ನೀವು ಜಿಮ್ ಗೆ ಹೋಗಲು ತೀರ್ಮಾನಿಸಿದ್ದೇವೆ ಹಾಗಾದರೆ ಕೆಲವು ವಿಚಾರಗಳನ್ನು ಪಾಲಿಸಿ. ಹೀಗೆ ಮಾಡಿದರೆ ನೀವು ಫಿಟ್ ನಿಮ್ಮ ಆರೋಗ್ಯವು ಫಿಟ್. ನೀವು ಫಿಟ್ನೆಸ್ ಆಕಾಂಕ್ಷಿ ಆಗಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ಇದ್ದರೆ ಜಿಮ್ ಗೆ ಹೋಗುವ ತೀರ್ಮಾನ ತೆಗೆದುಕೊಂಡಿದೆ ಆದರೆ ಜಿಮ್ ಗೆ ಹೋಗುವ ಮುನ್ನ ಕಡ್ಡಾಯವಾಗಿ ಕೆಲವೊಂದು ವಿಚಾರಗಳನ್ನು ಪಾಲಿಸಬೇಕಾಗುತ್ತದೆ. ಅದೇನೆಂದು ಈ ಮಾಹಿತಿಯಲ್ಲಿ ನೋಡೋಣ ಬನ್ನಿ ಕೆಲವರು ಇರುತ್ತಾರೆ ಚೆನ್ನಾಗಿ ತಿನ್ನುವುದು ಮತ್ತೆ ಜಿಮ್ ಮಾಡುವುದು. ಪಿಜ್ಜಾ ಬರ್ಗರ್ ಕರಿದ ತಿಂಡಿಗಳು ಎಲ್ಲವನ್ನೂ ಚೆನ್ನಾಗಿ ತಿಂದು ಜಿಮ್ ನಲ್ಲಿ ಹೋಗಿ ದಿನಾ ದಿನಕ್ಕಿಂತ ಒಂದು ಅರ್ಧ ಗಂಟೆ ಜಾಸ್ತಿ ಬೆವರು ಹರಿಸಿದರೆ ಸಾಕು ಅಂದುಕೊಂಡಿರುತ್ತಾರೆ. ಆದರೆ ನೀವು ಹೊಸದಾಗಿ ಜಿಮ್ ಮಾಡಲು ಆರಂಭಿಸಿದ್ದಾರೆ ಈ ವಿಚಾರಗಳನ್ನು ನಿಮ್ಮ ಮನಸ್ಸಿನಲ್ಲಿ ಇರಿಸಿಕೊಂಡು ಮುಂದುವರೆಯಿರಿ.
ಜಿಮ್ ಗೆ ಹೋದಾಗ ಅಥವಾ ಮನೆಯಲ್ಲಿ ಟ್ರೆಡ್ಮಿಲ್ ಮಾಡುವಾಗ ಮೊದಲಿಗೆ 15 ನಿಮಿಷ ವಾಗಿ ವಾಕ್ ಮಾಡಿ. ಜಿಮ್ ಗೆ ಹೋಗುವಾಗ ಮೊಟ್ಟೆ ತುಂಬಾ ತಿಂದು ಹೋಗುವುದು ಒಳ್ಳೆಯದಲ್ಲ. ಹಾಗಂತ ಖಾಲಿ ಹೊಟ್ಟೆಯಲ್ಲಿ ಜಿಮ್ ಮಾಡುವುದು ಕೂಡ ಒಳಿತಲ್ಲ. ಜಿಮ್ ಮಾಡಲು ಶಕ್ತಿ ಬೇಕಾಗುವ ಕಾರಣ ಲೈಟಾಗಿ ಏನನ್ನಾದರೂ ತಿನ್ನುವುದು ಒಳ್ಳೆಯದು. ಜಿಮ್ ಮಾಡುವಾಗ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತಲೆಸುತ್ತು ಬಂದು ಬೀಳಬಹುದು ಜಾಸ್ತಿ ನೀರು ಕುಡಿಯಿರಿ ಹಾಗಂತ ವರ್ಕೌಟ್ ಮಾಡುತ್ತಾ ಇರುವಾಗ ಜಾಸ್ತಿ ನೀರು ಕುಡಿಯುವುದು ಒಳಿತಲ್ಲ ಸ್ವಲ್ಪ ಸ್ವಲ್ಪ ಕುಡಿಯಿರಿ. ನನಗೆ ಸಿಕ್ಸ್ ಪ್ಯಾಕ್ ಬೇಕು, ದಪ್ಪ ಆಗಬೇಕು, ಶಕ್ತಿ ಬರಬೇಕು ಎಂದು ಸಾಕಷ್ಟು ಮಂದಿ ಯುವಕರು ಬಯಸುತ್ತಾರೆ. ಇದಕ್ಕಾಗೆ ಕೆಲ ಯುವಕರು ಗಂಟೆ ಗಟ್ಟಲೆ ಜಿಮ್ನಲ್ಲಿ ತಾಲೀಮು ನಡೆಸುತ್ತಾರೆ. ಆದರೆ ನೀವು ಜಿಮ್‍ಗೆ ಹೋಗುವುದರಿಂದ ಎಷ್ಟು ಪ್ರಯೋಜನಗಳಿವೆಯೋ, ಅಷ್ಟೇ ದುಷ್ಪರಿಣಾಮಗಳು ಕೂಡ ಇವೆ.
ನೀವು ನಿರಂತರವಾಗಿ ಜಿಮ್‍ಗೆ ಹೋಗುತ್ತಿದ್ದರೆ ನಿಮ್ಮ ದೇಹ ಗಟ್ಟುಮುಟ್ಟಾಗಿ ಶಕ್ತಿಯುತವಾಗಿರುತ್ತದೆ. ಏನಾದರೂ ಜಿಮ್‍ಗೆ ಹೋಗುವುದನ್ನು ತಕ್ಷಣ ನಿಲ್ಲಿಸಿದರೆ ಕೀಲು ನೋವುಗಳು ಕಾಣಿಸುತ್ತದೆ. ಅಲ್ಲದೆ ಕಾಲಕ್ರಮೇಣ ನಿಮ್ಮ ಸ್ನಾಯುವಿನ ಬಲ ಕುಸಿಯಲು ಪ್ರಾರಂಭಿಸುತ್ತದೆ. ಮುಂದೆ ದೌರ್ಬಲ್ಯದ ಸಮಸ್ಯೆ ಬಂದರೂ ಆಶ್ಚರ್ಯವಿಲ್ಲ. ಅರ್ಧಕ್ಕೆ ಜಿಮ್ ಮಾಡುವುದನ್ನು ನಿಲ್ಲಿಸಿದರೆ ಹೃದಯದ ರಕ್ತನಾಳದ ಶಕ್ತಿ ಕುಸಿಯುತ್ತದೆ. ಕೆಲ ವಾರಗಳ ಕಾಲ ಆರೋಗ್ಯವಾಗಿದ್ದರೂ ಬಳಿಕ ನಿಮ್ಮ ಶರೀರದ ಶಕ್ತಿ ಕುಂದುತ್ತದೆ.
ಜಿಮ್‍ಗೆ ಸೇರುವ ತವಕದಲ್ಲಿ ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಅಂತೆಯೇ ದೇಹಕ್ಕೆ ವಿಶ್ರಾಂತಿ ಕೂಡ ಅಗತ್ಯ. ಜಿಮ್ ಮಾಡುವಾಗ ನಿಮಗೆ ನೀವೇ ಇಷ್ಟಬಂದ ಹಾಗೆ ಮಾಡಬೇಡಿ. ಜಿಮ್ ಮಾಸ್ಟರ್ ಹೇಳಿಕೊಟ್ಟಂತೆ ಅವರ ಸಹಾಯದಿಂದ ಶುರುಮಾಡಿದರೆ ಒಳಿತು