ನಿವೃತ್ತಿಯಾಯ್ತು ಇನ್ನೇನು ಮಾಡಲಿ ಕೆಲಸವಿಲ್ಲ ಎಂದು ತಿಳಿದುಕೊಂಡು ಕಾಲ ಹರಣ ಮಾಡುವ ಜಗತ್ತಿನಲ್ಲಿ ಕೆಲ ವ್ಯಕ್ತಿಗಳು ಇಡೀ ಜಗತ್ತು ಅವರ ಕಡೆ ತಿರುಗು ನೋಡುವಂತಹ ಕಾರ್ಯಗಳನ್ನು ಮಾಡುತ್ತಾರೆ. ಈ ಸುದ್ದಿ ನಿಮಗೆ ಕೊಂಚ ವಿಭಿನ್ನ ಅನಿಸಬಹುದು ಉಪನ್ಯಾಸಕ ವೃತ್ತಿಯಿಂದ ನಿವೃತ್ತಿ ಪಡೆದ ಇವರು ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ಬಳಿಕ ಉಪನ್ಯಾಸಕರಿಗೂ ಮಾದರಿಯಾಗಿ ನಿಂತಿದ್ದಾರೆ. ನಾಗಮಂಗಲದ ಇವರ ಹೆಸರು ರಾಮಾಂಜನೇಯ. ಇವರದು ಪಾಠ ಹೇಳುವ ಕೆಲಸ ನಿವೃತ್ತಿಯಾದ ಬಳಿಕ ಮನೇಲಿ ಕೂತು ಏನು ಮಾಡುವುದು ಎಂದು ಎಂಟು ವರ್ಷಗಳ ಕಾಲ ಕಾದು ಪ್ಲಾನ್ ಮಾಡಿ. ಇಂದು ಆ ಯೋಜನೆಯಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇವರ ಬಳಿ ಇದ್ದಿದ್ದು ಫಲವತ್ತಾದ ಭೂಮಿಯಲ್ಲ. ಎರಡುವರೆ ಎಕರೆ ವಣಭೂಮಿ.
ಭೂಮಿತಾಯಿಯನ್ನು ನಂಬಿ ಕೃಷಿ ಕಾಯಕವನ್ನು ಆರಂಭಿಸಿದ ಇವರು ಕರಕಲ ಭೂಮಿಯಲ್ಲಿ ಇವರು ಬೋರ್ವೆಲ್ ಅನ್ನು ಹಾಕಿಸುತ್ತಾರೆ. ಆ ಭೂಮಿಯಲ್ಲಿ ತೇಗಮರವನ್ನು ನೇಡುತ್ತಾರೆ. ನಂತರ ಸ್ನೇಹಿತರ ಸಹಾಯದಿಂದ ಬೆಟ್ಟದ ನೆಲ್ಲಿಕಾಯಿ ಹಾಗೂ ಸಪೋಟ ಗಿಡವನ್ನು ಬೆಳೆಸುತ್ತಾರೆ. ಆದರೆ ಸಪೋಟ ಹಣ್ಣು ಕೀಟ ಬಾದೆಯಿಂದ ಹಾನಿಯಾದರೂ ಕೂಡ ಬೆಟ್ಟದ ನೆಲ್ಲಿಕಾಯಿಯಲ್ಲಿ ಯಶಸ್ಸನ್ನು ಕಾಣುತ್ತಾರೆ ಹೀಗಾಗಿ ಸಪೋಟ ಹಣ್ಣನ್ನು ಕಿತ್ತೊಗೆದು ಅಲ್ಲಿ ನೆಲ್ಲಿಕಾಯಿ ಹಾಗೂ ತೆಂಗಿನ ಮರವನ್ನು ನೇಡುತ್ತಾರೆ. ನೆಲ್ಲಿಕಾಯಿ ಗಿಡದಿಂದ ವರ್ಷದ ಅಂತಕ್ಕೆ ಐದರಿಂದ ಆರು ಟನ್ನ ರಷ್ಟು ನೆಲ್ಲಿಕಾಯಿ ದೊರೆಯುತ್ತದೆ. ಸೃಷ್ಟಿ ಬ್ರಾಂಡ್ ಹೆಸರಲ್ಲಿ ನೆಲ್ಲಿಕಾಯಿ ಜ್ಯೂಸ್ ಅನ್ನು ಆರಂಭಿಸುತ್ತಾರೆ. ಅದರಿಂದ ಬಂದ ಹೊಟ್ಟನ್ನು ಔಷಧಿ ನಿರ್ಮಾಣಕ್ಕೆ ನೀಡುತ್ತಾರೆ. ಮತ್ತೆ ಜಂಬೂ ಹಣ್ಣನ್ನು ಬೆಳೆದು ತಾವೇ ವೈನ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಇದರ ಜೊತೆಗೆ ಮಾವಿನ ಹಣ್ಣು ಹಾಗೂ ಚಕೋತ ಎಂಬ ಹಣ್ಣನ್ನು ನೇಡಲು ಪ್ರಾರಂಭಿಸಿ ಅದರಲ್ಲೂ ಯಶಸ್ಸನ್ನು ಕಾಣುತ್ತಾರೆ.
ಇದರ ಜೊತೆಗೆ ರಾಗಿಯನ್ನು ಬೆಳೆಸುತ್ತಾ. ಪ್ರಾಯೋಗಿಕವಾಗಿ ಕಿತ್ತಳೆ ಹಣ್ಣನ್ನು ಕೂಡ ಬೆಳೆಯುತ್ತಾರೆ. ಇನ್ನು ಬೆಂಗಳೂರು ಮತ್ತು ಮುಂತಾದ ಏರಿಯಾದಲ್ಲಿ ಹಾಪ್ ಕಾಮ್ಸ್ ನಲ್ಲಿ ಮಾರುಕಟ್ಟೆಯವನ್ನು ತಿಂಗಳಿಗೆ ಸುಮಾರು ಎರಡರಿಂದ ಮೂರು ಲಕ್ಷ ಆದಾಯಗಳನ್ನು ಗಳಿಸುತ್ತಾರೆ. ಇನ್ನು ಇವರನ್ನು ಸರ್ಕಾರದ ವತಿಯಿಂದ ಹಲವಾರು ಪ್ರಶಸ್ತಿಗಳನ್ನು ಕೂಡ ಕೊಟ್ಟಿದ್ದಾರೆ ಹಾಗೆಯೇ ಹತ್ತಿರ ಗ್ರಾಮಸ್ಥರಗಳಿಂದ ಸನ್ಮಾನ ಕಾರ್ಯಕ್ರಮಗೊಳ್ಳು ಭಾಗವಹಿಸಿ ಸನ್ಮಾನವನ್ನು ಪಡಿಸಿಕೊಂಡಿದ್ದಾರೆ. ಇವರ ಈ ಕಾರ್ಯ ಇವತ್ತಿನ ಕಾಲದ ಹಲವಾರು ಯುವ ಪೀಳಿಗೆಗೆ ಒಂದು ಉದಾಹರಣೆಯಾಗಿ ಏರ್ಪಾಡು ಪಟ್ಟಿದೆ. ನಮ್ಮ ಗುರಿ ಹೊಂದಿದ್ದರೆ ನಾವು ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಇವರ ಕಥೆ ತಕ್ಕ ಉದಾಹರಣೆಯಾಗಿದೆ.
ಇವತ್ತಿಗೆ ಇವರು ಮನೆಯಲ್ಲಿ ಕೂತು ಯಾವುದೂ ಕೆಲಸಕ್ಕೆ ಕೈ ಹಾಕದೆ ಹೋದರೆ ಇವರು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಕೆಲಸ ಮಾಡಬೇಕೆಂದರೆ ಶ್ರದ್ದೆ ಹಾಗೂ ನಿಷ್ಠ ಎಂಬುದು ಇದ್ದರೆ ಯಾವ ಕೆಲಸವೂ ಕೂಡ ನಮ್ಮನ್ನು ಕೈತಪ್ಪಿ ಹೋಗಲಾರದು.