ಚಿಕನ್ ಬಿರಿಯಾನಿ, ಚಿಕನ್ ಟಿಕ್ಕಾ, ಸುಕ್ಕ, ಕಬಾಬ್ ಹೀಗೆ ವಿವಿಧ ಶೈಲಿಯಲ್ಲಿ ಚಿಕನ್ ಅನ್ನು ಸವಿಯಬಹುದು. ಆದರೆ ಚಿಕನ್ ಅತಿಯಾಗಿ ತಿನ್ನುವುದರಿಂದ ಅನೇಕ ಅಡ್ಡಪರಿಣಾಮಗಳನ್ನು ನಾವುನಾನ್ ವೆಜ್ ಪ್ರಿಯರು ಹೆಚ್ಚು ಇಷ್ಟಪಡುವುದು ಚಿಕನ್ ಅಥವಾ ಕೋಳಿ ಊಟ. ಭೋಜನದ ಜತೆಗೆ ಒಂದು ತುಂಡು ಚಿಕನ್ ಇಲ್ಲ ಎಂದರೆ ಹಲವರಿಗೆ ಅವತ್ತಿನ ಊಟ ಸಮಾಧಾನವೇ ತರುವುದಿಲ್ಲ. ಅಷ್ಟರಮಟ್ಟಿಗೆ ಚಿಕನ್ ಊಟವನ್ನು ಇಷ್ಟಪಡುತ್ತಾರೆ. ಅಲ್ಲದೇ ರುಚಿಯಷ್ಟೇ ಪ್ರೋಟೀನ್ ಹೊಂದಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್ ಬಿರಿಯಾನಿ, ಚಿಕನ್ ಟಿಕ್ಕಾ, ಸುಕ್ಕ, ಕಬಾಬ್ ಹೀಗೆ ವಿವಿಧ ಶೈಲಿಯಲ್ಲಿ ಚಿಕನ್ ಅನ್ನು ಸವಿಯಬಹುದು. ಆದರೆ ಚಿಕನ್ ಅತಿಯಾಗಿ ತಿನ್ನುವುದರಿಂದ ಅನೇಕ ಅಡ್ಡಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತದೆ. ಚಿಕನ್ ತಿಂದರೆ ಏನು ಆಗಲ್ಲ ಎನ್ನುವವರು ಈ ವರದಿಯನ್ನೊಮ್ಮೆ ಓದಿ.
ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಹೆಚ್ಚಳ ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ವಿವರಗಳ ಪ್ರಕಾರ, ಚಿಕನ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅತಿಯಾಗಿ ಚಿಕನ್ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತದೆ.ಕೋಳಿಯಲ್ಲಿ ಹೆಚ್ಚಿನ ಪ್ರಮಾಣದ ಬ್ಯಾಕ್ಟೀರಿಯಾ ಇದ್ದು, ಅದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ಕೋಳಿ ಎದೆಯಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತದೆ. 2014 ರಲ್ಲಿ, ವಿಜ್ಞಾನಿಗಳು ಯುನೈಟೆಡ್ ಸ್ಟೇಟ್ಸ್ನಲ್ಲಿ 300 ಕ್ಕೂ ಹೆಚ್ಚು ಕೋಳಿ ಎದೆಗಳನ್ನು ಪರೀಕ್ಷಿಸಿದ್ದು, ಹೆಚ್ಚಿನ ಕೋಳಿಗಳಲ್ಲಿ ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ.ಲಂಡನ್‌ನ ಲಿಂಡಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ನಿಯಮಿತ ಮಟ್ಟಕ್ಕಿಂತ ಮೀರಿ ಕೋಳಿ ಸೇವಿಸುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಸಸ್ಯಾಹಾರಿಗಳಿಗೆ ಹೋಲಿಸಿದರೆ, ಚಿಕನ್ ತಿನ್ನುವವರಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುತ್ತದೆ. ಆದಾಗ್ಯೂ, ಕಡಿಮೆ ಪ್ರಮಾಣದಲ್ಲಿ ಚಿಕನ್ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ, ಆದರೆ ಹೆಚ್ಚು ಸೇವಿಸುವುದು ಅಪಾಯಕಾರಿ.
ಚಿಕನ್‌ನಲ್ಲಿರುವ ಇ ಕೋಲಿ ಬ್ಯಾಕ್ಟೀರಿಯಾ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕನ್ ಸೊಸೈಟಿ ಫಾರ್ ಮೈಕ್ರೋಬಯಾಲಜಿ ನಡೆಸಿದ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ಸರಿಸುಮಾರು 2500 ಕೋಳಿ ಮಾದರಿಗಳನ್ನು ಪರೀಕ್ಷಿಸಲಾಯಿತು ಮತ್ತು ಅವುಗಳಲ್ಲಿ ಸುಮಾರು 72 ಪ್ರತಿಶತದಷ್ಟು ಇ ಕೋಲಿ ಇರುವುದು ಕಂಡುಬಂದಿದೆ. ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಹೆಚ್ಚು ಕಂಡುಬರುತ್ತದೆ. ಕೋಳಿಯಲ್ಲಿ ನಾಟಿ, ಫಾರಮ್, ಬಾಯ್ಲರ್ ಎಂಬ ವಿಧಗಳಿವೆ. ಬಾಯ್ಲರ್ ಕೋಳಿಯನ್ನು ಅತಿಯಾಗಿ ತಿನ್ನುವುದರಿಂದ ಪುರುಷರಲ್ಲಿ ಬಂಜೆತನ ಪ್ರಮಾಣ ಹೆಚ್ಚಾಗುತ್ತದೆ. ಈ ಕೋಳಿಯಲ್ಲಿನ ರಾಸಾಯನಿಕ ಅಂಶ ಪುರುಷರ ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.