ಬಾಳೆಹಣ್ಣು ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿಯೊಬ್ಬರು ಬಾಳೆ ಹಣ್ಣಿನ ರುಚಿಯನ್ನು ನೋಡಿರುತ್ತಾರೆ. ಹಾಗೆ ಸೇವನೆಯನ್ನು ಮಾಡುತ್ತಿರುತ್ತಾರೆ. ಬಾಳೆಹಣ್ಣನ್ನು ಇಷ್ಟಪಡದೆ ಇರುವವರು ಬಹಳ ಕಡಿಮೆ. ಇದು ಆಹಾರ ಜೀರ್ಣವಾಗಲು ತುಂಬಾ ಸಹಾಯಕಾರಿ. ತುಂಬಾ ಜನ ಬಾಳೆ ಹಣ್ಣಿನ ಮೂಲ ಭಾರತ ಎಂದುಕೊಂಡಿರುತ್ತಾರೆ. ಆದರೆ ಬಾಳೆಹಣ್ಣಿನ ಮೂಲ ನಮ್ಮ ದೇಶವೇ ಅಲ್ಲ. ಹಾಗಾದರೆ ಬಾಳೆಹಣ್ಣು ಎಲ್ಲಿ ಆಯಿತು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ನೋಡೋಣ ಬನ್ನಿ. ಬಾಳೆಹಣ್ಣನ್ನು ಮೊದಲು ಆಗ್ನೇಯ ಏಷ್ಯಾ ಮತ್ತು ಬೆಳೆಯಲಾಯಿತು.
ಅಲ್ಲಿನ ಅರಣ್ಯಗಳಲ್ಲಿ ಕಾಡುಬಾಳೆ ಬೆಳೆಯುತ್ತಿತ್ತು. ಅನೇಕ ವರ್ಷಗಳ ನಂತರ ಕಾಡು ಬಾಳೆಯನ್ನು ಸೂಕ್ತ ವಿಧಾನದಲ್ಲಿ ಬಳಸಲಾಯಿತು. ಇದರ ಫಲವಾಗಿ ರುಚಿಕರವಾದ ಬಾಳೆಹಣ್ಣು ದೊರೆಯಿತು. ಕಾಲಕಳೆದಂತೆ ಬಾಳೆಹಣ್ಣು ತುಂಬಾ ಜನಪ್ರಿಯತೆ ಪಡೆಯಿತು. ಇದರಿಂದ ಬಾಳೆಹಣ್ಣನ್ನು ವಿಶ್ವದಲ್ಲೆಡೆ ಬೆಳೆಯಲು ಪ್ರಾರಂಭಿಸಲಾಯಿತು. ಬಾಳೆಹಣ್ಣಿನಲ್ಲಿ 20ರಷ್ಟು ಸರ್ಕಾರಿ ಎರಡರಷ್ಟು ಪ್ರೋಟೀನ್ 1.7 ರಷ್ಟು ಜಿಡ್ಡು ಪದಾರ್ಥ ಒಂದರಷ್ಟು ಸೆಲ್ಯುಲೋಸ್ ಗಳು ಇರುತ್ತವೆ.
ಈ ಹಣ್ಣಿನಲ್ಲಿ ಬೀ 1 ಬೀ 2 ವಿಟಮಿನ್ ಗಳು ಇರುತ್ತವೆ. ಈ ಹಣ್ಣನ್ನು ಒಣಗಿಸಿ ಹಿಟ್ಟು ಸಹ ಮಾಡುತ್ತಾರೆ. ಆಫ್ರಿಕಾದ ಜನರು ತಮ್ಮ ಗುಡಿಸಿಲಿಗೆ ಬಾಳೆ ಎಲೆಯನ್ನು ಹಾಕಿ ಮುಚ್ಚುತ್ತಾರೆ. ಬಾಳೆ ಮರವನ್ನು ಒಣಗಿಸಿ ಅದರ ನಾರಿನಿಂದ ಹಗ್ಗವನ್ನು ಸಹ ತಯಾರಿಸುತ್ತಾರೆ. ಬಾಳೆಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಸಣ್ಣಗಿರುವವರು ತೂಕವನ್ನು ಹೆಚ್ಚಿಸಿಕೊಳ್ಳಬಹುದು. ನಿಯಮಿತವಾಗಿ ಬಾಳೆಹಣ್ಣನ್ನು ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ