ಬಾಳೆಹಣ್ಣು ಎಲ್ಲರ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ.ಇನ್ನು ಕೆಂಪು ಬಾಳೆಹಣ್ಣು ಹಳದಿ ಬಾಳೆಹಣ್ಣಿಗಿಂತ ತುಂಬಾನೇ ಒಳ್ಳೆಯದು.ಆರೋಗ್ಯ ತಜ್ಞರ ಪ್ರಕಾರ ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ತುಂಬಾನೇ ಆರೋಗ್ಯಕರವಾಗಿದ್ದು ವಿಭಿನ್ನ ಪೋಷಕಾಂಶಗಳನ್ನು ಹೊಂದಿವೆ. ಕೆಂಪು ಬಾಳೆಹಣ್ಣು ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗಾದರೆ ಇದರ ಮತ್ತಷ್ಟು ಆರೋಗ್ಯ ಪ್ರಯೋಜನದ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವವರು ಕೆಂಪು ಬಾಳೆ ಹಣ್ಣು ಸೇವನೆ ಮಾಡುವುದು ಉತ್ತಮ. ಪೊಟ್ಯಾಶಿಯಂ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖವಾದ ಖನಿಜಗಳನ್ನು ಹೊಂದಿದೆ. ಸಂಶೋಧನೆಗಳ ಪ್ರಕಾರ ಹೆಚ್ಚು ಪೊಟ್ಯಾಷಿಯಂ ಭರಿತ ಆಹಾರವನ್ನು ಸೇವನೆ ಮಾಡುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
ಕೆಂಪು ಬಾಳೆಹಣ್ಣು ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ.ಇನ್ನು ಕೆಂಪು ಬಾಳೆ ಹಣ್ಣಿನಲ್ಲಿ ವಿಟಮಿನ್ ಸಿ ವಿಟಮಿನ್ ಬಿ ಹೆಚ್ಚಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಅಷ್ಟೇ ಅಲ್ಲದೆ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಉತ್ಪಾದನೆಯನ್ನು ಹೆಚ್ಚಿಸಿ ಸೊಂಕಿನ ವಿರುದ್ಧ ಹೊರಡಲು ಸಹಾಯ ಮಾಡುತ್ತದೆ. ಕೆಂಪು ಬಾಳೆ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇದೆ. ಇದು ಫೈಬರ್ ನಲ್ಲಿ ಸಮೃದ್ಧವಾಗಿದ್ದು ಪದೇಪದೇ ಹಸಿ ವಾಗುವುದನ್ನು ಕೆಂಪು ಬಾಳೆಹಣ್ಣು ತಡೆಯುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಚಯಾಪಚಯ ಕ್ರಿಯೆಯನ್ನು ವೇಗ ಗೊಳಿಸುತ್ತದೆ.ಪ್ರತಿದಿನ ಕೆಂಪು ಬಾಳೆಹಣ್ಣು ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಶೇಕಡ 70ರಷ್ಟು ನೀರಿನಂಶ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಕೆಂಪು ಬಾಳೆಹಣ್ಣು ಚರ್ಮವನ್ನು ಹೈಡ್ರಾಟ್ ಮಾಡುತ್ತದೆ. ಕೆಂಪು ಬಾಳೆಹಣ್ಣನ್ನು ಫೇಸ್ ಪ್ಯಾಕ್ ಆಗಿ ಕೂಡ ಬಳಸಬಹುದು.ಬಾಳೆಹಣ್ಣು ಮಲಬದ್ಧತೆ ಸಮಸ್ಯೆಗೆ ತುಂಬಾನೆ ಒಳ್ಳೆಯದು. ಬಾಳೆಹಣ್ಣುಗಳು ಪೈಲ್ಸ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಮಲಗುವ ಮೊದಲು ಕೆಂಪು ಬಾಳೆಹಣ್ಣು ಸೇವನೆ ಮಾಡಿ.