ದಪ್ಪಗಿದ್ದ ವ್ಯಕ್ತಿ ಮೈ ತೂಕ ಇಳಿಸಿಕೊಂಡಾಗ, ತೆಳ್ಳಗೆ ಇದ್ದ ವ್ಯಕ್ತಿ ತುಂಬಾ ದಪ್ಪಗಾದಾಗ, ಗರ್ಭಧಾರಣೆಯ ಸಂದರ್ಭದಲ್ಲಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ಇದು ಚರ್ಮವು ಎಳೆಯಲ್ಪಡುವುದರಿಂದ ಉಂಟಾಗುತ್ತದೆ. ಈ ಸ್ಟ್ರೆಚ್‌ಮಾರ್ಕ್ಸ್ ಅನ್ನು ಆಹಾರಕ್ರಮ ಪಾಲಿಸಿ, ಈ ಮನೆಮದ್ದು ಮಾಡುವುದರ ಮೂಲಕ ಕಡಿಮೆಯಾಗಿಸಬಹುದು ನೋಡಿ.ಇತ್ತೀಚೆಗೆ ಬಾಲಿವುಡ್ ನಟಿ ಜರೀನಾ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋ ಪೋಸ್ಟ್ ಸಕತ್ ಟ್ರೋಲ್‌ಗೆ ಒಳಗಾಗಿದ್ದರು. ಅವರು ಹಾಕಿದ ಫೋಟೊದಲ್ಲಿ ಹೊಟ್ಟೆಯ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸುತ್ತಿತ್ತು. ಅದನ್ನು ನೋಡಿದ ನೆಟ್ಟಿಗರು ಅವರನ್ನು ಬಾಡಿಶೇಮ್ ಮಾಡಿದ್ದರು.ಅದಕ್ಕೆ ಅವರು ‘ನನ್ನ ಹೊಟ್ಟೆಯಲ್ಲಿ ಏಕೆ ಸ್ಟ್ರೆಚ್ ಮಾರ್ಕ್ ಇದೆ ಎಂಬ ಕೆಟ್ಟ ಕುತೂಹಲ ಕೆಲವರಲ್ಲಿದೆ 50 ಕೆಜಿ ತೂಕ ಕಳೆದುಕೊಂಡ ವ್ಯಕ್ತಿಯಲ್ಲಿ ಈ ರೀತಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ಸ್ವಾಭಾವಿಕ, ಈ ಫೋಟೊವನ್ನು ಯಾವುದೇ ಫೋಟೋಶಾಪ್ ಇಲ್ಲದೆ, ಸರ್ಜರಿಯಿಂದ ಸರಿಪಡಿಸದೆ ಹಾಕಲಾಗಿದೆ’ ಎಂದು ಮರು ಉತ್ತರ ನೀಡಿದ್ದರು.
ದಪ್ಪಗಿದ್ದವರು ಬೇಗನೆ ತೂಕ ಕಳೆದುಕೊಂಡರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ಇನ್ನು ಹೆರಿಗೆಯ ಬಳಿಕ ಕೂಡ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ದಪ್ಪಗಾದ ತ್ವಚೆ ಸ್ಟ್ರೆಚ್ ಆಗುತ್ತದೆ, ಅದೇ ತೆಳ್ಳಗಾದ ತ್ವಚೆ ಬಿಗಿಯಾಗುವುದಿಲ್ಲ, ಬೊಜ್ಜು ಕಡಿಮೆಯಾಗುತ್ತಿದ್ದಂತೆ ತ್ವಚೆ ಸಡಿಲವಾಗುತ್ತದೆ, ಸ್ಟ್ರೆಚ್ ಮಾರ್ಕ್ಸ್ ಬೀಳಲಾರಂಭಿಸುವುದು. ಸ್ಟ್ರೆಚ್ ಮಾರ್ಕ್ಸ್ ಹೊಟ್ಟೆ, ತೊಡೆ, ಹಿಂಭಾಗ, ಸ್ತನ, ಕೈ ತೋಳುಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ಹೆಚ್ಚಿನವರಿಗೆ ತೂಕ ಕಳೆದುಕೊಂಡ ಮೇಲೆ ಆಕರ್ಷಕ ಮೈಕಟ್ಟು ಪಡೆದಿದ್ದೇನೆ ಎನ್ನುವ ಖುಷಿಗಿಂತ ಬಿದ್ದ ಸ್ಟ್ರೆಚ್ ಮಾರ್ಕ್ಸ್‌ನಿಂದಾಗಿ ಬೇಸರವಾಗಿರುತ್ತದೆ. ಇನ್ನು ಕೆಲವರಿಗೆ ಸ್ಟ್ರೆಚ್ ಮಾರ್ಕ್ಸ್ ವಂಶಪಾರಂಪರ್ಯವಾಗಿ ಕೂಡ ಬರುತ್ತದೆ. ಇನ್ನು ಅಲರ್ಜಿ, ತ್ವಚೆ ಸಮಸ್ಯೆ, ಅಸ್ತಮಾ, ಸಂಧಿವಾತ ಇವೆಲ್ಲಾ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವುದು
ಸ್ಟ್ರೆಚ್ ಮಾರ್ಕ್ಸ್ ಬೀಳುವುದರಿಂದ ಆರೋಗ್ಯಕ್ಕೇನು ತೊಂದರೆ ಉಂಟಾಗುವುದಿಲ್ಲ, ಆದರೆ ಮಾಡರ್ನ್ ಡ್ರೆಸ್ ಧರಿಸಿದಾಗ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣುವುದರಿಂದ ಕೆಲವರು ಸ್ಟ್ರೆಚ್ ಮಾರ್ಕ್ಸ್ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವೊಂದು ಕೇಸ್‌ಗಳಲ್ಲಿ ತೂಕ ಇಳಿಕೆಯ ನಂತರ ಸ್ಟ್ರೆಚ್ ಮಾರ್ಕ್ಸ್ ಕೆಲವು ದಿನಗಳ ಬಳಿಕ ಮಾಯವಾಗುತ್ತದೆ.ನಮ್ಮ ತ್ವಚೆಯು ಡೆರ್ಮಿಸ್ ಹೊರ ಪದರ ಮತ್ತು ಎಪಿಡೆರ್ಮಿಸ್ ಮಧ್ಯಮ ಪದರ ಹೈಪೊಡರ್ಮಿಸ್ ಆಳವಾದ ಪದರ ಎಂಬ ಮೂರು ಪದರಗಳಿಂದ ನಿರ್ಮಾಣವಾಗಿದೆ. ತೂಕ ಹೆಚ್ಚಾದಾಗ ಡೆರ್ಮಿಸ್ ತ್ವಚೆಯು ಎಳೆಯಲ್ಪಡುತ್ತದೆ, ಮಧ್ಯಮ ಪದರ ಹಾಗೂ ಹೊರ ಪದರದ ನಡುವಿನ ಬೆಸುಗೆ ಕಡಿಮೆಯಾದಾಗ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ದಪ್ಪಗಿದ್ದು ಮೈ ತೂಕ ಕಡಿಮೆಯಾಗುವಾಗ ತ್ವಚೆಯು ಜೋತು ಬೀಳುವುದು, ಇದರಿಂದ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣುವುದು.ಸ್ಟ್ರೆಚ್ ಮಾರ್ಕ್ಸ್ ಅದಾಗಿಯೇ ಹೋಗದಿದ್ದರೆ ಇದನ್ನು ಕೆಲವೊಂದು ನೈಸರ್ಗಿಕ ವಿಧಾನ ಹಾಗೂ ಇನ್ನೂ ಹಠಮಾರಿ ಸ್ಟ್ರೆಚ್ ಮಾರ್ಕ್ಸ್ ಅನ್ನು ಶಸ್ತ್ರ ಚಿಕಿತ್ಸೆ ಮೂಲಕ ಕಡಿಮೆ ಮಾಡಬಹುದಾಗಿದೆ.