ನಮಸ್ತೇ ಸ್ನೇಹಿತರೇ ದೇವರೆಂದರೆ ಸಾಕು ನಮ್ಮಲ್ಲಿ ಭಕ್ತಿ ಭಾವನೆ ಹೆಚ್ಚು ಅದರಲ್ಲೂ ಮುಖ್ಯವಾಗಿ ಆಂತರಿಕವಾಗಿ ಮತ್ತು ಬಾಹ್ಯವಾಗಿ ನಾವು ಶುದ್ಧವಾಗಿ ಇಟ್ಟುಕೊಂಡು ಮನಸ್ಸನ್ನು ನಾವು ದೇವರ ಪೂಜೆಯನ್ನು ಮಾಡಿದರೆ ಖಂಡಿತವಾಗಿ ದೇವರು ಒಲಿಯುತ್ತಾನೆ. ಕೆಲವರು ನಿತ್ಯವೂ ದೇವಸ್ಥಾನಕ್ಕೆ ಹೋಗುತ್ತಾರೆ ತಮ್ಮ ಭಕ್ತಿಯನ್ನು ತೋರಿಸುತ್ತಾರೆ ಇನ್ನು ಕೆಲವರು ಉಪವಾಸ ಮಾಡಿ ತಮ್ಮ ಭಕ್ತಿಯನ್ನು ತೋರಿಸಿ ಕೊಂಡರೆ ಇನ್ನುಳಿದವರು ನದಿಯಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ದೇವರ ದರ್ಶನವನ್ನು ಪಡೆಯುತ್ತಾರೆ. ಹೀಗೆ ತಮ್ಮ ಭಕ್ತಿಯನ್ನು ಹಲವಾರು ರೀತಿಯಲ್ಲಿ ವ್ಯಕ್ತ ಪಡಿಸುತ್ತಾರೆ. ಇನ್ನೂ ಸಾಮಾನ್ಯವಾಗಿ ನಾವು ದೇವರಿಗೆ ಹೋದರೆ ಅಲ್ಲಿ ಸ್ನಾನ ಮಾಡಿ ದೇವರ ದರ್ಶನವನ್ನು ಪಡೆದುಕೊಂಡು ಬರುವುದು ಸಹಜವಾದ ವಾಡಿಕೆ ಆಗಿದೆ. ಇನ್ನು ಕೆಲವರು ತಮ್ಮ ಆಸೆ ಆಕಾಂಕ್ಷೆಗಳು ಈಡೇರಿದ್ದಲ್ಲಿ ಹರಕೆಯನ್ನು ಹೊತ್ತಿಕೊಂಡಿರುತ್ತಾರೆ. ಅದುವೇ ಉರುಳು ಸೇವೆಯನ್ನು ಮಾಡುತ್ತೇನೆ, ಇಷ್ಟು ಕಾಣಿಕೆಯನ್ನು ಸಲ್ಲಿಸುತ್ತೇನೆ.
ಪೂಜೆಯನ್ನು ಮಾಡುತ್ತೇನೆ ಎಂದು ಹಲವಾರು ರೀತಿಯಲ್ಲಿ ಇಷ್ಟಗಳು ನೆರವೇರಿದರೆ ಈ ರೀತಿ ಮಾಡುತ್ತೇವೆ ಅಂತ ದೇವರಲ್ಲಿ ಹರಕೆಯನ್ನು ಕಟ್ಟಿಕೊಂಡಿರುತ್ತಾರೆ. ನಿಮಗೆ ಗೊತ್ತಿರುವ ಹಾಗೆ ದೇವರು ತಮ್ಮ ಭಕ್ತರಿಂದ ಬಯಸುವುದು ಕೇವಲ ಶುದ್ಧವಾದ ಭಕ್ತಿ ವಿಶ್ವಾಸ ಮತ್ತು ನಂಬಿಕೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಒದ್ದೆ ಬಟ್ಟೆಯಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದು ಯಾಕೆ? ಇದಕ್ಕೆ ಕಾರಣವಾದರೂ ಏನೂ? ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಸಾಮಾನ್ಯವಾಗಿ ದೇವಸ್ಥಾನ ಪಕ್ಕದಲ್ಲಿ ಇರುವ ನದಿಗಳಿಗೆ ಹೋಗಿ ಅಲ್ಲಿ ಮಿಂದೆದ್ದು ಹಾಗೇಯೇ ಒದ್ದೆ ಬಟ್ಟೆಯಲ್ಲಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಪಡೆದುಕೊಳ್ಳುತ್ತಾರೆ. ಈ ರೀತಿ ಯಾಕೆ ಮಾಡುತ್ತಾರೆ ಅಂತ ನಮ್ಮ ಶಾಸ್ತ್ರ ವೇದ ಪುರಾಣಗಳಲ್ಲಿ ಉಲ್ಲೇಖವಿದೆ. ಹಾಗಾದರೆ ಬನ್ನಿ ಅದರ ಬಗ್ಗೆ ತಿಳಿಯೋಣ.
ದೇವರ ಬಳಿ ಹೋಗಬೇಕೆಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧತೆಯನ್ನು ಒಳಗೊಂಡಿರಬೇಕು. ಒದ್ದೆ ಬಟ್ಟೆಯನ್ನು ಧರಿಸುವುದರಿಂದ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ. ವ್ಯಕ್ತಿಯು ಅಧಿಕವಾಗಿ ಭಕ್ತಿ ಭಾವನೆಯಲ್ಲಿ ಮುಳಗಿರಲು ಒದ್ದೆ ಬಟ್ಟೆಗಳು ಸಹಾಯ ಮಾಡುತ್ತದೆ. ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶದ ಭಾವನೆಗಳು ತುಂಬುವುದಿಲ್ಲ. ಮನಸ್ಸು ತುಂಬಾನೇ ಏಕಾಗ್ರಚಿತ್ತತೆ ಇಂದ ಕೂಡಿರುತ್ತದೆ. ಇಷ್ಟೊಂದು ಲಾಭಗಳನ್ನು ನಾವು ಒದ್ದೆ ಬಟ್ಟೆಯಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದರಿಂದ ಸಿಗುವ ಲಾಭಗಳಾಗಿವೆ. ಇದು ಧರ್ಮ ಮತ್ತು ಶಾಸ್ತ್ರದ ಪ್ರಕಾರವಾದರೆ, ಇನ್ನು ವೈಜ್ಞಾನಿಕವಾಗಿ ನಾವು ತಿಳಿಯುವುದಾದರೆ ದೇವಸ್ಥಾನದ ಬಳಿ ಇರುವ ನದಿ ಕೊಳ ಹೊಳೆಯಲ್ಲಿ ಸ್ನಾನ ಮಾಡುವುದು ವಾಡಿಕೆ. ನಾವು ದೇವಸ್ಥಾನಕ್ಕೆ ಹೋಗುವಾಗ ಮಡಿ ಎಂದು ಒದ್ದೆ ಬಟ್ಟೆಯನ್ನು ಧರಿಸುವುದರಿಂದ ಅಜೀರ್ಣತೆ ಮತ್ತು ಮಲಬದ್ಧತೆ ನಿವಾರಣೆ ಆಗುತ್ತದೆ. ಹೌದು ನಿಮಗೇನಾದರೂ ಈ ಬಗೆಯ ಸಮಸ್ಯೆಗಳಿದ್ದರೆ ಖಂಡಿತವಾಗಿ ಒದ್ದೆ ಬಟ್ಟೆಯನ್ನು ಧರಿಸುವುದರಿಂದ ಈ ಸಮಸ್ಯೆಗಳು ಮಂಗ ಮಾಯವಾಗುತ್ತವೆ. ಮನಸ್ಸು ಪ್ರಶಾಂತವಾಗಿ ಏಕಾಗ್ರತೆ ಇಂದ ನೆಲೆಸುತ್ತದೆ ಮತ್ತು ಒದ್ದೆ ಬಟ್ಟೆಯನ್ನು ಧರಿಸಿ ದೇವಸ್ಥಾನ ಪ್ರದಕ್ಷಿಣೆ ಹಾಕುವುದರಿಂದ ಆರೋಗ್ಯದಲ್ಲಿ ಚೇತರಿಕೆ ಸುಧಾರಣೆ ಆಗುತ್ತದೆ. ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆಗಳು ಆಗುವುದಿಲ್ಲ. ಹೌದು ಆದ್ದರಿಂದ ದೇವಸ್ಥಾಬಕ್ಕೆ ಒದ್ದೆ ಬಟ್ಟೆಯಲ್ಲಿ ಪ್ರದಕ್ಷಿಣೆ ಹಾಕುವುದು ಒಳಿತು. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.