ದೇಹಕ್ಕೆ ಬೇಕಾದ ಪೌಷ್ಟಿಕ ಸತ್ವಗಳು ಹೆಚ್ಚಾಗಿರುವ ಹಾಲಿನಲ್ಲಿ ಕ್ಯಾಲ್ಸಿಯಂ ಅಂಶಕ್ಕೆ ಯಾವುದೇ ಕೊರತೆ ಇರುವುದಿಲ್ಲ. ರಾತ್ರಿ ಮಲಗುವ ಮುಂಚೆ ಹಾಲು ಕುಡಿದು ಮಲಗುವುದರಿಂದ ಇನ್ನಷ್ಟು ಉಪಯೋಗಗಳಿವೆ.ಹಾಲು ಒಂದು ಡೈರಿ ಪದಾರ್ಥ. ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಬಹುತೇಕ ಪೌಷ್ಟಿಕ ಸತ್ವಗಳು ಸಿಗುತ್ತವೆ. ನಮ್ಮ ಆಹಾರ ಪದ್ಧತಿಯಲ್ಲಿ ಯಾವುದಾದರೂ ಒಂದು ರೂಪದಲ್ಲಿ ಹಾಲನ್ನು ನಾವು ಬಳಕೆ ಮಾಡುವುದು ತುಂಬಾ ಒಳ್ಳೆಯದು. ಪುಟ್ಟ ಮಕ್ಕಳಾಗಿದ್ದ ಸಂದರ್ಭದಲ್ಲಿ ಮನೆಯಲ್ಲಿನ ನಮ್ಮ ಪೋಷಕರು ನಮಗೆ ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲನ್ನು ಕೊಟ್ಟು ಮಲಗಿಸುತ್ತಿದ್ದರು.

ಆದರೆ ದೊಡ್ಡವರಾಗುತ್ತಿದ್ದಂತೆ ನಾವು ಅಂತಹ ಅಭ್ಯಾಸವನ್ನು ಕೈಬಿಟ್ಟಿದ್ದೇವೆ. ಇದಕ್ಕೆ ಕಾರಣವೇನು ಎಂದು ನೋಡುವುದಾದರೆ, ನಮ್ಮ ಬದಲಾದ ಜೀವನಶೈಲಿ. ಇದರಿಂದ ನಮ್ಮ ಆರೋಗ್ಯ ಕೂಡ ಸಾಕಷ್ಟು ಹದಗೆಡುತ್ತಿದೆ. ಪ್ರಮುಖವಾಗಿ ಹೃದಯದ ಕಾಯಿಲೆಗಳನ್ನು ಅನುಭವಿಸುತ್ತಿರುವ ಜನರು ಈ ನಡುವೆ ಹೆಚ್ಚಾಗುತ್ತಿದ್ದಾರೆ. ರಕ್ತದೊತ್ತಡ ಮತ್ತು ಮಧುಮೇಹ ಇದಕ್ಕೆ ಒಂದು ನೆಪ ಅಷ್ಟೇ. ಒಟ್ಟಾರೆಯಾಗಿ ಜನರು ತಮ್ಮ ಜೀವಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ.

ಹಾಲು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಅಂಶಗಳು, ಪ್ರೋಟೀನ್ ಅಂಶ, ಮೆಗ್ನೀಶಿಯಂ, ಪೊಟಾಶಿಯಂ, ಪಾಸ್ಪರಸ್, ರಿಬಾಫ್ಲವಿನ್ ಇತ್ಯಾದಿ ಅಂಶಗಳು ಸಾಕಷ್ಟು ಸಿಗುತ್ತವೆ. ನಮ್ಮ ಆಹಾರ ಪದ್ಧತಿಯಲ್ಲಿ ಇವುಗಳ ಪಾತ್ರ ಬಹಳ ದೊಡ್ಡದಿರುತ್ತದೆ ಮತ್ತು ದೇಹದ ತೂಕ ಮತ್ತು ಆರೋಗ್ಯವನ್ನು ಸಮತೋಲನ ಮಾಡುವಲ್ಲಿ ಇವುಗಳು ಕೆಲಸ ಮಾಡುತ್ತವೆ. ಹೃದಯದ ಕಾಯಿಲೆ ಮತ್ತು ಪಾರ್ಶ್ವವಾಯು ಎದುರಾಗುವ ಸಮಸ್ಯೆಯನ್ನು ದೂರ ಮಾಡಲು ಸಹ ಹಾಲು ಕೆಲಸ ಮಾಡಲಿದೆ. ಮೂಳೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಹಾಲಿನ ಪಾತ್ರ ತುಂಬ ದೊಡ್ಡದು. ದೀರ್ಘಕಾಲದ ಹಲವಾರು ಕಾಯಿಲೆಗಳು ಹಾಲಿನಿಂದ ಪರಿಹಾರವಾಗುತ್ತದೆ.

Leave a Reply

Your email address will not be published. Required fields are marked *