ಸಕ್ಕರೆಯ ಸವಿಯನ್ನು ನೀಡಬಲ್ಲ ಜೇನುತುಪ್ಪ ನೈವೇದ್ಯಕ್ಕೆ ಸಮಾನ ಎಂದು ಹೇಳಲಾಗುತ್ತದೆ. ಈ ಜೇನುತುಪ್ಪವನ್ನು ವರ್ಷಗಳವರೆಗೆ ಕೆಡದಂತೆ ಜೋಪಾನವಾಗಿ ಇಟ್ಟುಕೊಂಡು ನಮ್ಮ ಅಗತ್ಯಕ್ಕೆ ಬಳಸಬಹುದು. ಇದಕ್ಕಾಗಿ ನಮ್ಮ ಹಿರಿಯರು ಎಂದು ಕೆಡದ ಆಹಾರ ಎಂದು ಕರೆದಿರುವುದು. ಇನ್ನು ಇದರಲ್ಲಿ ಅಡಗಿರುವ ಆರೋಗ್ಯದ ವಿಷಯಕ್ಕೆ ಬಂದರೆ ಪೌಷ್ಟಿಕ ಸತ್ವಗಳು ಖನಿಜಾಂಶಗಳು ಜೊತೆಗೆ ಔಷಧೀಯ ಗುಣಲಕ್ಷಣಗಳು ಯಥೇಚ್ಛವಾಗಿ ಕಂಡುಬರುವುದರಿಂದ ಸಣ್ಣಪುಟ್ಟ ಸಮಸ್ಯೆಗಳಿಂದ ಹಿಡಿದು ದೀರ್ಘ ಕಾಲದವರೆಗೆ ಕಾಡುವಂತಹ ಸಮಸ್ಯೆಗಳು ಕೂಡ ನಿಯಂತ್ರಿಸುವಲ್ಲಿ ಇವುಗಳ ಪಾತ್ರ ಮರೆಯುವ ಹಾಗಿಲ್ಲ ಇನ್ನು ಮುಖ್ಯವಾಗಿ ಜೇನುತುಪ್ಪದಲ್ಲಿ ಅನೇಕ ರೀತಿ ರೋಗಗಳ ವಿರುದ್ಧ ಹೋರಾಡುವ ಆಂಟಿ ಇಂಫಾರ್ಮೆಂಟರಿ ಆಕ್ಸಿಡೆಂಟ್ ಆಂಟಿ ಮೈಕ್ರೋ ಬಿ ಎಲ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ.
ಇದರಿಂದಾಗಿ ದೇಹದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ಹೃದಯದಲ್ಲಿ ಇರುವ ಒತ್ತಡ ಕಡಿಮೆಯಾಗುವುದರಿಂದ ಹೃದಯ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಇದರಂತೆ ಇನ್ನೂ ಹಲವು ಆರೋಗ್ಯದ ಲಾಭಗಳು ಜೇನುತುಪ್ಪದಿಂದ ಸಿಗಲಿದೆ. ಹಾಗಾದರೆ ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ನಿಮಗೆ ಗೊತ್ತಿರಲಿ ಜೇನುತುಪ್ಪದಲ್ಲಿ ಅಮೈನೋ ಆಮ್ಲಗಳು ಖನಿಜಾಂಶಗಳು ವಿಟಮಿನ್ ಅಂಶಗಳು ಕಾರ್ಬೋಹೈಡ್ರೇಟ್ಸ್ ಅಂಶಗಳು ಯಥೇಚ್ಛವಾಗಿ ಕಂಡುಬರುವುದರಿಂದ ಇವು ವಾತಾವರಣದಲ್ಲಿ ಏರುಪೇರಾಗಿ ಉಂಟಾಗಿರುವ ಕೆಮ್ಮು ಕಫದ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ನಿಮಗೂ ಕೂಡ ಕೆಮ್ಮು ಹಾಗೂ ಕಫದ ಸಮಸ್ಯೆಗಳು ಇದ್ದರೆ ಎರಡು ಮೂರು ತುಳಸಿ ಎಲೆಗಳ ಜೊತೆಗೆ ಒಂದು ಚಮಚ ಜೇನುತುಪ್ಪವನ್ನು ಕೂಡ ಜೊತೆಗೆ ಸೇವಿಸುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.