ಹಿಂದೂ ಸಂಪ್ರದಾಯದಲ್ಲಿ ದೇವರಿಗೆ ವಿಶೇಷ ಸ್ಥಾನಮಾನ ಇದೆ ಎಲ್ಲರೂ ಕೂಡ ದೇವರಲ್ಲಿ ನಂಬಿಕೆ ಇಟ್ಟು ಭಯ ಭಕ್ತಿಯಿಂದ ಪೂಜೆ ಮಾಡುತ್ತಾರೆ ಹಾಗೇನೇ ಮನೆಯಲ್ಲಿ ದೇವರಿಗೆ ಪೂಜೆ ಮಾಡುವುದು ಮನೆ ದೇವರಿಗೆ ದೇವಸ್ಥಾನಗಳಿಗೆ ಹೋಗುವ ಪದ್ದತಿ ಇದೆ ಹಾಗೇನೇ ದೂರದಲ್ಲಿ ಇರುವ ತೀರ್ಥಕ್ಷೇತ್ರಗಳಿಗೆ ಹೋಗುತ್ತೇವೆ ಹೀಗೆ ತೀರ್ಥಕ್ಷೇತ್ರಗಳಿಗೆ ಹೋದಾಗ ಅಲ್ಲಿ ಇರುವ ಪುಣ್ಯಕ್ಷೇತ್ರದಲ್ಲಿ ಅಂದರೆ ಕಲ್ಯಾಣಿಯಲ್ಲಿ ಸ್ನಾನ ಮಾಡಬೇಕು ಉದಾಹರಣೆಗೆ ತಿರುಪತಿ ವೆಂಕಟೇಶ ಸ್ವಾಮಿಗೆ ಹೋಗುತ್ತೇವೆ ಅಲ್ಲಿ ಇರುವ ಕೋಟಿತಿರ್ಥದಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುವುದರಿಂದ ಆ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ನಮಗೆ ಸಿಗುತ್ತದೆ ಆದ್ದರಿಂದ ಮೊದಲು ದೇವರ ದರ್ಶನ ಮಾಡುವುದಕ್ಕಿಂತ ತೀರ್ಥಸ್ನಾನ ಮಾಡಿದ ಮೇಲೆ ದೇವರ ದರ್ಶನ ಮಾಡುವುದರಿಂದ ಅದರ ಸಂಪೂರ್ಣ ಫಲ ನಿಮಗೆ ಸಿಗುತ್ತದೆ ಹಾಗೇನೇ ದೂರದಲ್ಲಿರುವ ತೀರ್ಥ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೇನೇ ತಿರುಪತಿ ವೆಂಕಟೇಶ ಹೀಗೆ ಈ ಎಲ್ಲ ದೇವಸ್ಥಾನಗಳಲ್ಲಿ ತೀರ್ಥಸ್ಥಳ ಇರುತ್ತವೆ ಆದರೆ ಹತ್ತಿರ ಇರುವ ನಮ್ಮ ಮನೆ ದೇವರ ದೇವಸ್ಥಾನದಲ್ಲಿ ಯಾವುದೇ ತೀರ್ಥಸ್ಥಳ ಇರುವುದಿಲ್ಲ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಸ್ನಾನ ಮಾಡಿಕೊಂಡು ಹೋಗಬೇಕು ಆದರೆ ತೀರ್ಥಸ್ಥಳ ಅಂದರೆ ನದಿ ಕೊಳ ಅಥವಾ ತೀರ್ಥ ಸ್ಥಳ ಇರುವ ದೇವಸ್ಥಾನದಲ್ಲಿ ಮಾತ್ರ ನೀವು ಸ್ನಾನ ಮಾಡಿಕೊಂಡೆ ದೇವರ ದರ್ಶನಕ್ಕೆ ಹೋಗಬೇಕು.
ಹಾಗೇನೇ ಇನ್ನು ಒಂದು ವಿಷಯ ಏನೆಂದರೆ ನಾವು ಯಾವುದೇ ಒಂದು ದೇವಸ್ಥಾನ ಅಂದರೆ ಶಿವನ ದೇವಸ್ಥಾನ ಆಂಜನೇಯ ಸ್ವಾಮಿ ದೇವಸ್ಥಾನ ಸಾಯಿಬಾಬಾ ದೇವಸ್ಥಾನ ಹೀಗೆ ಯಾವುದೇ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವರ ದರ್ಶನ ಮಾಡಿ ಪೂಜೆ ಮಾಡಿಸಿದ ನಂತರ ನೇರವಾಗಿ ನಿಮ್ಮ ಮನೆಗೆ ಬನ್ನಿ ಇದನ್ನು ಹೊರತು ಪಡಿಸಿ ಬೇರೆ ಯಾರೇ ಸಂಬಂಧಿಕರು ಅಥವಾ ಸ್ನೇಹಿತರ ಮನೆಗೆ ಹೋಗಬಾರದು ಕಾರಣ ನೀವು ದೇವರಿಗೆ ಪೂಜೆ ಮಾಡಿ ದೇವರಿಗೆ ಬೇಡಿಕೊಂಡಾಗ ನಿಮ್ಮ ಕೋರಿಕೆಯನ್ನು ಆ ಭಗವಂತ ಅನುಗ್ರಹಿಸಿರುತ್ತಾನೆ ಆಗ ನೀವು ನಿಮ್ಮ ಮನೆಗೆ ಬರದೆ ಬೇರೆಯವರ ಮನೆಗೆ ಹೋದರೆ ಆ ಒಂದು ಫಲ ಅವರ ಮನೆಗೆ ಹೋಗುತ್ತದೆ ಇದರಿಂದ ಅವರಿಗೆ ಒಳ್ಳೆಯದು ಆಗುತ್ತದೆ ಆದ್ದರಿಂದ ನೀವು ಯಾವುದೇ ದೇವಸ್ಥಾನಕ್ಕೆ ಹೋದಾಗ ನೇರವಾಗಿ ನಿಮ್ಮ ಮನೆಗೆ ಬನ್ನಿ ಹೀಗೆ ಮನೆಗೆ ಬರುವುದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಹೊರಗೆ ಹೋಗಿ ಸಕಾರಾತ್ಮಕ ಶಕ್ತಿ ಬರುತ್ತದೆ ದೇವರ ದರ್ಶನ ಮಾಡಿ ಬಂದಂತಹ ಪ್ರಶಾಂತವಾದ ಮನಸ್ಸು ಮುಖದ ತೇಜಸ್ಸು ಮನೆಯಲ್ಲಿ ಹರಡುತ್ತದೆ ಹಾಗೇನೇ ದೇವಸ್ಥಾನದಿಂದ ಬಂದ ತಕ್ಷಣ ಕೈಕಾಲು ತೊಳೆಯಬಾರದು ನೇರವಾಗಿ ದೇವರ ಮನೆಗೆ ಹೋಗಿ ಮನೆಯಲ್ಲಿ ಓಡಾಡಿ 5 ನಿಮಿಷ ಒಂದು ಸ್ಥಳದಲ್ಲಿ ಕುಳಿತ ನಂತರ ಕೈಕಾಲು ತೊಳೆಯಬೇಕು ಹೀಗೆ ಮಾಡುವುದರಿಂದ ನಿಮಗೆ ಒಂದು ಒಳ್ಳೆಯ ಫಲ ಸಿಗುತ್ತದೆ ಒಂದುವೇಳೆ ನೀವು ದೇವಸ್ಥಾನದಿಂದ ಬಂದ ತಕ್ಷಣ ಕೈಕಾಲು ತೊಳೆಯುವುದರಿಂದ ನಿಮಗೆ ದೇವರ ಅನುಗ್ರಹ ದೊರೆಯುವುದಿಲ್ಲ ಬದಲಾಗಿ ದೇವರ ಕೃಪೆಗೆ ನೀವು ಪಾತ್ರರಾಗುವುದಿಲ್ಲ ಆದ್ದರಿಂದ ಈ ಒಂದು ವಿಶೇಷ ನಿಯಮಗಳನ್ನು ನೀವು ಪಾಲಿಸುವುದು ತುಂಬಾ ಒಳ್ಳೆಯದು ನೀವು ಕೂಡ ಈ ಒಂದು ನಿಯಮಗಳನ್ನು ಪಾಲಿಸಿ.