ಎಲ್ಲರಿಗೂ ನಮಸ್ಕಾರ ಹಸಿಕೊಬ್ಬರಿ ತಿಂದರೆ ನಿಮ್ಮ ಶರೀರದಲ್ಲಿ ಆಗುವ ಬದಲಾವಣೆಗಳನ್ನು ಇವತ್ತಿನ ಮಾಹಿತಿ ತಿಳಿಸಿ ಕೊಡುತ್ತೇವೆ ಬನ್ನಿ ಸ್ನೇಹಿತರೆ ನೋಡೋಣ. ಹಸಿ ಕೊಬ್ಬರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಲ್ಪವೃಕ್ಷ ಎಂದೇ ಪರಿಗಣಿಸಲ್ಪಟ್ಟಿರುವ ತೆಂಗಿನ ಮರದ ಫಲದ ಒಳಗಿನ ತಿರುಳನ್ನು ನಾವು ಹೆಚ್ಚಿನ ಅಡುಗೆಗಳಲ್ಲಿ ಬಳಸುತ್ತೇವೆ. ಈ ಭಾಗವನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದಾಗ ಸಿಗುವುದೇ ಕೊಬ್ಬರಿ. ತಿರುಳಿನ ನೀರಿನಂಶವನ್ನು ನಿವಾರಿಸಿ ಕೇವಲ ಎಣ್ಣೆಯ ಅಂಶವನ್ನು ಉಳಿಸಿಕೊಂಡ ಕೊಬ್ಬರಿಯನ್ನು ಸಾಕಷ್ಟು ಸಮಯದವರೆಗೆ ಕೆಡದಂತೆ ಕಾಪಾಡಿ ಇಟ್ಟುಕೊಳ್ಳಬಹುದು.

ನೀರಿನಂಶ ಇಲ್ಲ ಎಂದ ಮಾತ್ರಕ್ಕೇ ತೆಂಗಿನ ಪ್ರಯೋಜನಗಳೂ ಕೊಬ್ಬರಿಯಲ್ಲಿ ಇಲ್ಲ ಎಂದುಕೊಂಡರೆ ತಪ್ಪಾಗುತ್ತದೆ. ಬಹುತೇಕ ಎಲ್ಲಾ ಗುಣಗಳೂ ಕೊಬ್ಬರಿಯಲ್ಲಿ ಉಳಿದುಕೊಳ್ಳುತ್ತವೆ. ಕೊಬ್ಬರಿ ಎಣ್ಣೆ ಸಾಮಾನ್ಯ ತಾಪಮಾನದಲ್ಲಿ ಗಟ್ಟಿಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ಇದು ಅನಾರೋಗ್ಯಕರ ಟ್ರಾನ್ಸ್ ಫ್ಯಾಟ್ ಹೊಂದಿದೆ, ಇದನ್ನು ಸೇವಿಸಬಾರದು ಎಂದು ಹಿಂದಿನ ದಿನಗಳಲ್ಲಿ ಹಬ್ಬಿದ್ದ ವದಂತಿಯನ್ನು ಈಗ ವೈಜ್ಞಾನಿಕ ಮಾಹಿತಿಗಳು ಅಲ್ಲಗಳೆದಿವೆ. ಒಂದು ವೇಳೆ ಹೀಗಾಗಿದ್ದಿದ್ದರೆ ದಿನದ ಮೂರೂ ಹೊತ್ತು ತೆಂಗಿನ ತುರಿಯಿಂದಲೇ ತಯಾರಿಸಿದ ಆಹಾರವನ್ನು ಸೇವಿಸುವ ನಮ್ಮ ಕರಾವಳಿಯ ಅಷ್ಟೂ ಜನರಿಗೆ ಭಯಂಕರ ಹೃದ್ರೋಗವಿರಬೇಕಿತ್ತು. ಇವರೆಲ್ಲಾ ಆರೋಗ್ಯವಾಗಿಯೇ ಇದ್ದಾರೆ ಎಂದರೆ ಮಸಲತ್ತು ಬೇರೇನೋ ಇರಬೇಕು ಎಂಬುದು ಸ್ಪಷ್ಟವಾಗುತ್ತದೆ. ಕೊಬ್ಬರಿಯ ತುರಿಯಲ್ಲಿ ಕೊಬ್ಬರಿ ಎಣ್ಣೆಯ ಅಂಶ ಇರುತ್ತದೆಯೇ ವಿನಃ ಯಾವುದೇ ಟ್ರಾನ್ಸ್ ಫ್ಯಾಟ್ ಅಥವಾ ಕೊಲೆಸ್ಟಾಲ್ ಇರುವುದಿಲ್ಲ. ಕೊಬ್ಬರಿ ತುರಿಯನ್ನು ಕೇವಲ ರುಚಿಗಾಗಿ ಮಾತ್ರವಲ್ಲ, ಆರೋಗ್ಯಕರ ಪ್ರಯೋಜನಗಳಿಗಾಗಿಯೂ ವಿಶ್ವದಾದ್ಯಂತ ಜನರು ಬಳಸುತ್ತಾ ಬಂದಿದ್ದಾರೆ.

ಅಲ್ಲದೇ ತೆಂಗು ಬೆಳೆಯದ ದೇಶಗಳಲ್ಲಿಯೂ ತಾಜಾ ತೆಂಗಿನ ತುರಿ ಲಭ್ಯವಿಲ್ಲದಿದ್ದಾಗ ಕೊಬ್ಬರಿ ತುರಿಯೇ ಸೂಕ್ತ ಆಯ್ಕೆಯಾಗಿ ಲಭ್ಯವಾಗುತ್ತದೆ. ಒಣಗಿದ ಕೊಬ್ಬರಿ ತುರಿಯಲ್ಲಿ ಕರಗುವ ನಾರು, ತಾಮ್ರ, ಮ್ಯಾಂಗನೀಸ್ ಮತ್ತು ಸೆಲೆನಿಯಂನಂತಹ ಅನೇಕ ಅಗತ್ಯ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ಹೆಚ್ಚಿನ ಪೌಷ್ಠಿಕಾಂಶದ ಮೌಲ್ಯದೊಂದಿಗೆ, ಒಣಗಿದ ತೆಂಗಿನ ತುರಿ ಆರೋಗ್ಯಕರ ಜೀವನಕ್ಕಾಗಿ ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಅತ್ಯುತ್ತಮ ಒಣಗಿದ ಆಹಾರಗಳಲ್ಲಿ ಒಂದಾಗಿದೆ.

ಈ ಹಸಿಕೊಬ್ಬರಿ ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯದ ಲಾಭಗಳು ಇವೆ ಅಂತ ಹೇಳುತ್ತೇನೆ ಕೇಳಿ. ಹಸಿ ಕೊಬ್ಬರಿ ಯಾವೆಲ್ಲ ರೋಗಗಳಿಗೆ ರಾಮಬಾಣ ಎಂದರೆ ಹಸಿ ಕೊಬ್ಬರಿಯನ್ನು ತಿನ್ನುವುದರಿಂದ ಶಕ್ತಿ ವೇಗವಾಗಿ ನಮಗೆ ಸಿಗುತ್ತದೆ.

ಗ್ಯಾಸ್ ಆಸಿಡಿಟಿ ಅಲರ್ಜಿ ಮಲಬದ್ಧತೆ ಸಮಸ್ಯೆಗೆ ಇದು ಉತ್ತಮ ಆಹಾರ. ಮಧುಮೇಹ ನಿವಾರಣೆಗೆ ನಿತ್ಯ ಹಸಿ ಕೊಬ್ಬರಿಯನ್ನು ತಿನ್ನಬೇಕು ವಿವಿಧ ಕ್ಯಾನ್ಸರ್ ಗಳ ವಿರುದ್ಧ ಹೋರಾಡಲು ಇದು ಒಳ್ಳೆಯ ಔಷಧ. ಇದರ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಗಳು ಒಳ್ಳೆಯ ಕೊಲೆಸ್ಟ್ರಾಲ್ ಗಳು ಆಗಿ ಬದಲಾವಣೆ ಆಗುತ್ತದೆ. ಥೈರಾಯ್ಡ್ ಸಮಸ್ಯೆ ಇರುವವರು ಕೊಬ್ಬರಿಯನ್ನು ತಿನ್ನಬೇಕು ಕಿಡ್ನಿ ಕಾರ್ಯ ಸುಧಾರಿಸಿ ಕೊಬ್ಬನ್ನು ಕರಗಿಸುತ್ತದೆ. ಹಸಿ ಕೊಬ್ಬರಿ. ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ಸ್ ಬಾಕ್ಸ್ನಲ್ಲಿ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *