ನಿತ್ಯವೂ ಸಂಸಾರದಲ್ಲಿ ಕಲಹ ಇದ್ದರೆ ಹೀಗೆ ಪರಿಹಾರ ಮಾಡಿಕೊಳ್ಳಿ. ಮನೆಯಲ್ಲಿ ನಿತ್ಯವೂ ಸಾಂಸಾರಿಕ ಕಲಹವೇ ಹಾಗಾದರೆ ಅದಕ್ಕೆ ಕಾರಣ ಮತ್ತು ಪರಿಹಾರ ಏನು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮನೆಯಲ್ಲಿ ಗಂಡ ಹೆಂಡತಿ ಮಧ್ಯೆ ಸಾಮರಸ್ಯ ಇದ್ದು ಮನೆಯ ಯಜಮಾನಿಯಿಂದ ನೆಮ್ಮದಿ ನೆಲೆಸಿದರೆ ಎಲ್ಲದರಲ್ಲಿಯೂ ಗೆಲುವು ಅಥವಾ ಎಲ್ಲಾ ಸವಾಲನ್ನು ಎದುರಿಸಲು ಬಲ ಅದೇ ರೀತಿ ತನ್ನ ಮನೆ ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಎಲ್ಲರನ್ನೂ ಬಿಟ್ಟು ಬಂದ ಹೆಣ್ಣಿಗೆ ಗಂಡನ ಪ್ರೀತಿ ಕೂಡ ಅಷ್ಟೇ ಮುಖ್ಯ ಆದರೆ ಕೆಲವೊಮ್ಮೆ ಸರಿಯಾದ ಜಾತಕ ವಿಶ್ಲೇಷಣೆ ಮಾಡದ ಮದುವೆ ಅಥವಾ ಪ್ರೀತಿಸಿ ಮಾಡಿಕೊಂಡ ವಿವಾಹದಲ್ಲಿ ಗಂಡ ಹೆಂಡತಿಯ ಮಧ್ಯೆ ನಿತ್ಯವೂ ಜಗಳ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ ಮನೆಯಲ್ಲಿ ಸದಾಕಾಲ ಅವಾಚ್ಯ ಶಬ್ದಗಳ ಬೈಗುಳ ಕೇಳಿ ಬರುತ್ತದೆ ಯಾಕಾಗಿ ಈ ರೀತಿಯ ಪದಗಳನ್ನು ಅನುಭವಿಸಬೇಕಾಗಿ ಬರುತ್ತದೆ ಎಂಬ ಬಗ್ಗೆ ಕೆಲವು ಮುಖ್ಯ ಸಲಹೆಗಳನ್ನು ಇಲ್ಲಿ ನೀಡಲಾಗಿದೆ ಬನ್ನಿ ನೋಡೋಣ.
ವಧು ವರರ ಜಾತಕ ನೋಡುವಾಗ ಗುಣ ಕೂಟ ಆಗಿ ಬಂದರೆ ಸಾಕು ಎಂದು ಕೆಲವು ಜ್ಯೋತಿಷಿಗಳು ವಿವಾಹ ನಿಶ್ಚಯ ಮಾಡಿ ಕೊಡುತ್ತಾರೆ ಲಗ್ನ ಕುಂಡಲಿ ಆಗಲಿ ನವಾಂಶ ಕುಂಡಲಿ ಆಗಲಿ ವಧು ವರರ ಜಾತಕದ ದೋಷಗಳ ಮೇಲೆ ಪರಮರಿಸುವುದಿಲ್ಲ ಹೀಗೆ ಮದುವೆ ಆದರೆ ನಂತರ ಒಂದಿಲ್ಲ ಒಂದು ರಗಳೆ ಶುರು ಆಗುತ್ತದೆ ಮದುವೆ ವಿಚಾರದಲ್ಲಿ ಜನ್ಮ ಜಾತಕದಲ್ಲಿ ಗಂಡು ಹೆಣ್ಣು ಇಬ್ಬರೂ ಲಗ್ನದಿಂದ ಸಪ್ತಮ ಸ್ಥಾನ ಬಹಳ ಮುಖ್ಯವಾದದ್ದು ಆನಂತರ ಇಬ್ಬರಿಗೂ ಪಂಚಮ ಸ್ಥಾನ ಹಾಗೂ ಹೆಣ್ಣಿಗೆ ಲಗ್ನದ ಅಷ್ಟಮ ಸ್ಥಾನ ಕೂಡ ಮುಖ್ಯವಾದದ್ದು. ಇವೆಲ್ಲವನ್ನೂ ಸರಿಯಾಗಿ ಪ್ರಾರಂಭಿಸಿ ಆನಂತರ ನವಾಂಶ ಕುಂಡಲಿ ಹೇಗಿದೆ ಎನ್ನುವುದನ್ನು ಗಮನಿಸಬೇಕು ಇಲ್ಲಿ ಕೆಲವು ನಕ್ಷತ್ರ ಅಥವಾ ರಾಶಿಯ ಹೆಸರನ್ನು ಹೇಳಲು ಹೋಗುವುದಿಲ್ಲ ಆದರೆ ಅವುಗಳ ಸಮಸ್ಯೆ ತಿಳಿಸುತ್ತೇವೆ ನೋಡಿ.
ಏನೇ ಮಾಡಿದರೂ ಅವರ ಅವಮಾನ ಪರಿಹರಿಸಲು ಸಾಧ್ಯವೇ ಇರುವುದಿಲ್ಲ ಕೆಲವರಿಗೆ ಅದು ಯಾವ ಪರಿ ಸಿಟ್ಟು ಎಂದರೆ ಈ ಸಮಯದಲ್ಲಿ ಏನು ಮಾಡುತ್ತಾ ಇದ್ದೇವೆ ಎನ್ನುವ ಪರಿವು ಇರುವುದಿಲ್ಲ ಹಠದ ಸ್ವಭಾವ ಇರುವ ನಕ್ಷತ್ರಗಳು ಯಾರೊಂದಿಗೂ ಹೊಂದಾಣಿಕೆ ಮಾಡಿ ಕೊಳ್ಳುವುದಿಲ್ಲ ಇವು ಆಯಾ ಲಗ್ನ ಅಥವಾ ನಕ್ಷತ್ರ ಅಥವಾ ಗ್ರಹ ಸ್ಥಿತಿಯಲ್ಲಿ ಜನಿಸಿದವರ ಜೀವದ ಸ್ವಭಾವ ಆಗಿರುತ್ತದೆ ಅದನ್ನು ಬದಲಿಸಲು ಕಷ್ಟ ಸಾಧ್ಯ ಇನ್ನೂ ಸಪ್ತಮ ಸ್ಥಾನದಲ್ಲಿ ರಾಹು ಅಥವಾ ಕೇತು ಅಥವಾ ಕುಜ ಅಥವಾ ಶನಿ ಇದ್ದಲ್ಲಿ ಆಯಾ ಗ್ರಹಕ್ಕೆ ತಕ್ಕಂತೆ ಫಲ ಅನುಭವಿಸಬೇಕು ಜಾತಕದಲ್ಲಿ ರಾಹು ಗುರು ರವಿ ಶುಕ್ರ ಇಂತಹ ಗ್ರಹ ಸಹಯೋಗ ಇಂದಲೂ ಸಮಸ್ಯೆಗಳು ಎದುರಾಗುತ್ತವೆ ಇಂತಹ ದೋಷಗಳನ್ನು ಪರಿಹರಿಸಲು ವಿವಾಹದ ಪೂರ್ವದಲ್ಲಿ ಕೆಲವು ಶಾಂತಿ ಹವನ ಪೂಜೆ ಅಥವಾ ಜಪ ಮಾಡಿಕೊಳ್ಳಬೇಕು.