ಹಾಯ್ ಫ್ರೆಂಡ್ಸ್ ಹೇಗಿದ್ದೀರಾ. ಈ ಮಾಹಿತಿಯಲ್ಲಿ ನಾವು ಹಾರ್ಟ್ ಅಟ್ಯಾಕ್ ಅಥವಾ ಹೃದಯಘಾತ ಹೇಗೆ ಬರುತ್ತೆ. ಹೇಗೆ ಬರುತ್ತೆ ಎನ್ನುವ ವಿಷಯವನ್ನು ವಿವರವಾಗಿ ತಿಳಿದುಕೊಳ್ಳೋಣ. ಒಬ್ಬ ಮನುಷ್ಯನ ಹೃದಯ ಒಂದು ದಿನಕ್ಕೆ ಸುಮಾರು ಲಕ್ಷ ಹದಿನೈದು ಸಾವಿರ ಬಾರಿ ಬಡಿದುಕೊಳ್ಳುತ್ತದೆ. ಅದೇ ರೀತಿ ಒಂದು ದಿನಕ್ಕೆ 7600 ಲೀಟರ್ ರಕ್ತ ವನ್ನೂ ಪಂಪು ಕೂಡ ಮಾಡುತ್ತೆ.
ನಮ್ಮ ಹೃದಯ ಎಷ್ಟು ಚಿಕ್ಕದಾಗಿದ್ದರೂ ಎಷ್ಟೊಂದು ಲೆಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಾವು ಆಶ್ಚರ್ಯ ಪಡೆಯಲೇಬೇಕು. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಬಳಸುವ ನೀರಿನ ಪಂಪನ್ನು ದಿನಪೂರ್ತಿ ರನ್ನು ಆನ್ ಮಾಡಿದರೆ ಖಂಡಿತವಾಗಿಯೂ ಅದು ಕೆಟ್ಟು ಹೋಗುತ್ತೆ. ಆದರೆ ನಮ್ಮ ಹೃದಯ ನಿರಂತರವಾಗಿ ನಮ್ಮ ಜೀವನಪೂರ್ತಿ ಕೆಲಸಮಾಡುತ್ತಾನೆ ಇರುತ್ತೆ. ಇಂತಹ ಅದ್ಭುತ ಶಕ್ತಿಯನ್ನು ಹೊಂದಿರುವ ಹೃದಯ ಕೆಲವೊಂದು ಬಾರಿ ಹೇಗೆ ನಿಂತು ಹೋಗುತ್ತೆ. ಹೃದಯಾಘಾತ ಅನ್ನುವುದು ಹೇಗೆ ಸಂಭವಿಸುತ್ತದೆ.
ಇದಕ್ಕೆ ಕಾರಣಗಳೇನು ಇವುಗಳ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಮುಂಚೆ ನಮ್ಮ ಹೃದಯ ನಿರ್ಮಾಣ ಅದರ ಕೆಲಸದ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಹೃದಯದ ಮುಖ್ಯವಾದ ಕೆಲಸ ನಮ್ಮ ದೇಹದ ಎಲ್ಲಾ ಮಾಂಸಖಂಡಗಳಿಗೆ ರಕ್ತ ದ ಮುಖಾಂತರ ಆಕ್ಸಿಜನ್ ಅನ್ನು ಸಪ್ಲೈ ಮಾಡುವುದು. ಆಕ್ಸಿಜನ್ ಇಲ್ಲ ಅಂದರೆ ನಮ್ಮ ಮಾಂಸಖಂಡಗಳು ಕೆಲಸ ಮಾಡುವುದಿಲ್ಲ. ದೇಹದ ಎಲ್ಲಾ ಮಾಂಸಖಂಡಗಳಲ್ಲಿ
ಹೃದಯಕ್ಕೆ ನಿರಂತರವಾಗಿ ಆಕ್ಸಿಜನ್ ಸಪ್ಲೆ ಆಗುತ್ತೆ. ಆಗಲೇ ನಮ್ಮ ಹೃದಯ ನಿಲ್ಲದೆ ಕೆಲಸ ಮಾಡುತ್ತೆ. ಹೃದಯದ ಮಾಂಸಖಂಡಗಳಿಗೆ ಆಕ್ಸಿಜನ್ ಅನ್ನು ಸಪ್ಲೈ ಮಾಡುವ ರಕ್ತನಾಳಗಳನ್ನು ಕರೋನರಿ ಆರ್ಟಿ ಸಂತ ಕರೆಯುತ್ತಾರೆ. ಈ ರಕ್ತ ನಾಳಗಳಲ್ಲಿ ಏನಾದರೂ ಅಡ್ಡ ಬಂದರೆ ಹೃದಯದ ಮಾಂಸಖಂಡಗಳಿಗೆ ಆಕ್ಸಿಜನ್ ಸಪ್ಲೈ ನಿಂತು ಹೋಗುತ್ತೆ. ಆಗ ಹೃದಯ ಕೆಲಸ ಮಾಡುವುದು ನಿಂತು ಹೋಗುತ್ತೆ. ಇದನ್ನೇ ಹಾರ್ಟ್ ಅಟ್ಯಾಕ್ ಅಥವಾ ಹೃದಯಘಾತ ಅಂತ ಕರೆಯುತ್ತಾರೆ.