ಹಲ್ಲು ಹುಳುಕು ಎಂಬುದು ಸಾಮಾನ್ಯವಾಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆ ಇದಾಗಿದೆ. ಆದರೆ ಕೆಲವರು ನಮ್ಮ ಹಲ್ಲಿನ ಕ್ವಾಲಿಟಿಯೇ ಸರಿ ಇಲ್ಲ ಎಂದು ಹೇಳಿ ನುಣಿಚಿಕೊಳ್ಳುತ್ತಾರೆ. ಆದರೆ ನಿಮ್ಮ ಅಭ್ಯಾಸಗಳೇ ನಿಮ್ಮೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ. ಹಾಗೆಯೇ ಹಲ್ಲಿನ ಹುಳುಕಿಗೂ ಕೂಡ ನೀವೇ ಮೂಲ ಕಾರಣರಾಗಿರುತ್ತೀರಿ. ಹಲ್ಲು ಹುಳುಕು ಎಂಬುದು ಸಾಮಾನ್ಯವಾಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆ ಇದಾಗಿದೆ. ಆದರೆ ಕೆಲವರು ನಮ್ಮ ಹಲ್ಲಿನ ಕ್ವಾಲಿಟಿಯೇ ಸರಿ ಇಲ್ಲ ಎಂದು ಹೇಳಿ ನುಣಿಚಿಕೊಳ್ಳುತ್ತಾರೆ.
ಆದರೆ ನಿಮ್ಮ ಅಭ್ಯಾಸಗಳೇ ನಿಮ್ಮೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ. ಹಾಗೆಯೇ ಹಲ್ಲಿನ ಹುಳುಕಿಗೂ ಕೂಡ ನೀವೇ ಮೂಲ ಕಾರಣರಾಗಿರುತ್ತೀರಿ. ಹಲ್ಲು ದೇಹದ ಒಂದು ಪ್ರಮುಖವಾದ ಅಂಗ. ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗುತ್ತದೆ. ವ್ಯಕ್ತಿ ಸತ್ತಾಗಲೂ, ದೇಹ ಮಣ್ಣಿನಲ್ಲಿ ಕೊಳೆತಾಗಲೂ ಹಲ್ಲು ಮಾತ್ರ ಏನೂ ಆಗದೆ ಉಳಿದುಕೊಳ್ಳುತ್ತದೆ. ಆದರೆ ಹುಳುಕು ಎಂಬುದು ಒಂದೆರಡು ವರ್ಷಗಳಲ್ಲಿ ಆ ಗಟ್ಟಿ ಹಲ್ಲನ್ನು ಕರಗಿಸುವ ಶಕ್ತಿಯನ್ನು ಹೊಂಡಿದೆ.
ಹಲ್ಲು ಮೂಡುವ ಸಮಯದಿಂದಲೇ ವಾತಾವರಣದಲ್ಲಿರುವ ಸೂಕ್ಷ್ಮಾಣುಗಳು ಮಗುವಿನ ಬಾಯಿ ಹಾಗೂ ಜೊಲ್ಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಸದಾ ಬಾಯಿಯಲ್ಲಿ ಬಾಯಿಯಲ್ಲಿ ಸಿಹಿ, ಸಕ್ಕರೆ ಅಂಶ, ಆಮ್ಲ ಪದಾರ್ಥಗಳ ಅಂಶ, ಅಂಟು, ಹುಳಿ ಇಡುತ್ತೀರೋ ಆಗ ಬಾಯಿಯ ಪಿ.ಎಚ್ ಮಟ್ಟ ಕುಸಿಯುತ್ತದೆ ಆಗ ಹುಳುಕು ಆರಂಭವಾಗುತ್ತದೆ. ಸಾಮಾನ್ಯದಿಂದ ಕಡಿಮೆ ಆದರೆ ಬಾಯಿಯ ಆಮ್ಲೀಯ ಗುಣ ಹೆಚ್ಚುತ್ತದೆ. ಇದು ಕಡಿಮೆಯಾದಷ್ಟೂ ಆಮ್ಲೀಯ ಗುಣ ಹೆಚ್ಚುತ್ತದೆ. ರೋಗಾಣು ಜಾಗೃತಿಗೊಳ್ಳುತ್ತದೆ ಮತ್ತು ತನ್ನ ಕಾರ್ಯವಾದ ಹುಳುಕು ಹಿಡಿಯುವುದನ್ನು ಶುರು ಮಾಡುತ್ತದೆ. ಇದು ಹೆಚ್ಚಾಗಿ ಬಳಸುವ ದವಡೆ ಹಲ್ಲುಗಳನ್ನೇ ಹಾಳುಗೆಡವುತ್ತದೆ.
ಏಕೆಂದರೆ ದವಡೆ ಹಲ್ಲಿನ ಸುತ್ತಳತೆ ಹೆಚ್ಚು. ಅಂಟು ಪದಾರ್ಥ ಕೂರಲು ಅನುಕೂಲವಾಗಿರುವಂತಹ ವಿಸ್ತೃತ ಜಾಗ. ಕಾರಣಗಳು ಹಲವಾರಿದ್ದರೂ ಮುಖ್ಯವಾದ ಕಾರಣವೇ ಹಲ್ಲಿನ ಬಗೆಗಿರುವ ನಿರ್ಲಕ್ಷ್ಯ ಮನೋಭಾವ. ಈ ಸಮಸ್ಯೆ ಮಹಿಳೆಯರಿಗೆ ಹೆಚ್ಚಾಗಿ ಕಂಡು ಬರುತ್ತದೆ. ಹಲ್ಲುಗಳನ್ನು ತೆಗೆಸಲು ಹುಳುಕೇ ಪ್ರಮುಖ ಕಾರಣ, ಹುಳುಕು ಹಲ್ಲು ಆಗಲು ಕಾರಣ ಬಹಳಷ್ಟಿದ್ದರೂ ರೋಗ ಬಾರದಂತೆ, ಬಂದರೂ ಹೆಚ್ಚಾಗದಂತೆ ಜಾಗ್ರತೆ ವಹಿಸುವ ಜವಾಬ್ದಾರಿ ನಮ್ಮ ಮೇಲಿದೆ. ರೋಗದ ಉಪಶಮನಕ್ಕಿಂತ ಅದನ್ನು ಬಾರದಂತೆ ತಡೆಗಟ್ಟುವುದೇ ಉತ್ತಮ ಮಾರ್ಗ. ಒಂದು ದವಡೆ ಹಲ್ಲು ಹುಳುಕಿನಿಂದ ಹಾಳಾದರೆ ಜಗಿಯುವ ಸಾಮರ್ಥ್ಯ ಶೇ 50 ಕಡಿಮೆಯಾದಂತೆ.