ಟೊಮೆಟೊವನ್ನು ಪ್ರತಿದಿನ ಅಡುಗೆಗೆ ಬಳಸುತ್ತೇವೆ. ಟೊಮೆಟೊ ಅಡುಗೆಗಂತೂ ರುಚಿ ನೀಡುವುದಂತು ನಿಜ. ಅಡುಗೆಗೆ ಮಾತ್ರವಲ್ಲದೆ ಟೊಮೇಟೊವನ್ನು ಸೌಂದರ್ಯಕ್ಕೆ ವೃದ್ಧಿಸಲು ಬಳಸುತ್ತೇವೆ. ಆದರೆ ಟೊಮೆಟೊ ಅಲರ್ಜಿ ಹೊಂದಿರುವವರಿಗೆ ಟೊಮೆಟೊ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಕೆಲವರಿಗೆ ಟೊಮೆಟೊವನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಅತಿಯಾಗಿ ಪರಿಣಾಮ ಉಂಟಾಗುತ್ತದೆ. ಜೀರ್ಣಕಾರಿ ತೊಂದರೆಗಳಿಂದ ಹಿಡಿದು ಅತಿಸಾರ ತೊಂದರೆಗಳು ಮೂತ್ರಪಿಂಡ ತೊಂದರೆಗಳು ಮತ್ತು ದೇಹದ ನೋವುಗಳ ವರೆಗೆ ಟೊಮೊಟೊವನ್ನು ಅತಿಯಾದ ಸೇವನೆಯು ನಿಮ್ಮ ದೇಹಕ್ಕೆ ಕೆಲವು ಗಂಭೀರ ಆರೋಗ್ಯವನ್ನು ಉಂಟುಮಾಡುತ್ತದೆ. ಹಾಗಾದರೆ ಟೊಮ್ಯಾಟೋವನ್ನು ಯಾವೆಲ್ಲ ಸಮಸ್ಯೆ ಇರುವವರು ಸೇವಿಸಬಾರದು ಎನ್ನುವುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. .
ನಿಮಗೆ ತಿಳಿದಿರುವಂತೆ ಟೊಮ್ಯಾಟೋ ಆಮ್ಲಿಯ ಸ್ವಭಾವವನ್ನು ಹೊಂದಿರುತ್ತದೆ. ಆದ್ದರಿಂದ ಹೆಚ್ಚು ಟೊಮೇಟೊವನ್ನು ತಿಂದ ನಂತರ ಹೆಚ್ಚುವರಿ ಗ್ಯಾಸ್ಟಿಕ್ ಆಮ್ಲದಿಂದಾಗಿ ಎದೆ ಉರಿ ಅಥವಾ ಆಸಿಡ್ ರಿಪ್ಲೇಸ್ ಅನ್ನು ಅನುಭವಿಸುವ ಸಾಧ್ಯತೆ ಇದೆ. ಒಂದು ವೇಳೆ ನೀವು ಜೀರ್ಣಕಾರಿ ಸಮಸ್ಯೆ ಇದ್ದರೆ ನೀವು ಟೊಮ್ಯಾಟೋಗಳನ್ನು ಸೇವಿಸಬಾರದು. ಇನ್ನು ಟೊಮ್ಯಾಟೋದಲ್ಲಿರುವ ಹಿಂಸೆತ್ ಎಂಬ ಸಂಯುಕ್ತವೂ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನೀವು ಟೊಮೇಟೊಗಳ ಅಲರ್ಜಿಯನ್ನು ಹೊಂದಿದ್ದರೆ ನಿಮ್ಮ ಬಾಯಿ ನಾಲಿಗೆ ಮತ್ತು ಮುಖ ಓದಿಕೊಳ್ಳುತ್ತದೆ. ಸೀನು ಮತ್ತು ಗಂಟಲಿನ ಸೌಕರ್ಯವನ್ನು ಅನುಭವಿಸಬಹುದು. ನಿಮಗೆ ಅಲರ್ಜಿಯಾಗಿದ್ದರೆ ಟೊಮ್ಯಾಟೋ ಹಣ್ಣನ್ನು ಸ್ಪರ್ಶಿಸುವುದರಿಂದ ಚರ್ಮದಲ್ಲಿ ತೀವ್ರವಾಗಿ ತುರಿಕೆ ಮತ್ತು ಊದಿಕೊಳ್ಳುವಿಕೆ ಕಾಣಿಸಿಕೊಳ್ಳುತ್ತದೆ.