ಇವಾಗ ಎಲ್ಲಿ ನೋಡಿದರು ಕಲಂಗಡಿ ಹಣ್ಣು ರಾಶಿ ಹಾಕಿಕೊಂಡಿರುತ್ತಾರೆ. ಕಲಂಗಡಿ ಹಣ್ಣಿನ ಸೀಸನ್ ನಡೆಯುತ್ತಾ ಇರೋದು.ಕಲ್ಲಂಗಡಿ ಹಣ್ಣು ರಸಭರಿತ ಹಣ್ಣು ಎಂಬುದು ಎಲ್ಲರಿಗೂ ಗೊತ್ತಿದೆ. ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣನ್ನು ಜನರು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಈ ಸೀಸನ್ ನಲ್ಲಿ ಜನರು ತುಂಬಾನೆ ಕಲ್ಲಂಗಡಿ ಹಣ್ಣು ತಿನ್ನುವುದಕ್ಕೆ ಮುದಿಬಿಡುತ್ತಾರೆ. ಅದರ ಉಪಯೋಗ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಬೇಸಿಗೆಯಲ್ಲಿ ಬರುವ ಅಂತಹ ಒಂದು ಹಣ್ಣು ಅಂತ ಹೇಳಿದರೆ ಅದು ವಾಟರ್ ಮಿಲನ್ ಅಥವಾ ಕಲ್ಲಂಗಡಿ ಹಣ್ಣು. ಕಲ್ಲಂಗಡಿಯಲ್ಲಿ ಶೇ.90ರಷ್ಟು ನೀರಿನ ಪ್ರಮಾಣ ಇರುವುದರಿಂದ ಇದು ನಿಮ್ಮ ದೇಹಕ್ಕೆ ನೀರಿನಾಂಶವನ್ನು ನೀಡುತ್ತದೆ. ಉಷ್ಣಾಂಶದಿಂದ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಹೆಚ್ಚು ತಂಪಾಗಿರುವುದರಿಂದ ಮಳೆಗಾಲದ ಸಮಯದಲ್ಲಿ ಈ ಹಣ್ಣನ್ನು ಹೆಚ್ಚು ಸೇವಿಸುವುದಿಲ್ಲ.
ತುಂಬಾ ಜನ ಇಷ್ಟಪಟ್ಟು ತಿನ್ನುತ್ತಾರೆ. ಈ ಕಲ್ಲಂಗಡಿ ಹಣ್ಣು ಈ ಬೇಸಿಗೆಕಾಲದಂತಹ ಪರಿಸ್ಥಿತಿಯಲ್ಲಿ ಯಾಕೆ ಬಾಯಲ್ಲಿ ನೀರು ತರುತ್ತದೆ ಗೊತ್ತಾ ಅದರ ಉತ್ತರ ಡಿಹೈಡ್ರೇಷನ್. ಹೌದು ತುಂಬಾ ಜನರಿಗೆ ತುಂಬಾನೇ ಡಿಹೈಡ್ರೇಶನ್ ಸಮಸ್ಯೆ ಇರುತ್ತೆ. ತುಂಬಾ ಬೆವರು ಎಲ್ಲಾ ಹೋಗುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಈ ತರಹದ ಸಮಸ್ಯೆಗಳಿಗೆ ದೂರವಿರುವುದಕ್ಕೆ ವಾಟರ್ ಮಿಲನ್ ತುಂಬಾನೇ ಹೆಲ್ಪ್ ಮಾಡುತ್ತೆ. ಹಾಗೇನೆ ಇದರಲ್ಲಿ ಕ್ಲೋರಿನ್ ತುಂಬಾನೇ ಕಡಿಮೆ ಇರುತ್ತೆ. ತುಂಬಾ ಜಾಸ್ತಿ ನೀರಿನ ಅಂಶ ಇರುವುದರಿಂದ ನಿರ್ಜಲೀಕರಣ ಸಮಸ್ಯೆ ಯಾರಿಗೆ ಇರುತ್ತೆ ಡಿಹೈಡ್ರೇಶನ್ ಯಾರಿಗೆ ಆಗುತ್ತಾ ಇರುತ್ತೆ ಅಂತಹವರು ಇದನ್ನು ಅವಾಗ ಅವಾಗ ಯೂಸ್ ಮಾಡಬಹುದು.
ಕಲ್ಲಂಗಡಿ ಬೀಜಗಳಲ್ಲಿ ಮ್ಯಾಂಗನೀಸ್, ತಾಮ್ರ, ಪೊಟ್ಯಾಸಿಯಂನಂತಹ ಖನಿಜ ಅಂಶ ಹೆಚ್ಚಿದೆ. ಹೀಗಾಗಿ ಇದು ದೇಹದ ಮೂಳೆಗಳಿಗೆ ಬಹಳ ಒಳ್ಳೆಯದು. ಹೌದು ಕಲ್ಲಂಗಡಿ ಬೀಜದಿಂದ ನಮ್ಮ ಮೂಳೆಗಳು ಸಹ ಗಟ್ಟಿಮುಟ್ಟು ಆಗುತ್ತದೆ. ದಂಪತಿಗಳಿಗೆ ಮಕ್ಕಳಾಗದಿರಲು ಕಾರಣ ಕೆಲವೊಮ್ಮೆ ಗಂಡನ ಕೂಡ ಕಾರಣನಾಗುತ್ತಾನೆ ಅಂತಹ ಪರಿಸ್ಥಿತಿಯಲ್ಲಿ ಈ ಬೀಜಗಳು ಅವರಿಗೆ ಸಹಾಯವನ್ನು ಮಾಡುತ್ತವೆ.ಇದು ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲನ್ನು ಬಲಪಡಿಸುತ್ತದೆ.ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಇದರಲ್ಲಿ ಇರುವಂತಹ ವಿಟಮಿನ್-ಸಿ ಏನಿದೆ ಅಸ್ತಮಾ ಪೇಷಂಟ್ ಗೆ ತುಂಬಾನೇ ಹೆಲ್ಪ್ ಆಗುತ್ತೆ ಅವರ ಸಮಸ್ಯೆಯನ್ನು ದೂರವಿರುವುದಕ್ಕೆ ಇನ್ನು ಯಾರು ಹೈಬಿಪಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರಿಗೆ ಕೂಡ ತುಂಬಾನೆ ಒಳ್ಳೆಯದು ಕಲ್ಲಂಗಡಿ ಹಣ್ಣು ಬ್ಲಡ್ ಪ್ರೆಶರ್ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ.