ಕೆಲವು ವ್ಯಕ್ತಿಗಳಿಗೆ ಕೆಲವು ಸಂದರ್ಭದಲ್ಲಿ ಅತಿ ವ ಬಿಕ್ಕಳಿಕೆ ಕಾಣಿಸಿಕೊಳ್ಳುತ್ತದೆ. ಇದರಿಂದ ಆ ವ್ಯಕ್ತಿಗೆ ತೊಂದರೆ ಆಗುವುದು ಮಾತ್ರವಲ್ಲದೆ ಅವರ ಸುತ್ತಮುತ್ತ ಇರುವ ವ್ಯಕ್ತಿಗಳಿಗೂ ಮುಜುಗರ ಆಗುತ್ತದೆ. ಈ ಬಿಕಲಿಕೆ ಸಮಸ್ಯೆ ನಿರಂತರವಾಗಿ ಕಾಣಿಸಿಕೊಳ್ಳದಿದ್ದರೆ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ. ಈ ಚಿಕಿತ್ಸೆಯನ್ನು ಮನೆಯಲ್ಲಿ ಸಿಗುವ ವಸ್ತುಗಳಿಂದಲೂ ಮಾಡಬಹುದು.
ನಾಲ್ಕೈದು ಒಣದ್ರಾಕ್ಷಿಯನ್ನು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೀರಿನ ಜೊತೆ ಸೇವಿಸಿದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಇನ್ನು ಶ್ರೀಗಂಧದ ಪಚಿ ಕರ್ಪೂರವನ್ನು ಎದೆ ಹಾಲಿನಲ್ಲಿ ತೇಯ್ದು ಮೂಗಿನ ಮೂಲಕ ಸೇವಿಸಿ. ಇನ್ನು ಒಂದು ಚಮಚ ಸಕ್ಕರೆಯನ್ನು ಬಾಯಿಯಲ್ಲಿ ಹಾಕಿಕೊಂಡು ನಿಧಾನವಾಗಿ ಸೇವಿಸಿ. ಯಾವತ್ತಾದರೂ ಬಿಕ್ಕಳಿಕೆ ಬಂದಾಗ ಐಸ್ ಪೀಸ್ ಅಥವಾ ತಂಪಾದ ಯಾವುದೇ ವಸ್ತುಗಳನ್ನು ಗಂಟಲಿಗೆ ಹಾಕಿಕೊಳ್ಳಿ. ಇದರಿಂದ ಬಿಕ್ಕಳಿಕೆ ದೂರವಾಗುತ್ತದೆ.
ಇನ್ನು ಮೂರು ಒಣದ್ರಾಕ್ಷಿಯನ್ನು ಜೇನುತುಪ್ಪದಲ್ಲಿ ತೊಯ್ದು ಹೆಸರುಕಾಳಿನ ಗಾತ್ರದಷ್ಟು ಸೇವಿಸಿದರೆ ಬಿಕ್ಕಳಿಕೆ ನಿವಾರಣೆಯಾಗುತ್ತದೆ. ಸತತವಾಗಿ ಬಿಕ್ಕಳಿಕೆ ಬರುತ್ತಿದ್ದರೆ ಹತ್ತರಿಂದ 20ಗ್ರಾಂ ಕಬ್ಬಿನ ಹಾಲನ್ನು ಕುಡಿದರೆ ಬಿಕ್ಕಳಿಕೆ ನಿಲ್ಲುತ್ತದೆ. ಇನ್ನು ಸುದೀರ್ಘ ಉಸಿರನ್ನು ಒಳಗೆ ತೆಗೆದುಕೊಂಡು ನಿಧಾನಕ್ಕೆ ಬಿಡಿ ಇದರಿಂದ ಸಹ ನಿರಂತರವಾಗಿ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಇನ್ನು ಅಮೃತಬಳ್ಳಿಯ ಪುಡಿಯನ್ನು ಶುಂಠಿಪುಡಿ ಹಾಗೂ ಹಾಲಿನಲ್ಲಿ ಬೆರೆಸಿ ಸೇವಿಸಿದರೆ ಬಿಕ್ಕಳಿಕೆ ಕ್ರಮೇಣ ಕಡಿಮೆಯಾಗುತ್ತದೆ. ಹತ್ತರಿಂದ 20gram ನೆಲ್ಲಿಕಾಯಿ ಪುಡಿ ಮತ್ತು ಎರಡು ಚಮಚ ಜೇನುತುಪ್ಪದಲ್ಲಿ ಕಲಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಹಾರವನ್ನು ಕಂಡುಕೊಳ್ಳುತ್ತೀರಿ.