ನಮಸ್ತೆ ಪ್ರಿಯ ಓದುಗರೇ, ಅರಿಶಿಣದ ನೀರಿನಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಮನೆಗೆ ಇರುವ ಮತ್ತು ನಿಮ್ಮ ಜೀವನದಲ್ಲಿ ಇರುವ ಸಕಲ ದಾರಿದ್ರ್ಯ ದೋಷ ದೂರವಾಗುತ್ತದೆ. ನೀವು 3-4 ವರ್ಷಗಳಿಂದ ದಾರಿದ್ರ್ಯದಲ್ಲಿ ಮುಳುಗಿದ್ದೀರಿ ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ನಷ್ಟ ಆಗುತ್ತಿದೆ ಮನಸ್ಸಿಗೆ ನೆಮ್ಮದಿ ಇಲ್ಲ ಮನೆಯಲ್ಲಿ ಯಾವಾಗ್ಲೂ ಕಿರಿ ಕಿರಿ ಆಗುತ್ತಿದೆ ಮನೆಯಲ್ಲಿ ನೆಮ್ಮದಿ ಇಲ್ಲ ಮನೆಯಿಂದ ಹೊರಗಡೆ ಕಾಲಿಟ್ಟರೆ ಕೂಡ ನೆಮ್ಮದಿ ಇಲ್ಲ. ಈ ರೀತಿ ಅನುಭವ ಮಾಡುವವರು ಅರಿಶಿಣದ ನೀರಿನಿಂದ ಈ ಚಿಕ್ಕ ಕೆಲಸವನ್ನು ಮಾಡಿ. ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಇದ್ದರೂ ಕೂಡ ಈ ಕೆಲಸವನ್ನು ಮಾಡಬೇಕು ಅಂತ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಅರಿಶಿಣದ ನೀರಿಗೆ ವಿಶೇಷವಾದ ಶಕ್ತಿ ಇದೆ. ಅರಿಶಿಣದ ನೀರನ್ನು ಪ್ರತಿ ಪೂಜೆಗೆ ಬಳಕೆ ಮಾಡುತ್ತೇವೆ ಅದೇ ರೀತಿಯಾಗಿ ಮನೆಯಲ್ಲಿ ಈ ರೀತಿಯಾಗಿ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದರೆ ದಾರಿದ್ರ್ಯ ದೇವತೆ ಮನೆಯಲ್ಲಿ ನೆಲೆಯಾಗಿ ನಿಂತಿದ್ದಾರೆ ಅಂತ ಅರ್ಥವಾಗುತ್ತದೆ.
ಯಾವೆಲ್ಲ ಸಮಸ್ಯೆಗಳು ಬರುತ್ತವೆ ಅಂತ ನೋಡುವುದಾದರೆ ಮನೆಯಲ್ಲಿ ನೀವು ಊಟಕ್ಕೆ ಸಿದ್ದ ಮಾಡಿದ ಅಡುಗೆ ಪದೇ ಪದೇ ಕೆಟ್ಟು ಹೋಗುತ್ತಿದ್ದರೆ ಅನ್ನ ಹಲಸಿ ಹೋಗುವುದು ಅನ್ನವು ಕೆಂಪು ಅಥವಾ ಹಳದಿ ಬಣ್ಣಕ್ಕೆ ತಿರುಗುವುದು ನೀವು ವಿಶೇಷವಾಗಿ ತಿಳಿದುಕೊಳ್ಳಬೇಕು ಮನೆಯಲ್ಲಿ ದಾರಿದ್ರ್ಯ ದೋಷ ಕಾಡುತ್ತಿದೆ ಅಂತ ಅರ್ಥ ನೀಡುತ್ತದೆ. ಮನೆಗೆ ಕೆಟ್ಟ ದೋಷಗಳು ಅಂಟಿಕೊಂಡಿದೆ ಅಂತ ಸೂಚಿಸುತ್ತದೆ. ಇನ್ನೂ ಎರಡನೆಯದು ಮನೆಯ ಯಜಮಾನ ಅಥವಾ ಯಜಮಾನಿ ಮನೆಯಲ್ಲಿ ಇರುವ ಸದಸ್ಯರಿಗೆ ಆಗಿರಬಹುದು ಯಾವಾಗ್ಲೂ ಕೂಡ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅಮವಾಸ್ಯೆ ಹುಣ್ಣಿಮೆ ಬರುತ್ತಿದ್ದಂತೆ ಅನಾರೋಗ್ಯ ಪೀಡಿಸುವುದು ಆರೋಗ್ಯ ಹದಗೆಡುವುದು ಮನೆಯಲ್ಲಿ ದಾರಿದ್ರ್ಯ ಹೆಚ್ಚು ಆಗಿದೆ ಎಂಬ ಅರ್ಥವನ್ನು ನೀಡುತ್ತದೆ ಮಕ್ಕಳು ಹೇಳಿದ ಮಾತುಗಳನ್ನು ಕೇಳುವುದಿಲ್ಲ. ಮಕ್ಕಳು ಮನೆಯಲ್ಲಿ ಹೆಚ್ಚಾಗಿ ಹಠವನ್ನು ಮಾಡುತ್ತಾರೆ ಮನೆಯ ಯಜಮಾನಿ ಯಾವಾಗ್ಲೂ ಕೂಡ ಕಣ್ಣೀರಿನಲ್ಲಿ ಮುಳುಗಿರುತ್ತಾರೆ ಅಂಥಹ ಸಮಸ್ಯೆಗಳು ಇದ್ದರೆ ಮನೆಯಲ್ಲಿ
ದಾರಿದ್ರ್ಯ ಲಕ್ಷ್ಮೀ ತಾಂಡವ ಆಡುತ್ತಿದ್ದಾರೆ ಅಂತ ಅರ್ಥವನ್ನು ಸೂಚಿಸುತ್ತದೆ ಮನೆಯಲ್ಲಿ ಒಂದು ದಿನವೂ ನೆಮ್ಮದಿ ಇರುವುದಿಲ್ಲ ಯಾವಾಗ್ಲೂ ದುಡ್ಡು ಕಾಸಿಗೆ ಕೊರತೆ ಅನ್ನುವುದು ಇರುತ್ತದೆ ಹಣಕಾಸು ಎಷ್ಟೇ ಸಂಪಾದನೆ ಮಾಡಿದರು ಕೂಡ ನಿಮ್ಮ ಅವಶ್ಯಕತೆಗೆ ಆ ದುಡ್ಡು ಉಪಯೋಗ ಬರುವುದಿಲ್ಲ ಕಷ್ಟಗಳು ಹೆಚ್ಚುತ್ತದೆ ಈ ಎಲ್ಲ ಸಮಸ್ಯೆಗಳು ಇದ್ದರೆ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮೀ ಶಕ್ತಿಯು ಹೆಚ್ಚಾಗಿದೆ ಅಂತ ಸೂಚನೆ ನೀಡುತ್ತದೆ ಈ ಎಲ್ಲ ಕಷ್ಟಗಳು ಕಿರಿಕಿರಿಗಳು ಮನೆಯಿಂದ ತೊಲಗಬೇಕು ವಿಶೇಷವಾಗಿ ಲಕ್ಷ್ಮೀದೇವಿ ಪ್ರವೇಶ ಮನೆಗೆ ಆಗಲೇಬೇಕು ಅನ್ನುವುದು ಆದರೆ ನೀವು ಪ್ರತಿ ಅಮವಾಸ್ಯೆ ಅಥವ ಹುಣ್ಣಿಮೆ ದಿನ ಅರಿಶಿಣ ನೀರಿನಿಂದ ಮಾಡಬೇಕು. ಏನು ಮಾಡಬೇಕು ಅಂದ್ರೆ ಅರಿಶಿಣದ ನೀರನ್ನು ಒಂದು ಲೋಟ ಅಥವಾ ಪಾತ್ರೆಯಲ್ಲಿ ತುಂಬಿ ಇಟ್ಟುಕೊಂಡು ದೇವರ ಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು ನಿಮ್ಮ ಮನೆಯ ದೇವರ ಹೆಸರು ಹೇಳುತ್ತಾ ಪೂಜೆಯನ್ನು ಮಾಡಬೇಕು.
ಮನೆಯ ಪ್ರತಿ ಗೋಡೆಗೆ ಆ ನೀರನ್ನು ಚೆಲ್ಲಬೇಕು ಅರಿಶಿಣದ ನೀರನ್ನು ಎಲ್ಲಕಡೆಗೆ ಪ್ರೋಕ್ಷಣೆ ಮಾಡುವುದರಿಂದ ವಿಶೇಷವಾಗಿ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳ ಜೊತೆಗೆ ದಾರಿದ್ರ್ಯ ದೋಷಗಳು ಕಳೆದು ಹೋಗುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಹುಟ್ಟುತ್ತವೆ. ಮನೆಯಲ್ಲಿ ಗಂಡ ಹೆಂಡತಿ ಜಗಳ ಮನಸ್ತಾಪ ನಿಲ್ಲುತ್ತದೆ ಗಂಡ ಹೆಂಡತಿ ಚೆನ್ನಾಗಿ ಇರುತ್ತೀರಿ. ಮನೆಯಲ್ಲಿ ಎಲ್ಲರು ಆರೋಗ್ಯವಾಗಿ ಇರುತ್ತೀರಿ. ಹಣಕಾಸಿನ ತೊಂದರೆಗಳು ದೂರವಾಗುತ್ತದೆ. ನೀವು ಮಾಡುವ ಪ್ರತಿ ಕೆಲಸದಲ್ಲಿ ದೈವ ಬಲದೊಂದಿಗೆ ಗುರುಬಲ ಹೆಚ್ಚುತ್ತದೆ ಎಲ್ಲ ರೀತಿಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ಅರಿಶಿಣ ನೀರನ್ನು ತಯಾರಿ ಮಾಡಿಕೊಂಡು ಮನೆ ದೇವರ ಸಂಕಲ್ಪ ಮಾಡಿಕೊಂಡು ಪೂಜೆ ಮಾಡಿರುವ ಅರಿಶಿಣದ ನೀರನ್ನು ಮನೆಯ ಎಲ್ಲ ಮೂಲೆಗೆ ಪ್ರೋಕ್ಷಣೆ ಮಾಡಬೇಕು. ಇದರಿಂದ ಮಹಾಲಕ್ಷ್ಮಿ ದೇವಿ ಪ್ರವೇಶ ಆಗುತ್ತದೆ. ನಿಮಗೆ ಇದರಿಂದ ತುಂಬಾನೇ ಒಳಿತು ಆಗುತ್ತದೆ.