ಧರ್ಮಗ್ರಂಥಗಳು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯ ಮಹಿಳೆಯನ್ನು ಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ಯಾವ ಮನೆಯಲ್ಲಿ ಹೆಣ್ಣಿಗೆ ಗೌರವ ಸಿಗುವುದಿಲ್ಲವೋ ಆ ಮನೆಯವರಿಗೆ ಲಕ್ಷ್ಮಿಯ ಆಶೀರ್ವಾದವೂ ಸಿಗಲಾರದು ಎಂಬ ಮಾತಿದೆ. ಅಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮಹಿಳೆಯರು ಮಾಡುವ ಕೆಲಸವು ಕುಟುಂಬದ ಸಂತೋಷದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅದು ಸಕಾರಾತ್ಮಕವಾಗಿಯೂ ಇರಬಹುದು, ನಕಾರಾತ್ಮಕವೂ ಆಗಿರಬಹುದು. ಆದರೆ, ನಾವಿಂದು ಶಾಸ್ತ್ರದ ಪ್ರಕಾರ ಮಹಿಳೆಯರು ಮಾಡುವ, ಕೆಲವು ತಪ್ಪುಗಳು ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಹೇಗೆ ಕದಡುತ್ತದೆ ಎಂಬುದನ್ನು ನೋಡೋಣ. ವಾಸ್ತು ಶಾಸ್ತ್ರದ ಪ್ರಕಾರ, ಮಹಿಳೆಯರು ಮಾಡುವ ಯಾವ ತಪ್ಪುಗಳು ಸಂತೋಷ ಮತ್ತು ಸಮೃದ್ಧಿಯ ಕೊರತೆಗೆ ಕಾರಣವಾಗುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡುಗೆ ಮನೆಯನ್ನು ಮನೆಯ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮಹಿಳೆಯರು ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಥವಾ ಒಲೆಯ ಮೇಲೆ ಅನಾವಶ್ಯಕ ಸಾಮಾನುಗಳನ್ನು ಇಟ್ಟರೆ ಮನೆಯಿಂದ ಲಕ್ಷ್ಮಿಯು ದೂರವಾಗುತ್ತಾಳೆ. ಆದ್ದರಿಂದ, ಅಡುಗೆ ಮಾಡುವ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳುವುದರ ಜೊತೆಗೆ, ಮಹಿಳೆಯರು ಒಲೆಯ ಮೇಲೆ ಅಥವಾ ಹತ್ತಿರ ಒಡೆದ ಪಾತ್ರೆಗಳನ್ನು ಇಡಬಾರದು. ಇದರಿಂದ ಲಕ್ಷ್ಮಿ ದೇವಿ ಸಂತೋಷಳಾಗುತ್ತಾಳೆ.ಈ ಬಗ್ಗೆ ನಿಮ್ಮ ಅಜ್ಜ-ಅಜ್ಜಿಯಂದಿರು ಹೇಳುವುದನ್ನು ಕೇಳಿರಬಹುದು. ಪೊರಕೆಯನ್ನು ಎಲ್ಲೆರೆದುರು ಕಾಣುವಂತೆ ಇಡಬಾರದು. ಅದರಲ್ಲೂ ಸೂರ್ಯಾಸ್ತದ ನಂತರ ಪೊರಕೆಯನ್ನು ಎಂದಿಗೂ ಮನೆಯ ಅಂಗಳದಲ್ಲಿ ಅಥವಾ ತೆರೆದ ಸ್ಥಳದಲ್ಲಿ ಇಡಬಾರದು. ಈ ಬಗ್ಗೆ ಮಹಿಳೆಯರು ವಿಶೇಷ ಕಾಳಜಿ ವಹಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಸಂಜೆಯ ನಂತರ ಪೊರಕೆಯನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಬಚ್ಚಿಟ್ಟು ಯಾವುದೋ ಮೂಲೆಯಲ್ಲಿ ಇಡಬೇಕು. ಇಲ್ಲದಿದ್ದರೆ, ಪ್ರತಿಯೊಬ್ಬರಿಗೂ ಕಾಣುವ ಸ್ಥಳದಲ್ಲಿ ಪೊರಕೆಯನ್ನು ಇಡುವುದರಿಂದ, ಅದು ಮನೆಯ ಸಂತೋಷ ಮತ್ತು ಸಮೃದ್ಧಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ಕುಟುಂಬ ಸದಸ್ಯರ ಮೇಲೂ ಸಮಸ್ಯೆಗಳ ಛಾಯೆ ಆವರಿಸತೊಡಗುತ್ತದೆ.
ಹೌದು, ಇದು ಸಾಂಪ್ರದಾಯಿಕ ಮನೆಯಗಳಲ್ಲಿ ಜಾರಿಯಿರುವ ನಿಯಮಗಳಲ್ಲಿ ಒಂದಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮಹಿಳೆಯರು ಹೊಸ್ತಿಲಲ್ಲಿ ಕುಳಿತುಕೊಳ್ಳಬಾರದು. ಇದು ಕೇವಲ ಮಹಿಳೆಯರಿಗಷ್ಟೇ ಸೀಮಿತವಲ್ಲ, ಹೊಸ್ತಿಲನ್ನು ಲಕ್ಷ್ಮಿ ದೇವಿಗೆ ಹೋಲಿಸಲಾಗುತ್ತದೆ. ಆದ್ದರಿಂದ ಅದರ ಮೇಲೆ ಕುಳಿತುಕೊಳ್ಳುವುದು, ಆ ಜಾಗದಲ್ಲಿ ಕೂತು ಆಹಾರ ಸೇವಿಸುವುದು ಎರಡೂ ತಪ್ಪು. ಇಂತಹ ಮನೆಯಲ್ಲಿ ಲಕ್ಷ್ಮಿ ಮಾತೆ ಎಂದಿಗೂ ನೆಲೆಸುವುದಿಲ್ಲ. ಧರ್ಮಗ್ರಂಥಗಳಲ್ಲಿ ದಾನ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ, ಆದರೆ ಸೂರ್ಯಾಸ್ತದ ನಂತರ ಯಾರಾದರೂ ನಿಮ್ಮ ಮನೆಗೆ ಭಿಕ್ಷೆ ಕೇಳಲು ಬಂದರೆ, ಅವರಿಗೆ ಎಂದಿಗೂ ಹಾಲು, ಮೊಸರು, ಬೆಳ್ಳುಳ್ಳಿ, ಈರುಳ್ಳಿಯಂತಹ ವಸ್ತುಗಳನ್ನು ದಾನದಲ್ಲಿ ನೀಡಬಾರದು. ಏಕೆಂದರೆ ಸಂಜೆ ದಾನ ಮಾಡಿದ ಈ ವಸ್ತುಗಳಿಂದ ನಿಮ್ಮ ಜಾತಕದಲ್ಲಿ ಚಂದ್ರ ಮತ್ತು ಶುಕ್ರನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದರೊಂದಿಗೆ ಕುಟುಂಬದ ಸದಸ್ಯರಿಗೆ ಸಮಸ್ಯೆಗಳನ್ನು ಎದುರಿಸುವುದರ ಜೊತೆಗೆ ಅವರ ಮನಸ್ಸು ಕೂಡ ಚಂಚಲವಾಗಬಹುದು. ಆದ್ದರಿಂದ ಮಹಿಳೆಯರು ದಾನ ನೀಡುವಾಗ ಜಾಗರೂಕರಾಗಿರಿ.