ಇತ್ತೀಚಿನ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ದೇಹದ ಬೊಜ್ಜು ಕೂಡ ಒಂದು. ಒಮ್ಮೆ ಈ ಬೊಜ್ಜಿನ ಸಮಸ್ಯೆ ನಮ್ಮನ್ನು ಆವರಿಸಿಕೊಂಡರೆ, ಇದರಿಂದ ಹೊರಬರುವುದು ಅಷ್ಟು ಸುಲಭದ ಮಾತಲ್ಲ ಹೀಗಾಗಿ ಪ್ರತಿಯೊಬ್ಬರು ದೇಹದ ಸಮತೋಲನ ಕಾಪಾಡಲು ಬಯಸುವರು. ವ್ಯಾಯಾಮ ಹಾಗೂ ಆರೋಗ್ಯಕಾರಿ ಆಹಾರ ಕ್ರಮ ತುಂಬಾ ಮುಖ್ಯ. ಇವೆಲ್ಲವನ್ನೂ ಶಿಸ್ತಿನಿಂದ ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ದೇಹದ ತೂಕ ಇಳಿಸಿ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಇನ್ನೊಂದು ವಿಚಾರ ನಿಮಗೆ ಗೊತ್ತಿರಲಿ, ಹೊಟ್ಟೆಯ ಬೊಜ್ಜು ಕರಗಿಸಲು ಅವಶ್ಯಕತೆ ಇಲ್ಲದ ಆಹಾರ ಪದ್ಧತಿಗಳನ್ನು ಅನುಸರಿಸುವ ಬದಲು ದೇಹಕ್ಕೆ ಆರೋಗ್ಯಕರ ಎನಿಸುವ ಅತ್ಯುತ್ತಮ ಅಭ್ಯಾಸಗಳನ್ನು ನಡೆಸಿಕೊಂಡು ಹೋಗುವುದು ಒಳ್ಳೆಯದು. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ, ನಮ್ಮ ದಿನನಿತ್ಯ ಅಡುಗೆ ಪದಾರ್ಥಗಳನ್ನು ತಯಾರು ಮಾಡುವಾಗ ಒಗ್ಗರಣೆಯಲ್ಲಿ ಬಳಸುವ ಜೀರಿಗೆ ಕಾಳುಗಳು ಬನ್ನಿ ಈ ಮಸಾಲೆ ಪದಾರ್ಥದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ಓದಿ.
ಜೀರಿಗೆ ಕಾಳುಗಳು ನೋಡಲು ಸಣ್ಣಗೆ ಕಂಡರೂ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಕಾಳಿನಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಇರುವುದರಿಂದ, ಜೇರ್ಣಶಕ್ತಿ ಹೆಚ್ಚಿಸಿ, ನಮ್ಮ ಆರೋಗ್ಯ ಮತ್ತು ದೇಹದ ತೂಕ ಎರಡನ್ನೂ ಸಹ ಇದು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ ಒಂದು ಟೀ ಟೇಬಲ್ ಚಮಚ ಆಗುವಷ್ಟು ಜೀರಿಗೆಯನ್ನು, ಒಂದು ದೊಡ್ಡ ಲೋಟ ನೀರಿನಲ್ಲಿ ಇಡೀ ರಾತ್ರಿ ನೆನೆಹಾಕಿ, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಹೀಗೆ ಮಾಡಿದಾಗ ಹೊಟ್ಟೆಯ ಭಾಗದ ಬೊಜ್ಜು ಕ್ರಮೇಣವಾಗಿ ಸಂಪೂರ್ಣವಾಗಿ ಕರಗಿ ಹೋಗುತ್ತದೆ.
ನಿಮಗೆ ಗೊತ್ತಿರಲಿ, ದೇಹದ ತೂಕ ಕಡಿಮೆ ಮಾಡಬೇಕು ಎಂದರೆ, ನಮ್ಮ ಆಹಾರ ಪದಾರ್ಥಗಳಲ್ಲಿ ಕ್ಯಾಲೋರಿ ಅಂಶಗಳು ಸಾಕಷ್ಟು ಕಡಿಮೆ ಇರಬೇಕು. ಇಂತಹ ಗುಣಲಕ್ಷಣಗಳು ಜೀರಿಗೆ ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಪ್ರಯೋಜನಗಳನ್ನು ಪಡೆಯಬಹುದು. ಮೆಟಬಾಲಿಸಂ ಪ್ರಕ್ರಿಯೆ ಚುರುಕುಗೊಳ್ಳುವಂತೆ ಮಾಡುವ ಜೀರಿಗೆ ನೀರು, ದೇಹದ ಬೊಜ್ಜನ್ನು ಇಳಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವುದು ಸ್ವಲ್ಪ ಕಷ್ಟದ ಕೆಲಸ! ಆದರೆ ಹಸಿವನ್ನು ನಿಯಂತ್ರಣ ಮಾಡಿಕೊಳ್ಳದೆ ಹೋದರೆ, ದೇಹದ ತೂಕ ಇಳಿಸಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಮೊದಲೇ ಹೇಳಿದಾಗೆ ಜೀರಿಗೆ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಇರುತ್ತದೆ, ಜೊತೆಗೆ ಪದೇ ಪದೇ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುತ್ತದೆ.