ಸಿಹಿತಿಂಡಿ ಎನ್ನುವುದು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹಬ್ಬಗಳು ಬಂದರೆ ಸಿಹಿ ಸೇವನೆ ಹೆಚ್ಚಾಗುತ್ತದೆ. ಕೊನೆಯಲ್ಲಿ ಐಸ್ ಕ್ರೀಮ್ ಚಾಕಲೇಟ್ ತಿಂದು ಜನರು ತೃಪ್ತಿ ಪಡೆದುಕೊಳ್ಳುತ್ತಾರೆ. ಆದರೆ ಸಿಹಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದೇ ಒಂದು ತಿಂಗಳು ಸಂಪೂರ್ಣ ಸಿಹಿ ಯನ್ನು ತ್ಯಜಿಸಿದರೆ ಆರೋಗ್ಯವೃದ್ಧಿ ಆಗುವುದರಲ್ಲಿ ಮಾತಿಲ್ಲ ಸಿಹಿ ಸೇವನೆ ಬಿಟ್ಟರೆ ತೂಕ ಕಡಿಮೆಯಾಗುತ್ತದೆ. ದೇಹ ಆರೋಗ್ಯವಾಗಿ ಕೆಲಸ ಮಾಡುತ್ತದೆ. ಸಿಹಿ ಸೇವನೆಯಿಂದ ದೂರವಿದ್ದರೆ ಮಧುಮೇಹ ದೂರವಾಗುತ್ತದೆ. ಇನ್ನು ಸಿಹಿ ತಿನ್ನುವ ಆಸೆ ಆದರೆ ಹಣ್ಣುಗಳನ್ನು ಸೇವನೆ ಮಾಡಿ. ಗಂಟಲು ನೋವಿಗೆ ಮೂಲ ಸಕ್ಕರೆ. ಗಂಟಲು ನೋವು ನಿವಾರಣೆ ಆಗಬೇಕು ಸಕ್ಕರೆಯನ್ನು ತ್ಯಜಿಸಬೇಕು. ಇನ್ನು ಸಿಹಿ ಸೇವನೆಯನ್ನು ಬಿಟ್ಟರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇನ್ನು ಡಯಾಬಿಟಿಸ್ ಇರುವವರು ಸಿಹಿಯಿಂದ ದೂರ ಇರುವುದು ಅತಿಮುಖ್ಯ ಡಯಾಬಿಟಿಸ್ ಅಥವಾ ಮಧುಮೇಹ ಅಥವಾ ಸಕ್ಕರೆ ರೋಗ ತುಂಬಾ ಹಳೆ ಕಾಯಿಲೆ. ಮಾನವಕುಲವನ್ನು ನೂರಾರು ವರ್ಷಕಾಲ ಬಾಧಿಸಿದ ಈ ಕಾಯಿಲೆ ಬಗ್ಗೆ ಸಂಸ್ಕೃತದಲ್ಲಿ ಪ್ರಾಚೀನ ದಾಖಲೆಗಳಿವೆ. ‘ಡಯಾಬಿಟಿಸ್’ ಎಂದರೆ ಇಳಿಗೊಳವೆ ಹಾಗೂ ಮೆಲಿಟಸ್(Mellitus) ಎಂದರೆ ಸಿಹಿ. ಪ್ರತಿದಿನ ಡಯಾಬಿಟಿಸ್ ಅಥವಾ ಡಯಾಬಿಟಿಸ್ ಮೆಲಿಟಸ್ ಪದಗಳು ಅದಲು ಬದಲಾಗಿ ಬಳಸಲ್ಪಡುತ್ತಿವೆ.
ಮಧುಮೇಹದ ದೇಹದ ಇತರ ಕಾರ್ಯಚಟುವಟಿಕೆಗಳ ಮೇಲೆ ಕೂಡ ಪರಿಣಾಮ ಬೀರುವುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಔಷಧಿಯು ಲಭ್ಯವಿದ್ದರೂ ಅದು ಸಾಕಾಗದು. ಯಾಕೆಂದರೆ ಜೀವನಶೈಲಿಯಲ್ಲಿ ಬದಲಾವಣೆಯು ಅತೀ ಅನಿವಾರ್ಯ. ಆಹಾರ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆಗ ಖಂಡಿತವಾಗಿಯೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಸ್ಮರಣ ಶಕ್ತಿಯು ಹೆಚ್ಚುತ್ತದೆ. ಇನ್ನು ಸಿಹಿಯನ್ನು ತ್ಯಜಿಸಿದ್ದಾರೆ ಜೀರ್ಣಕ್ರಿಯೆ ಹೆಚ್ಚಾಗುವುದು ಅಲ್ಲದೆ ಹೊಟ್ಟೆ ಮತ್ತು ಕರುಳು ಆರೋಗ್ಯಕರವಾಗಿರುತ್ತದೆ. ಹಲ್ಲುಗಳು ಮತ್ತು ವಸಡುಗಳು ಆರೋಗ್ಯವಾಗಿರಲು ಇದು ಸೂಕ್ತ. ಇನ್ನು ಸಿಹಿ ಅನ್ನುವುದು ನಿದ್ರಾಹೀನತೆಗೆ ಕಾರಣವಾಗುತ್ತದೆ. ರಾತ್ರಿ ವೇಳೆ ಸಿಹಿ ತಿಂದರೆ ಈ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಸಿಹಿ ದೂರವಿದ್ದು ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ ಈ ಮಾಹಿತಿ ನಿಮಗೆ ಇಷ್ಟವಾದರೆ ಶೇರ್ ಮಾಡಿ ಹಾಗೂ ಧನ್ಯವಾದಗಳು.