ಮಿತವಾದ ತುಪ್ಪದ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಆದರೆ ತುಪ್ಪದಲ್ಲಿ ಹಸುವಿನ ತುಪ್ಪವನ್ನು ಆಯ್ಕೆ ಮಾಡಬೇಕೋ ಅಥವಾ ಎಮ್ಮೆಯ ತುಪ್ಪವನ್ನು ಅಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ನೀವಿದ್ದೀರಾ. ತುಪ್ಪದ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಅದನ್ನು ಸಿಕ್ಕಾಪಟ್ಟೆ ತಿಂದರೆ ತೊಂದರೆ ತಪ್ಪಿದ್ದಲ್ಲ. ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಕಾರಣಕ್ಕಾಗಿಯೇ ಆಹಾರದಲ್ಲಿ ತುಪ್ಪವನ್ನು ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತುಪ್ಪವು ರುಚಿಯಲ್ಲಿ ಮಾತ್ರವಲ್ಲ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ ಒಂದು ಚಮಚ ತುಪ್ಪ ಸೇವಿಸುವುದರಿಂದ ಮೂಳೆಯು ಗಟ್ಟಿಯಾಗಿರುತ್ತದೆ. ತುಪ್ಪವು ವಿವಿಧ ಪೋಷಕಾಂಶಗಳ ಉಗ್ರಾಣವಾಗಿದೆ. ಇದರಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಯ ಉತ್ತಮ ಮೂಲವಾಗಿದೆ, ಇದು ದೇಹದ ಉತ್ತಮ ಕಾರ್ಯನಿರ್ವಹಣೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ, ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯುತ್ತದೆ, ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಹಸುವಿನ ಹಾಲಿನಲ್ಲಿ A2 ಪ್ರೊಟೀನ್ ಇದೆ. ಇದು ಎಮ್ಮೆಯ ಹಾಲಿನಲ್ಲಿಲ್ಲ.
ಆಯುರ್ವೇದದಲ್ಲಿ ತುಪ್ಪವನ್ನು ಶಕ್ತಿಯುತ ಆಹಾರ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ, ಅನ್ನ, ಚಪಾತಿ, ಸಿಹಿ ತಿಂಡಿಗಳಿಗೆ ತುಪ್ಪವನ್ನು ಸೇರಿಸಿ ತಿನ್ನಲಾಗುತ್ತದೆ. ಮಸಾಲೆಭರಿತ ಪದಾರ್ಥಗಳಲ್ಲೂ ತುಪ್ಪವನ್ನು ಸೇರಿಸಲಾಗುತ್ತದೆ. ಪರಿಷ್ಕರಿಸಿದ ಎಣ್ಣೆಗಳಿಗಿಂತ ತುಪ್ಪದಲ್ಲಿ ಅಡುಗೆ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ತುಪ್ಪವು ಆರೋಗ್ಯಕರ ಕೊಬ್ಬುಗಳು ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತುಪ್ಪವು ಹಾರ್ಮೋನ್ಗಳನ್ನು ಸಮತೋಲನಗೊಳಿಸಲು ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ತುಪ್ಪವನ್ನು ಮಿತಿಮೀರಿ ಸೇವಿಸಿದರೆ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ ಜೊತೆಗೆ ಕೊಬ್ಬು ಹೆಚ್ಚುತ್ತದೆ.
ತುಪ್ಪವು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಚರ್ಮ, ಕೂದಲು, ಮೆದುಳಿಗೂ ಒಳ್ಳೆಯದು. ಚರ್ಮವನ್ನು ಹೊಳೆಯುವಂತೆ ಮಾಡುವುದು, ಮೂಳೆಗಳನ್ನು ಬಲಪಡಿಸುವುದು ಇತ್ಯಾದಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಪ್ಪವನ್ನು ಎಮ್ಮೆ ಅಥವಾ ಹಸುವಿನ ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ ಹಸು ಅಥವಾ ಎಮ್ಮೆ ಹಾಲಿನಿಂದ ತಯಾರಿಸಲಾದ ತುಪ್ಪದಲ್ಲಿ ಯಾವ ತುಪ್ಪ ಉತ್ತಮ ಎಂಬ ಪ್ರಶ್ನೆಗೆ ಖ್ಯಾತ ಪೌಷ್ಟಿಕತಜ್ಞ ಸುಮನ್ ಉತ್ತರಿಸಿದ್ದಾರೆ.ಹಸುವಿನ ತುಪ್ಪವು ಹಳದಿ ಬಣ್ಣದ್ದಾಗಿದೆ ಮತ್ತು ಹಲವಾರು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಕೊಬ್ಬು ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ಮಕ್ಕಳು ಮತ್ತು ವಯಸ್ಕರಲ್ಲಿ ತೂಕವನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.