರು ಹೆಚ್ಚಿನ ಬೆಲೆಯ ಭಾರವನ್ನು ಎದುರಿಸುತ್ತಲೇ ಇದ್ದಾರೆ. 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ಅಗ್ಗವಾಗಲಿ, ದುಬಾರಿಯಾಗಲಿ ಇಲ್ಲ. ಮೇ 19ರ ದರದಲ್ಲೇ ಈಗಲೂ ಲಭ್ಯವಿದೆ.
ಕಳೆದ ತಿಂಗಳು ಜೂನ್‌ನಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು 135 ರೂ. ಕಡಿಮೆ ಮಾಡಲಾಗಿತ್ತು. ಆದರೆ, ಮೇ ತಿಂಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಗ್ರಾಹಕರು ಎರಡು ಬಾರಿ ಆಘಾತಕ್ಕೊಳಗಾಗಿದ್ದರು. ಮೇ 7ರಂದು ಮೊದಲ ಬಾರಿಗೆ ಗೃಹಬಳಕೆಯ ಸಿಲಿಂಡರ್‌ನ ದರವನ್ನು 50 ರೂ. ಹೆಚ್ಚಿಸಲಾಗಿತ್ತು. ಮೇ 19ರಂದು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಸಹ ಹೆಚ್ಚಿಸಲಾಗಿತ್ತು.