ಲೋಳೆಸರ (ಆಲೊವೆರಾ-Aloe Vera) ಒಂದು ರಸಭರಿತ ಜಾತಿಯ ಗಿಡ. ಇದರ ಹುಟ್ಟು ಆದದ್ದು ಉತ್ತರ ಆಫ್ರಿಕಾದಲ್ಲಿ. ಈ ಗಿಡವು ಕ್ರಿ.ಶ. ಒಂದನೆಯ ಶತಮಾನದಿಂದಲೂ ಒಂದು ಗಿಡಮೂಲಿಕೆಯ ಸಸ್ಯವೆಂದು ಕರೆಯಲ್ಪಟ್ಟಿದೆ. ಇದರ ರಸವನ್ನು ಊತ ಮತ್ತು ನೋವಿನ ಔಷಧವಾಗಿ ಬಳಸುವುದು ವಾಡಿಕೆಯಲ್ಲಿದೆ. ಈ ಸಸ್ಯವು ಸ್ವಾಭಾವಿಕವಾಗಿ ಹುಟ್ಟದೇ ಇದ್ದರೂ ಸಸ್ಯಗಳ ಗುಂಪಿನಲ್ಲಿ ಬೆಳೆದು ಬಂದಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಇದರ ರಸವನ್ನು ಸೌಂದರ್ಯವರ್ಧಕ ಹಾಗೂ ಔಷಧಕ್ಕಾಗಿ ಬಳಸಬಹುದೆಂದು ಹೇಳಲಾಗಿದೆ. ಇದು ಆಸ್ಫಾಡೆಲೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಪೂದೆ ಹೊದರು. ಸಸ್ಯಶಾಸ್ತ್ರ ಹೆಸರು ;ಅಲೊ ವೆರ(Aloe vera) ನೀರುಲಭ್ಯವಿಲ್ಲದ ಸಮಯದಲ್ಲಿ,ಎಲೆಯದಲ್ಲಿರುವ ಕ್ಲೋರೋಫಿಲ್ ಮಡಿದು,ರೋಡೋಕ್ಸಾನ್ಥಿನ ಅನ್ನುವ ಕೆಂಪುಬಣ್ಣಪದಾರ್ಥಹುಟ್ಟುತ್ತದೆ. ಇದರಿಂದ ಎಲೆಗಳು ಕೆಂಪಾಗಿ ಕಾಣಿಸುತ್ತದೆ ಮತ್ತು ನೀರು ಸಿಕ್ಕಿದಾಗ ಎಲೆಗಳಲ್ಲಿ ಕ್ಲೋರೋಪಿಲ್ ವೃದ್ಧಿ ಅಗುತ್ತದೆ.

ಹೆಚ್ಚು-ಕಡಿಮೆ ಎಲ್ಲಾ ಲೋಳೆಸರ ಗಿಡಗಳು ಇಂತಹ ಲಕ್ಷಣವನ್ನು ಹೊಂದಿರುತ್ತವೆ. ಈ ಗುಣವನ್ನು ಆಪ್ಟಿಕಲ್ ಪ್ರಾಪರ್ಟಿಎಂದು ಕರೆಯಲಾಗಿದೆ. ಇದು ಅನೇಕ ಗ್ರಾಹಕ ಉತ್ಪನ್ನಗಳು ಸೇರಿದಂತೆ ಪಾನೀಯಗಳು, ಚರ್ಮದ ಲೋಷನ್, ಸೌಂದರ್ಯವರ್ಧಕಗಳ, ಹಾಗು ಬಿಸಿಲ ಶಾಖ ನಿರೋದಕ ಮುಲಾಮುಗಳಲ್ಲಿ ಕಂಡುಬರುತ್ತದೆ. ಅಲ್ಲಿ ಸ್ವಲ್ಪ ವೈಜ್ಞಾನಿಕ ಪುರಾವೆ ಪರಿಣಾಮಕಾರಿತ್ವವನ್ನು ಅಥವಾ ಸುರಕ್ಷತೆ ಅಲೋ ವೆರಾ ಸಾರಗಳು ಎರಡೂ ಕಾಸ್ಮೆಟಿಕ್ ಅಥವಾ ಔಷಧೀಯ ಉದ್ದೇಶಗಳಿಗಾಗಿ. ಧನಾತ್ಮಕ ಸಾಕ್ಷಿಗಳನ್ನು ಕಂಡುಹಿಡಿಯುವ ಅಧ್ಯಯನಗಳು ಇತರ ಅಧ್ಯಯನಗಳು ಹೆಚ್ಚಾಗಿ ವಿರೋಧಿಸುತ್ತವೆ.

ಲೋಳೆಸರ ಒಂದು ಬೇರುರಹಿತ ಅಥವಾ ಅತಿ ಚಿಕ್ಕ ಬೇರುಳ್ಳ ಅಂಟು-ರಸಭರಿತ ಗಿಡ. ಇದು ಸುಮಾರು 60ರಿಂದ 100 ಸೆಂ.ಮೀ. 24ರಿಂದ 28 ಇಂಚುಎತ್ತರ ಹಾಗೂ ಪಕ್ಕಪಕ್ಕದಲ್ಲೇ ಹರಡಿಕೊಳ್ಳುವ ಗಿಡ. ಇದರ ಎಲೆಗಳು ದಪ್ಪ ಮತ್ತು ಮೆದುವಾಗಿದ್ದು ಹಸಿರುಬಣ್ಣ ದಿಂದ ಕೂಡಿರುತ್ತದೆ. ತುದಿ ಹಾಗೂ ಬೇರಿನ ಹತ್ತಿರ ಬೆಳ್ಳಗಿರುತ್ತದೆ. ಈ ಎಲೆಯ ಅಂಚು ಗರಗಸದಂತೆ ಅಲ್ಲಲ್ಲಿ ಚೂಪಾಗಿದ್ದು ಬಿಳಿಯ ಹಲ್ಲುಗಳಂತಹ ರಚನೆಯಿರುತ್ತದೆ. ಎಲೆಯ ಮುಳ್ಳುಗಳಲ್ಲಿ ಬೇಸಿಗೆಯಲ್ಲಿ ಹೂ ಬಿಡುವ ಸಾಧ್ಯತೆಗಳು ಇರುತ್ತದೆ. ಆ ಹೂವು ಸುಮಾರು 90ಸೆಂ.ಮೀ. ಉದ್ದವಿದ್ದು ಇದರ ಹಳದಿಗೊಂಚಲು ೨ ರಿಂದ 3 ಸೆಂ.ಮೀ. ಉದ್ದವಿರುತ್ತದೆ. ಲೋಳೆಸರವು ಆರ್ಬಸ್ಕುಲಾರ್ ಮೈಕಾರಿಸಾ ಎಂಬ ಜೈವಿಕ ಚಟುವಟಿಕೆಯ ಮೂಲಕ ಮಣ್ಣಿನ ಪೌಷ್ಟಿಕಾಂಶವನ್ನು ಹೀರಿಕೊಳ್ಳುತ್ತದೆ.

Leave a Reply

Your email address will not be published. Required fields are marked *