ಥೈರಾಯ್ಡ್ ಹಾರ್ಮೋನ್ ನಮ್ಮ ದೇಹದ ಕಾರ್ಯಚಟುವಟಿಕೆ ನಿಯಂತ್ರಿಸುವ ಪ್ರಮುಖವಾದ ಹಾರ್ಮೋನ್ ಆಗಿದೆ. ಇದು ನಮ್ಮ ದೇಹದಲ್ಲಿ ಚಯಪಚಯ ಕ್ರಿಯೆ ಸರಿಯಾಗಿ ನಡೆಯಲು ಅವಶ್ಯಕವಾಗಿದೆ. ಇದು ದೇಹದ ಉಷ್ಣತೆ ನಿಯಂತ್ರಿಸುತ್ತದೆ, ಕೊಬ್ಬು ಕರಗಿಸುವ ಕಾರ್ಯ ಮಾಡುತ್ತದೆ. ಈ ಹಾರ್ಮೋನ್ ಉತ್ಪತ್ತಿಯಲ್ಲಿ ವ್ಯತ್ಯಾಸವಾದರೆ ತೊಂದರೆಯಾಗುವುದು. ಥೈರಾಯ್ಡ್ ಸಮಸ್ಯೆ ಎಂಬುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಥೈರಾಯ್ಡ್ ಗ್ರಂಥಿಯಲ್ಲಿ ಹಾರ್ಮೋನ್ಗಳು ಅತೀ ಕಡಿಮೆ ಅಥವಾ ಅತೀ ಹೆಚ್ಚು ಉತ್ಪತ್ತಿಯಾದಾಗ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಕಡಿಮೆ ಉತ್ಪತ್ತಿಯಾದರೆ ಹೈಪೋಥೈರಾಯ್ಡ್, ಅಧಿಕ ಉತ್ಪತ್ತಿಯಾದರೆ ಹೈಪರ್ ಥೈರಾಯ್ಡ್ ಸಮಸ್ಯೆ ಉಂಟಾಗುವುದು.
ಪೋಷಕಾಂಶಗಳ ಕೊರತೆಯಿಂದ ಈ ತೊಂದರೆ ಎದುರಾಗಿದ್ದರೆ, ಇವನ್ನು ಒದಗಿಸುವ ಮೂಲಕ ಸರಿಪಡಿಸಬಹುದು. ನೈಸರ್ಗಿಕ ವಿಧಾನದ ಚಿಕಿತ್ಸೆಗಳು ಸುರಕ್ಷಿತ ಹಾಗೂ ಅಡ್ಡ ಪರಿಣಾಮ ಇಲ್ಲದೇ ಇರುವ ವಿಧಾನಗಳಾಗಿವೆ. ಈಗಾಗಲೇ ಹೈಪೋ ಥೈರಾಯ್ಡಿಸಂ ಚಿಕಿತ್ಸೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದು ಅಷ್ಟೊಂದು ಫಲ ಸಿಗುತ್ತಿಲ್ಲದೇ ಇದ್ದಾಗಲೂ ಈ ವಿಧಾನಗಳನ್ನು ಪ್ರಯತ್ನಿಸಬಹುದು. ಇದೊಂದು ಅತಿ ಸುರಕ್ಷಿತವಾದ ನೈಸರ್ಗಿಕ ಚಿಕಿತ್ಸೆಯಾಗಿದೆ. ಇದರಲ್ಲಿ ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ನಂತಹ ಖನಿಜಗಳಿವೆ ಹಾಗೂ ಇವು ಉರಿಯೂತದ ವಿರುದ್ದ ಹೋರಾಡುತ್ತವೆ. ಈ ಉರಿಯೂತ ಥೈರಾಯ್ಡ್ ತೊಂದರೆಗೆ ಪ್ರಮುಖ ಕಾರಣವಾಗಿದೆ. ಹಸಿಶುಂಠಿಯನ್ನು ಹಾಕಿ ಕುದಿಸಿದ ಟೀ ಕುಡಿಯುವುದೇ ಅತ್ಯಂತ ಸುಲಭ ವಿಧಾನವಾಗಿದೆ. ಇದರ ತೈಲವನ್ನು ಸಹಾ ಸೇವಿಸಬಹುದು. ಸ್ನಾನದ ತೊಟ್ಟೆಯಲ್ಲಿ ಶುಂಠಿಯ ರಸ, ಕೊಬ್ಬರಿ ಎಣ್ಣೆಗಳನ್ನು ಬೆರೆಸಿ ಸ್ನಾನ ಮಾಡುವ ಮೂಲಕವೂ ಪ್ರಯೋಜನವಿದೆ. ಶುಂಠಿಯ ಎಣ್ಣೆಯನ್ನು ಡಿಫ್ಯೂಸರ್ ಉಪಕರಣದಲ್ಲಿ ಹಾಕಿ ಗಾಳಿಯಲ್ಲಿ ಪಸರಿಸುವಂತೆಯೂ ಮಾಡಬಹುದು.
ಎಲ್ಲಾ ಒಣಫಲಗಳಲ್ಲೂ ಒಂದಲ್ಲಾ ಒಂದು ಆರೋಗ್ಯಕರ ಪ್ರಯೋಜನ ಇದ್ದೇ ಇದೆ. ಬಾದಾಮಿಗಳಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಥೈರಾಯ್ಡ್ ತೊಂದರೆಗೆ ಹೆಚ್ಚಿನ ನೆರವು ಒದಗಿಸುತ್ತವೆ. ಇದರಲಿರುವ ಪ್ರೋಟೀನ್, ನಾರಿನ ಅಂಶ ಮತ್ತು ಖನಿಜಗಳು ಮತ್ತು ವಿಶೇಷವಾಗಿ ಸೆಲೆನಿಯಂ ಎಂಬ ಧಾತು ಥೈರಾಯ್ಡ್ ಗ್ರಂಥಿಗೆ ಅತಿ ಉತ್ತಮವಾಗಿದೆ. ಅಲ್ಲದೇ ಬಾದಾಮಿಯಲ್ಲಿ ಮೆಗ್ನೀಶಿಯಂ ಸಹಾ ಹೆಚ್ಚೇ ಇದ್ದು ಹೈಪೋ ಥೈರಾಯ್ಡ್ ತೊಂದರೆ ಇರುವ ವ್ಯಕ್ತಿಗಳಿಗೆ ಹೆಚ್ಚಿನ ನೆರವು ನೀಡುತ್ತದೆ.ಹಾಲು, ಚೀಸ್, ಮೊಸರು ಮೊದಲಾದ ಡೈರಿ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದ ಅಯೋಡಿನ್ ಇದೆ. ಇದು ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಲು ಅಗತ್ಯವಾಗಿ ಬೇಕಾಗಿರುವ ಲವಣವಾಗಿದೆ. ನಿತ್ಯವೂ ಕೊಂಚವಾಗಿ ಡೈರಿ ಉತ್ಪನ್ನಗಳನ್ನು ಸೇವಿಸುವ ಮೂಲಕ ದೇಹದಲ್ಲಿ ವಿಟಮಿನ್ ಮಟ್ಟಗಳು ಅಧಿಕಗೊಳ್ಳುತ್ತವೆ, ಇವೂ ಥೈರಾಯ್ಡ್ ತೊಂದರೆಗಳನ್ನು ಸರಿಪಡಿಸಲು ನೆರವಾಗುತ್ತವೆ.